SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 11, 2024
ಮಾಜಿ ಸಿ ಎಂ ಎಸ್ ಎಂ ಕೃಷ್ಣರವರು ನಿನ್ನೆ ವಿಧಿವಶರಾಗಿದ್ದಾರೆ. ಅವರ ಅಂತ್ಯಕ್ರಿಯೆ ಇಂದು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿಯಲ್ಲಿ ನಡೆಯಲಿದ್ದು, ರಾಜ್ಯದಾದ್ಯಂತ ಸರ್ಕಾರಿ ರಜೆ ಘೋಷಿಸಲಾಗಿದೆ.
ಇದರ ನಡುವೆ ಎಸ್ ಎಂ ಕೃಷ್ಬರವರ ಅಂತ್ಯಕ್ರಿಯೆಯನ್ನು 1000 ಕೆಜಿ ಗಂಧ ಬಳಸಿ ನಡೆಸಲಾಗುತ್ತದೆ ಎಂದು ತಿಳಿದು ಬಂದಿದೆ. ಈ ವಿಚಾರವನ್ನು ಮಂಡ್ಯ ಶಾಸಕ ಗಣಿಗೆ ರವಿ ತಿಳಿಸಿದ್ದು, ಎಸ್ ಎಂ ಕೃಷ್ಣ ರವರು ಮುಖ್ಯಮಂತ್ರಿ ಯಾಗಿದ್ಧ ಸಂದರ್ಭದಲ್ಲಿ ರೈತರಿಗೆ ಶ್ರೀಗಂಧ ಬೆಳೆಯಲು ಅನುವು ಮಾಡಿಕೊಟ್ಟಿದ್ದರು ಅದರ ನೆನಪಿಗಾಗಿ ಈ ಕಾರ್ಯವನ್ನು ಮಾಡುತ್ತಿದ್ದೇವೆ ಎಂದು ಮಾಹಿತಿ ನೀಡಿದರು. ಇಂದು ಸಂಜೆ 4 ಗಂಟೆಗೆ ಎಸ್ ಎಂ ಕೃಷ್ಣ ರವರ ಹುಟ್ಟೂರಾದ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.
SUMMARY | Former CM SM Krishna passed away yesterday. His last rites will be performed at Somanahalli in Maddur taluk of Mandya district today and a state holiday has been declared across the state.
KEYWORDS | Former CM SM Krishna, 1000 kg of sandalwood, kannadanews,