SHIVAMOGGA | MALENADUTODAY NEWS | ಮಲೆನಾಡು ಟುಡೆ | Feb 24, 2025
ಶಿವಮೊಗ್ಗ | ರಾಜ್ಯದಲ್ಲಿ ಐದು ಎಕರೆ ಭೂಮಿ ಹೊಂದಿರುವ ಸಣ್ಣ ರೈತರಿಗೆ ಉಚಿತವಾಗಿ ಗೊಬ್ಬರ ಹಾಗೂ ಸರ್ಕಾರಿ ಶಾಲೆಗಳಿಗೆ ವಾರದ 6 ದಿನ ಉಚಿತ ಹಾಲು ಹಣ್ಣು ಮೊಟ್ಟೆ ಕೊಡುವುದು ಸೇರಿದಂತೆ ಇನ್ನಿತರೇ ಸಾರ್ವಜನಿಕರ ಬೇಡಿಕೆಯನ್ನು ಈಡೇರಿಸಿ ಎಂದು ಕರ್ನಾಟಕ ರಾಜ್ಯ ಮಾಜಿ ಶಾಸಕರ ವೇದಿಕೆಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದೇವೆ ಎಂದು ಕರ್ನಾಟಕ ರಾಜ್ಯ ಮಾಜಿ ಶಾಸಕರ ವೇದಿಕೆ ಅಧ್ಯಕ್ಷ ಹೆಚ್ ಎಂ ಚಂದ್ರಶೇಖರಪ್ಪ ತಿಳಿಸಿದರು.
ಸೋಮವಾರ ಶಿವಮೊಗ್ಗದ ಪತ್ರಿಕಾ ಭವನದಲ್ಲಿ ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು ರಾಜಕಾರಣಿಗಳು ರಾಜ್ಯದಲ್ಲಿ ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸೂಚಿಸುತ್ತಾರೆ. ಆದರೆ ಅಧಿಕಾರಿಗಳು ಅಭಿವೃದ್ದಿ ವಿಚಾರದಲ್ಲಿ ಹೆಚ್ಚಿನ ಒಲವು ತೋರುವುದಿಲ್ಲ. ಇದರ ಕುರಿತಾಗಿಯೂ ಸಹ ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದ್ದೇನೆ. ಅದಕ್ಕೆ ಅವರು ಈ ವಿಚಾರದಲ್ಲಿ ಈ ರೀತಿ ಆಗುವುದಿಲ್ಲ ಎಂಬ ಭರವಸೆಯನ್ನು ನೀಡಿದ್ದಾರೆ. ರಾಜ್ಯದ ಜನರ ಹಿತಕ್ಕಾಗಿ ನಾವು ಈ ಬೇಡಿಕೆಗಳನ್ನು ಸರ್ಕಾರದ ಮುಂದೆ ಇಡುತ್ತಿದ್ದೇವೆ ಎಂದರು.
ಕರ್ನಾಟಕ ರಾಜ್ಯ ಮಾಜಿ ಶಾಸಕರ ವೇದಿಕೆಯ ಬೇಡಿಕೆಗಳೇನು
- ರಾಜ್ಯದಲ್ಲಿ ಹಾಳಾದ ರಸ್ತೆಗಳಿಗೆ ಡಾಂಬರೀಕರಿಸುವುದು.
- ಪೌರ ಕಾರ್ಮಿಕರು ಬೆಳಗ್ಗೆ ಬೇಗ ಆಗಮಿಸಿ ಸ್ವಚ್ಚತಾ ಕಾರ್ಯದಲ್ಲಿ ತೊಡಗಿಕೊಂಡು ರಾಜ್ಯದ ಸ್ವಚ್ಚತೆಗೆ ಕಾರ್ಯೋನ್ಮುಖರಾದ ಪೌರ ಕಾರ್ಮಿಕರಿಗೆ ಸರ್ಕಾರದ ವತಿಯಿಂದ ಉಪಹಾರ ವ್ಯವಸ್ಥೆ ಮಾಡುವುದು.
- ಸರ್ಕಾರಿ ನೌಕರರಿಗೆ ಹಾಗೂ ಪೋಲೀಸ್ ಸಿಬ್ಬಂದಿಗೆ ವಸತಿ ಗೃಹ ನಿರ್ಮಾಣ ಮಾಡುವುದು.
- ರಾಜ್ಯಾದಂತ ಸರ್ಕಾರಿ ಶಾಲೆಗಳನ್ನು ನವೀಕರಿಸುವುದು, ಶಾಲಾ ಮಕ್ಕಳಿಗೆ ಉತ್ತಮ ದರ್ಜೆಯ ಸಮ ವಸ್ತ್ರ ನೀಡುವುದು ಹಾಗೂ ವಾರಕ್ಕೆ 6 ದಿವಸ ಉಚಿತ ಹಾಲು, ಬಾಳೇಹಣ್ಣು ಮತ್ತು ಮೊಟ್ಟೆ ವಿತರಿಸಲು ಮನವಿ.
- ರಾಜ್ಯದ ಐದು ಎಕರೆ ಹೊಂದಿರುವ ಸಣ್ಣ ರೈತರಿಗೆ ಉಚಿತವಾಗಿ ಗೊಬ್ಬರ, ಔಷದ ಹಾಗೂ ಸಬ್ಸಿಡಿ ದರದಲ್ಲಿ ಪೆಟ್ರೋಲ್ ವ್ಯವಸ್ಥೆ ಮಾಡುವುದು, ರೈತರ ಸರ್ಕಾರದ ಪ್ರತಿ ಯೋಜನೆಗಳು ಸಮರ್ಪಕವಾಗಿ ಕಾರ್ಯಗತವಾಗಬೇಕೆಂದು ಮನವಿ.
- ನವದೆಹಲಿಯ ಕರ್ನಾಟಕ ಭವನದಲ್ಲಿ ಶಾಸಕರಿಗೆ ಹಾಗೂ ಮಾಜಿ ಶಾಸಕರಿಗೆ ಸರ್ಕಾರಿ ದರದಲ್ಲಿ ಕಾರಿನ ವ್ಯವಸ್ಥೆ ಮಾಡುವುದು
- ಪತ್ರಕರ್ತರ ಮಾಸಾಶನವನ್ನು ರೂ. 12 ಸಾವಿರದಿಂದ ಗಳಿಂದ 15 ಸಾವಿರಗಳಿಗೆ ಗಳಿಗೆ ನಿಗದಿ ಮಾಡಲು ಮನವಿ.
- ಆಶ್ರಯ ಯೋಜನೆಯಡಿಯಲ್ಲಿ 20′ X 30′ ನಿವೇಶನಗಳನ್ನು ಸರ್ಕಾರದ ವತಿಯಿಂದ ಮಂಜೂರು ಮಾಡುವುದು.
- ರಾಜ್ಯದಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸಲು ಸರ್ಕಾರದ ವತಿಯಿಂದ ಎಲ್ಲಾ ಡ್ಯಾಂಗಳಲ್ಲಿ ನಿರೀಕ್ಷಣಾ ಮಂದಿರಗಳನ್ನು ನಿರ್ಮಿಸಿ, ಪ್ರವಾಸಿಗರ ಅನುಕೂಲಕ್ಕೆ ಗುಣಮಟ್ಟದ ಊಟ, ವಸತಿ ವ್ಯವಸ್ಥೆ ಮಾಡುವುದು.
SUMMARY | We have written a letter to Chief Minister Siddaramaiah from the Karnataka State Ex-MLAs’ Forum requesting him to fulfil the demands of the public,” said H M Chandrasekharappa, president of the Karnataka State Ex-MLAs’ Forum.
KEYWORDS | H M Chandrasekharappa, Ex MLA, Chief Minister Siddaramaiah, political news,