SHIVAMOGGA | MALENADUTODAY NEWS | ಮಲೆನಾಡು ಟುಡೆ | Apr 3, 2025
ಶಿವಮೊಗ್ಗ | ಈದ್ಗಾ ಮೈದಾನದಲ್ಲಿ ಷರತ್ತು ಬದ್ದ ಸಾರ್ವಜನಿಕ ಬಳಕೆಗೆ ಅವಕಾಶ ಮಾಡಿಕೊಡುತ್ತೇವೆಂದು ಸುನ್ನಿ ಜಾಮಿಯಾ ಮಸ್ಜಿದ್‌ನ ಮುಖಂಡರು ತಿಳಿಸಿದರು.
ಇಂದು ಶಿವಮೊಗ್ಗದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಈದ್ಗಾ ಮೈದಾನವನ್ನು ಕೆಲವರು ಸಾರ್ವಜನಿಕ ಆಸ್ತಿ ಎಂದು ಹೇಳಿ ಶಿವಮೊಗ್ಗದ ಶಾಂತಿಯನ್ನು ಕದಡುವ ಪ್ರಯತ್ನ ಮಾಡುತ್ತಿದ್ದಾರೆ. ಸುನ್ನಿ ಈದ್ಗಾ ಮೈದಾನ ವಕ್ಫ್ ಆಸ್ತಿಯಾಗಿದೆ. ಅದಕ್ಕೆ ಸಂಬಂಧ ಪಟ್ಟ ದಾಖಲೆಗಳೆಲ್ಲವೂ ನಮ್ಮ ಬಳಿ ಇದೆ. ಈಗಾಗಲೇ ಈ ಜಾಗದ ಬಗ್ಗೆ ಜಿಲ್ಲಾಧಿಕಾರಿಯವರಿಗೆ ತಿಳಿಸಿದ್ದೇವೆ. ಇನ್ನೂ ಈ ಜಾಗದ ಹೆಚ್ಚಿನ ದಾಖಲೆಗಳಿಗಾಗಿ ವಕ್ಫ್ ಬೋರ್ಡ್‌ಗೆ ಪತ್ರ ಬರೆಯಲಾಗಿದೆ. ಈದ್ಗಾ ಮೈದಾನ ಮುಸ್ಲಿಂ ಸಮುದಾಯದ ವಕ್ಫ್ ಆಸ್ತಿಯಾಗಿದ್ದು. ಕರ್ನಾಟಕದ ರಾಜ್ಯಪತ್ರ ಅಧಿಸೂಚನೆ 1965ರ ನೋಟಿಫಿಕೇಷನ್ ಸಂಖ್ಯೆ 288 ರ ಅನ್ವಯ ವಕ್ಫ್ ಆಸ್ತಿಯಂದು ಆದೇಶವಾಗಿದ್ದು ಮುನ್ಸಿಪಲ್ ಖಾತವನ್ನು ಹೊಂದಿರುತ್ತದೆ. ಸದರಿ ಸುನ್ನಿ ಇದ್ದಾ ಮೈದಾನವು ಮರ್ಕಜಿ ಸುನ್ನಿ ಜಾಮೀಯಾ ಮಸೀದಿ, ಗಾಂಧಿ ಬಜಾರ್, ಶಿವಮೊಗ್ಗದ ಅಧೀನದಲ್ಲಿರುತ್ತದೆ .ಈ ಪ್ರದೇಶದಲ್ಲಿ ನಾವು ಪ್ರತಿವರ್ಷ ಹಬ್ಬ ಹಾಗು ಧಾರ್ಮಿಕ ಆಚರಣೆಗಳನ್ನು ನಡೆಸಿಕೊಂಡು ಬರುತ್ತಿದ್ದೇವೆ. ಪ್ರತಿ ವರ್ಷ ಅದನ್ನು ಸ್ವಚ್ಚ ಗೊಳಿಸುವ ಸಲುವಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತೇವೆ. ಆದರೆ ಇತ್ತೀಚೆಗೆ ಆ ಪ್ರದೇಶದಲ್ಲಿ ಕಿಡಿಗೇಡಿಗಳು ಅನೈತಿಕ ಚಟುವಟಿಕೆಯನ್ನು ಮಾಡುತ್ತಿದ್ದಾರೆ. ಆದ್ದರಿಂದ ಇನ್ನುಮುಂದೆ ಆ ಪ್ರದೇಶದಲ್ಲಿ ಇಂಟರ್‌ಲಾಕ್ ಹಾಕಿಸಿ ಸಿಸಿ ಟಿವಿ ಕ್ಯಾಮರಗಳನ್ನು ಅಳವಡಿಸಬೇಕೆಂದು ಕೊಂಡಿದ್ದೇವೆ. ನಂತರ ಷರತ್ತು ಬದ್ದವಾಗಿ ಆ ಮೈದಾನದಲ್ಲಿ ಸಾರ್ವಜನಿಕ ಬಳಕೆಗೆ ಅವಕಾಶ ಮಾಡಿಕೊಡುತ್ತೇವೆ ಎಂದರು.
SUMMARY | Leaders of the Sunni Jamia Masjid said they would allow conditional public use at the Idgah maidan.
KEYWORDS | Sunni Jamia Masjid, conditional, public use, shivamogga,