SHIVAMOGGA | MALENADUTODAY NEWS | ಮಲೆನಾಡು ಟುಡೆ | Jan 25, 2025
ಶಿವಮೊಗ್ಗ | ಕುವೆಂಪು ರಂಗಮಂದಿರದಲ್ಲಿ ಇಂದು ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಜಿಲ್ಲಾ ಕಾನೂನು ಪ್ರಾಧಿಕಾರ ಹಾಗೂ ಮಹನಗರಪಾಲಿಕೆ ಸಹಯೋಗದಲ್ಲಿ ರಾಷ್ಟ್ರೀಯ ಮತದಾರ ದಿನಾಚಾರಣೆ ಕಾರ್ಯಕ್ರವನ್ನು ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾಧಿಕಾರಿ ಗುರುದತ್ ಹೆಗಡೆ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಈ ವೇಳೆ ಚುನಾವಣೆ ಸಂದರ್ಭದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ 7 ಜನ ಮತಗಟ್ಟೆ ಅಧಿಕಾರಿ ಹಾಗೂ 9 ಜನ ಕಂಪ್ಯೂಟರ್ ಆಪರೇಟರ್‌ಗಳಿಗೆ ಅತ್ಯುತ್ತಮ ಗೌರವವನ್ನು ನೀಡಲಾಯಿತು.
ಜಿಲ್ಲೆಯ ಅತ್ಯುತ್ತಮ ಮತಗಟ್ಟೆ ಅಧಿಕಾರಿ ಹಾಗೂ ಕಂಪ್ಯೂಟರ್ ಆಪರೇಟರ್‌ಗಳು
ಮೊದಲನೆಯದಾಗಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಕಂಪ್ಯೂಟರ್ ಆಪರೇಟರ್‌ಗಳ ಹೆಸರನ್ನು ಗಮನಿಸುವುದಾದರೆ, ರಾಮಮೂರ್ತಿ ಎಂ, ಭಾನುಪ್ರಕಾಶ್ ಆರ್, ಅನಿಲ ಸಿ, ಹರ್ಶಿತಾ ಎಸ್, ಶೀಲಾ ಆರ್, ತೇಜಸ್ವಿ ಟಿ, ಸಂತೋಷ್ ಕುಮಾರ್ ಎಸ್ ಮಹಮದ್, ಹಾಗೂ ಚುನಾವಣಾ ಶಾಖೆ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಕಾರ್ಯನಿರ್ವಹಿಸುವ ಚಂದ್ರಶೇಖರ್ ಎಂ ಇವರುಗಳಿಗೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಕಂಪ್ಯೂಟರ್ ಆಪರೇಟರ್‌ಗಳು ಎಂಬ ಗೌರವವನ್ನು ನೀಡಲಾಗಿದೆ.
ಉತ್ತಮವಾಗಿ ಕಾರ್ಯ ನಿರ್ವಹಿಸಿದ ಮತಗಟ್ಟೆ ಅಧಿಕಾರಿಗಳನ್ನು ನೋಡುವುದಾದರೆ. ನಾಗರಾಜ್ ಟಿಕೆ, ಸತ್ಯ ಡಿ.ಜೆ, ಬಿ.ಬಿ ಮರಿಯಂ, ಗೋಪಾಲ ಟಿ.ಆರ್, ಮನೋಹರ್ ಕೆ ಎಸ್, ಚಿನ್ನಮ್ಮ ಹಾಗೂ ಲೊಕೇಶ್ ಪಿ ಇವರುಗಳಿಗೆ ಉತ್ತಮವಾಗಿ ಕಾರ್ಯ ನಿರ್ವಹಿಸಿದ ಮತಗಟ್ಟೆ ಅಧಿಕಾರಿಗಳು ಎಂಬ ಗೌರವವನ್ನು ನೀಡಲಾಗಿದೆ.
SUMMARY | The National Voters’ Day programme was organised by the District Administration, Zilla Panchayat, District Law Authority and Mahanagara Palike at Kuvempu Rangamandira here today.
KEYWORDS | Voters, Zilla Panchayat, Mahanagara Palike, Kuvempu Rangamandira,
