SHIVAMOGGA | MALENADUTODAY NEWS | ಮಲೆನಾಡು ಟುಡೆ | Mar 4, 2025
ಶಿವಮೊಗ್ಗ| ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಯ ಒಕ್ಕೂಟ ಜಿಲ್ಲಾಧಿಕಾರಿಗಳಿಗೆ ಮತ್ತು ಪಾಲಿಕೆ ಆಯುಕ್ತರಿಗೆ ಇ- ಆಸ್ತಿಗೆ ಸಂಬಂಧಿಸಿದಂತೆ ಇ-ಆಸ್ತಿ ನಾಗರಿಕರ ಕರಡು ಪ್ರತಿಗಳನ್ನು(ಸಿಟಿಜನ್ ಕಾಪಿ) ನಮೂನೆ 2/3 ನೀಡುವ ಪ್ರಕ್ರಿಯೆಯನ್ನು ತಕ್ಷಣ ಪ್ರಾರಂಭಿಸಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಿದೆ.
ನಗರದಲ್ಲಿ ಇ-ಆಸ್ತಿಗೆ ಸಂಬಂಧಪಟ್ಟಂತೆ ನಾಗರಿಕರಲ್ಲಿ ಈಗಾಗಲೇ ಸಾಕಷ್ಟು ಗೊಂದಲ ಉಂಟಾಗಿದೆ. ಈ ವಿಚಾರವಾಗಿ ನಾಗರೀಕರು ಮಹಾನಗರ ಪಾಲಿಕೆಗೆ ಪ್ರತಿನಿತ್ಯ ಅಲೆದಾಡುತ್ತಿದ್ದು, ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಜೊತೆಗೆ ಬ್ರೋಕರ್ ಗಳಿಂದ ಮತ್ತು ಕೆಲವು ಅಧಿಕಾರಿ ವರ್ಗಗಳಿಂದ ಶೋಷಣೆಗೆ ಒಳಗಾಗಿದ್ದು, ಇದನ್ನು ತಪ್ಪಿಸಲು ಸರ್ಕಾರದ ಸುತ್ತೋಲೆಯಂತೆ ಮೊದಲು ಕೆ.ಎಂ.ಡಿ.ಎಸ್. ಸಾಫ್ಟ್ ವೇರ್ ನಲ್ಲಿ ಇ-ಆಸ್ತಿಯ ಕುರಿತು ಕರಡು ಪ್ರತಿಯನ್ನು ನಾಗರಿಕರಿಗೆ ನೀಡಬೇಕು. ನಂತರ ಸರ್ಕಾರ ನಿರ್ದಿಷ್ಟಪಡಿಸಿರುವ 6 ದಾಖಲೆಗಳನ್ನು ಖಾತೆದಾರರಿಂದ ಪಡೆಯಬೇಕು. ನಂತರ ಇ-ಆಸ್ತಿಗೆ ಪೂರಕವಾದ ನಮೂನೆ 2/3 ಅನ್ನು ಪಾಲಿಕೆ 100 ರೂ. ಶುಲ್ಕ ಪಡೆದು ಖಾತೆದಾರರಿಗೆ ನೀಡಬೇಕು ಎಂದು ಒತ್ತಾಯಿಸಿದರು.
ಆದರೆ, ಕೆ.ಎಂ.ಡಿ.ಎಸ್. ಸಾಫ್ಟ್ ವೇರ್ ನಲ್ಲಿ ಇ-ಆಸ್ತಿಗೆ ಪೂರಕವಾದ ನಮೂನೆ 2/3ರ ಕರಡು ಪ್ರತಿಯನ್ನು ಪಾಲಿಕೆಯಲ್ಲಿ ಹಾಲಿ ಇರುವ 1.07 ಲಕ್ಷ ಖಾತೆದಾರರಿಗೆ ಪಾಲಿಕೆ ಮೊದಲು ನೀಡಬೇಕು. ಇ-ಆಸ್ತಿಯ ಪ್ರಕ್ರಿಯೆ ಪ್ರಾರಂಭವಾಗುವುದೇ ಇಲ್ಲಿಂದಲೇ ಎಂಬುದನ್ನು ತಾವು ಗಮನಿಸಿ ಈ ಕರಡು ಪ್ರತಿಗಳನ್ನು ನೀಡುವ ಪ್ರಕ್ರಿಯೆ ತಕ್ಷಣ ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು.
ಈ ನಡುವೆ ಹಿರಿಯ ನಾಗರಿಕರು ಅನೇಕ ಮಂದಿ ಪಾಲಿಕೆ ಆಯುಕ್ತರಲ್ಲಿ ಕಳೆದ ಕೆಲವು ತಿಂಗಳುಗಳಿಂದ ಅಲೆದಾಡುತ್ತಿರುವ ಬಗ್ಗೆ ಗಮನಕ್ಕೆ ತಂದರು. ಫೆ. 25ರಂದು ಇ-ಖಾತೆ ಬಗ್ಗೆ ನಾಗರಿಕರಿಗೆ ಕರಡು ಪ್ರತಿ ನೀಡುವ ಬಗ್ಗೆ ಭರವಸೆ ನೀಡಿದ್ದೀರಿ. ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಮೂರು ವರ್ಷಗಳ ಹಿಂದೆಯೇ ಪಾಲಿಕೆ ನಾಗರಿಕರಿಗೆ ಕರಡು ಪ್ರತಿ ನೀಡಬೇಕಾಗಿತ್ತು. ಪಾಲಿಕೆ ಕಂದಾಯ ಅಧಿಕಾರಿಗಳ ವೈಫಲ್ಯ ತೆರಿಗೆ ಪಾವತಿದಾರರಿಗೆ ದಿನನಿತ್ಯದ ಸಮಸ್ಯೆಗಳಿಗೆ ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪಾಲಿಕೆ ಎದುರು ಆಯುಕ್ತರು ಮತ್ತು ವೇದಿಕೆ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಈ ಬಗ್ಗೆಯೇ ಸಭೆ ಕರೆದಿದ್ದಾರೆ. ಸರ್ಕಾರಕ್ಕೆ ನಾನು ನಿಮ್ಮ ಮನವಿಯನ್ನು ತಿಳಿಸಿದ್ದೇನೆ. ಇದರಿಂದ ಆಕ್ರೋಶಭರಿತರಾದ ವೇದಿಕೆ ಸದಸ್ಯರು ಡಿಸಿ ಕಚೇರಿಗೆ ಭೇಟಿ ನೀಡಿ ಜಿಲ್ಲಾಧಿಕಾರಿಗಳೇ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಬೇಕು. ನಾಗರಿಕರ ವೇದಿಕೆಯ ಹಿರಿಯ ಸದಸ್ಯರ ಮನವಿಗೆ ಸ್ಪಂದಿಸದ ಆಯುಕ್ತರು ನಮಗೆ ಬೇಡ ಎಂದು ಘೋಷಣೆ ಕೂಗಿದರು.
SUMMARY | The plea also demanded that the process of issuing Form 2/3 of citizen copies of e-property in respect of e-property should be started immediately.
KEYWORDS | e-property, citizen copies, shimoga, dc office,