SHIVAMOGGA | MALENADUTODAY NEWS | ಮಲೆನಾಡು ಟುಡೆ | Mar 10, 2025
ಐಸ್‌ಕ್ರೀಂ ಎಂದರೆ ಯಾರಿಗೆ ಇಷ್ಟ ಇರಲ್ಲ ಹೇಳಿ. ಮಕ್ಕಳಿಂದ ಹಿಡಿದು ಮುದುಕರವರೆಗೂ ಐಸ್‌ಕ್ರೀಂ ಅಂದರೆ ಪಂಚ ಪ್ರಾಣ ಅದನ್ನು ಎಲ್ಲರು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಆದರೆ ಅದೇ ಐಸ್‌ಕ್ರೀಂ ನಲ್ಲಿ ನಮಗೆ ಬೇಡವಾದ ಅಸಹ್ಯಹುಟ್ಟಿಸುವ ಅಂಶಗಳು ಕಂಡು ಬಂದರೆ ಐಸ್ ಕ್ರೀಂ ಪ್ರಿಯರಿಗೆ ಹೇಗಾಗಬಹುದು ಹೇಳಿ. ಇಲ್ಲಿಯೂ ಸಹ ಅಂತಹುದ್ದೇ ಒಂದು ಘಟನೆ ನಡೆದಿದೆ. ಅದೇನೆಂದರೆ ಐಸ್‌ಕ್ರೀಂ ಅನ್ನು ತಿನ್ನಲು ತೆಗೆದುಕೊಂಡ ವ್ಯಕ್ತಿಗೆ ಐಸ್‌ಕ್ರೀಂ ನಲ್ಲಿ ಸತ್ತ ಹಾಗು ಕಾಣಿಸಿಕೊಂಡಿದೆ. ಆ ಪೋಟೋವನ್ನು ಆ ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅದರ ಫೋಟೋ ಈಗ ಎಲ್ಲಡೆ ವೈರಲ್ ಆಗಿದೆ.
ಘಟನೆ ನಡೆದಿದ್ದು ಎಲ್ಲಿ
ಈ ಘಟನೆ ನಡೆದಿರುವುದು ಥೈಲ್ಯಾಂಡ್‌ನಲ್ಲಿ ನಡೆದಿದ್ದು ಥೈಲ್ಯಾಂಡ್‌ನ ಪ್ರದೇಶದ ರೇಬನ್ ನಕ್ಲೆಂಗ್‌ಬೂನ್ ಎಂಬ ವ್ಯಕ್ತಿ ಅಂಗಡಿಯಲ್ಲಿ ಕಪ್ಪು ಬೀನ್ ಐಸ್ ಕ್ರೀಮ್ ಬಾರ್ ತೆಗೆದುಕೊಂಡಿದ್ದರು. ನಂತರ ಅವರು ಅದರ ಕವರ್ ತೆಗೆದು ತಿನ್ನಲು ಹೊರಟಾಗ ಐಸ್‌ಕ್ರೀಂ ಒಳಗೆ ಸತ್ತ ಹಾವು ಕಾಣಿಸಿಕೊಂಡಿದೆ. ಇದರಿಂದ ಭಯಭೀತರಾದ ಅವರು ಇದರ ಫೋಟೋಗಳನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ‘ನಿಮ್ಮ ಕಣ್ಣುಗಳು ತುಂಬಾ ಮುದ್ದಾಗಿವೆ. ನೀನು ಹೀಗೆ ಹೇಗೆ ಸಾಯಲು ಸಾಧ್ಯ? ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ.
SUMMARY | A man who took it to eat ice cream was found dead and found dead in ice cream
KEYWORDS | ice cream, dead snake, viral photos,