SHIVAMOGGA | MALENADUTODAY NEWS | ಮಲೆನಾಡು ಟುಡೆ | Jan 27, 2025
ಶಿವಮೊಗ್ಗ | ಹುತಾತ್ಮರ ದಿನಾಚರಣೆ ಅಂಗವಾಗಿ ಜನವರಿ 29ಮತ್ತು 30 ರಂದು ಎರಡು ದಿನ ಕರ್ನಾಟಕ ಸರ್ವೋದಯ ಮಂಡಲದ ರಾಷ್ಟ್ರೀಯ ಸಮ್ಮೇಳನವನ್ನು ಈಸೂರಿನಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕುರಿತು ಕರ್ನಾಟಕ ಮಂಡಲದ ಸಂಚಾಲಕರಾದ ಎಂ ಎನ್ ಸುಂದರೇಶ್ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು ಈ ಕಾರ್ಯಕ್ರಮವನ್ನು ವಿಶ್ವ ಹುತಾತ್ಮರ ದಿನಾಚರಣೆಯ ಅಂಗವಾಗಿ ನಡೆಸುತ್ತಿದ್ದೇವೆ. ಈಸೂರು ಸ್ವಾತಂತ್ರ್ಯ ಹೋರಾಟಗಾರರ ಬಿಡಾಗಿದ್ದು, ಧೈರ್ಯ ಮತ್ತು ಶೌರ್ಯಕ್ಕೆ ಹೆಸರು ವಾಸಿಯಾಗಿದೆ. ಆದ್ದರಿಂದ ಈ ಕಾರ್ಯಕ್ರಮವನ್ನು ಈಸೂರಿನಲ್ಲಿ ನಡೆಸುತ್ತಿದ್ದೇವೆ ಎಂದರು.
ಜನವರಿ 29ರಂದು ಸಂಜೆ 5:30ಕ್ಕೆ ಜಿಎಸ್ ಶಿವರುದ್ರಪ್ಪ ಬಯಲು ರಂಗ ಮಂದಿರ ಈಸೂರಿನಲ್ಲಿ ಈ ಕಾರ್ಯಕ್ರಮ ಆರಂಭವಾಗುತ್ತದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಲ್ಲಿನ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರೇಖಾ ಪ್ರಭಾಕರ್ ಪಾಟೀಲ್ ವಹಿಸಲಿದ್ದಾರೆ. ಹಾಗೆಯೇ ಅಂದು ಸಹ್ಯಾದ್ರಿ ರಂಗತರಂಗ ಶಿವಮೊಗ್ಗ ಇವರಿಂದ ಕಾಂತೇಶ್ ಕದರಮಂಡಲಗಿಯವರು ನಿರ್ದೇಶಿರುವ ಮನುಜ ಮತ ಗಾಂಧಿ ಪಥ ಎಂಬ ನಾಟಕ ಕಾರ್ಯಕ್ರಮವನ್ನು ಏರ್ಪಡಿಸಿದ್ದೇವೆ ಎಂದರು.
ಜನವರಿ 30 ರಂದು ಬೆಳಗ್ಗೆ 9:30ಕ್ಕೆ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಾಲಯದಲ್ಲಿ ಹುತಾತ್ಮರ ಸ್ಮಾರಕಗಳಿಗೆ ಪ್ರಭಾತ್ ತೇರಿ ಉದ್ಘಾಟನೆ 84 ಧ್ವಜಗಳೊಂದಿಗೆ ಜಾಥಾ ಮತ್ತು ಸರಿಯಾಗಿ ಹನ್ನೊಂದು ಗಂಟೆಗೆ ಮಹಾತ್ಮ ಗಾಂಧೀಜಿ ಮತ್ತು ಈಸೂರಿನ ಹುತಾತ್ಮರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮದ ಉದ್ಘಾಟನೆಯನ್ನುಅಲ್ಲಿನ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರೇಖಾ ಪ್ರಭಾಕರ್ ಪಾಟೀಲ್ ನೆರವೇರಿಸಲಿದ್ದಾರೆ. ಸರ್ವೋದಯ ಮಂಡಲದ ರಾಷ್ಟ್ರೀಯ ಅಧ್ಯಕ್ಷ ಚಂದನ ಪಾಲ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು. ಹಾಗೆಯೇ ಸಂಸದ ಬಿ.ವೈ ರಾಘವೇಂದ್ರ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು, ಸಭೆಯಲ್ಲಿ ಸರ್ವೋದಯ ಮಂಡಲದ ರಾಜ್ಯಾಧ್ಯಕ್ಷ ಡಾ.ಹೆಚ್.ಎಸ್.ಸುರೇಶ್, ಮತ್ತು ಜಿಲ್ಲಾಧ್ಯಕ್ಷ ಬಸವರಾಜಪ್ಪ ಪರಪ್ಪ ಕಂದಗಲ್, ಲಕ್ಷ್ಮಣ ತುಕಾರಾಮ್ ಗೋಲೆ, ಉಪಸ್ಥಿತರಿರುತ್ತಾರೆ. ಎಂದರು.
ವಿವಿಧ ರಾಜ್ಯಗಳಿಂದ ಮತ್ತು ವಿವಿಧ ಜಿಲ್ಲೆಗಳಿಂದ ಇನ್ನೂರಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ. ಇದೇ ಸಂದರ್ಭದಲ್ಲಿ ಈಸೂರಿನ ಹುತಾತ್ಮ ಕುಟುಂಬದ ಸದಸ್ಯರಿಗೆ ಹಾಗೂ ಭಗವಂತರಾವ್, ಆರ್.ಬಸವರಾಜಪ್ಪ, ಗಾಯತ್ರಿ, ಬಿ.ರಾವ್, ಪ್ರೊ.ಸತ್ಯನಾರಾಯಣ, ಡಾ.ಡಿ.ವಿ.ರೇವಣಪ್ಪ ಗೌಡ, ಎಂ.ಎನ್.ವೆಂಕಟೇಶ್, ಆರ್. ಮನೋಹರ್ ಮತ್ತು ಪಿ.ಬಸವರಾಜಪ್ಪನವರನ್ನು ಸರ್ವೋದಯ ರಾಷ್ಟ್ರೀಯ ಸೇವಾ ಪ್ರಶಸ್ತಿನೀಡಿ ಗೌರವಿಸಲಾಗುವುದು ಎಂದರು.
SUMMARY | As part of Martyrs’ Day, a two-day National Conference of Karnataka Sarvodaya Mandal will be held at Esoor on January 29 and 30.
KEYWORDS | National Conference, Esoor, January,