ಈಡಿಗ ಹಾಸ್ಟೆಲ್‌ ನಿರ್ಮಾಣಕ್ಕೆ ಅನುದಾನ ನೀಡುವಂತೆ ಮನವಿ | ಸಚಿವರು ಏನಂದ್ರು

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Feb 1, 2025

ಶಿವಮೊಗ್ಗ|  ನಗರದಲ್ಲಿ ಈಡಿಗ ಸಮುದಾಯದ ಕಾಲೇಜು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಲಯ ನಿರ್ಮಾಣ ಮಾಡಲು 5 ಕೋಟಿ ಅನುದಾನ ನೀಡಬೇಕೆಂದು ಶಾಲಾ ಶಿಕ್ಷಣ ಮತ್ತು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಅವರಿಗೆ ಈಡಿಗ ಸಂಘದಿಂದ ಮನವಿ ಸಲ್ಲಿಸಲಾಯಿತು.

- Advertisement -

ಜಿಲ್ಲಾ ಆರ್ಯ ಈಡಿಗ ಸಂಘದ ಅಧ್ಯಕ್ಷ ಆರ್.ಶ್ರೀಧರ್‌ ನೇತೃತ್ವದ ನಿಯೋಗ ಬೆಂಗಳೂರಿನಲ್ಲಿ  ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದು, ಪ್ರಸ್ತಕ ವರ್ಷದ ಬಜೆಟ್‌ನಲ್ಲಿ ಅನುದಾನ ಮೀಸಲಿಡಬೇಕೆಂದು ಕೋರಲಾಯಿತು.

ಮನವಿ ಪಡೆದ ಸಚಿವರು, ಶಿವಮೊಗ್ಗ ನಗರದಲ್ಲಿ ವಿದ್ಯಾರ್ಥಿನಿಲಯದ ಅವಶ್ಯಕತೆಯಿದ್ದು, ಸರ್ಕಾರದಿಂದ ಹಣ ಮಂಜೂರು ಮಾಡಿಸಿಕೊಡುವುದಾಗಿ ಭರವಸೆ ನೀಡಿದರು.  ನಿಯೋಗದಲ್ಲಿ ಸಂಘದ ಉಪಾಧ್ಯಕ್ಷರಾದ ಎನ್.ಪಿ.ಧರ್ಮರಾಜ್ ˌಪ್ರಧಾನ ಕಾರ್ಯದರ್ಶಿ ಎಸ್.ಸಿ.ರಾಮಚಂದ್ರˌ ಖಜಾಂಚಿ ಕಾಗೋಡು ರಾಮಪ್ಪ ಹಾಗೂ ವಕೀಲರಾದ ಭೀಮನೇರಿ ಈಶ್ವರ್‌ ಇದ್ದರು.

SUMMARY | The Idiga Sangha submitted a memorandum to School Education and Shivamogga district in-charge minister Madhu Bangarappa seeking a grant of Rs 5 crore for the construction of the hostel.

KEYWORDS | Idiga Sangh, Shivamogga,  hostel, Madhu Bangarappa,

 

Share This Article
Leave a Comment

Leave a Reply

Your email address will not be published. Required fields are marked *