SHIVAMOGGA | MALENADUTODAY NEWS | ಮಲೆನಾಡು ಟುಡೆ | Nov 30, 2024
ಕನಕದಾಸರ ಭವನ ನಿರ್ಮಾಣಕ್ಕೆ ರಾಜ್ಯಸರ್ಕಾರದಿಂದ 7 ಕೋಟಿ ಹಣ ಬಿಡುಗಡೆ ಮಾಡುತ್ತಿದ್ದೇವೆ ಎಂದು ನಗರಾಭಿವೃದ್ದಿ ಹಾಗೂ ಪಟ್ಟಣ ಸಚಿವ ಭೈರತಿ ಸುರೇಶ್ ತಿಳಿಸಿದರು.
ಇಂದು ನಗರದ ಬಾಲರಾಜ್ ಅರಸ್ ರಸ್ತೆಯಲ್ಲಿ ಕನಕ ಸಮುದಾಯ ಭವನದ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಸಚಿವರು ಒಂದು ವರ್ಷದ ಹಿಂದೆ ಸರ್ಕಾರಿ ಕಾರ್ಯಕ್ರಮದ ಸಲುವಾಗಿ ಶಿವಮೊಗ್ಗಕ್ಕೆ ಬಂದಿದ್ದೆ. ಆ ಸಮಯದಲ್ಲಿ ಭವನ ನಿರ್ಮಾಣಕ್ಕೆ ಹಣ ನೀಡಿ ಎಂಬ ಬೇಡಿಕೆ ಬಂದಿತ್ತು ನಂತರ ಆ ಸ್ಥಳಕ್ಕೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದೆ. ನಂತರ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಹಣ ಬಿಡುಗಡೆ ಮಾಡಿಸಿದೆ. ಭವನ ನಿರ್ಮಾಣಕ್ಕೆ 12 ಕೋಟಿ ಕೊಡಲು ಕೇಳಿದ್ದರು. ಆದ್ರೆ ನಾವು ಎಲ್ಲಾ ಸಮುದಾಯದವರು ಭವನ ಅಭಿವೃದ್ದಿಗೂ ಹಣ ನೀಡಬೇಕು ಆದ್ದರಿಂದ 7 ಕೋಟಿ ಹಣ ಈ ಭವನಕ್ಕೆ ಬಿಡುಗಡೆ ಮಾಡಿಸಿ ಕೊಡುತ್ತೇನೆ ಎಂದರು. ಅಷ್ಟೇ ಅಲ್ಲದೆ ಈ ಭವನ ನಿರ್ಮಾಣಕ್ಕೆ ನನ್ನ ಕೈಲಾದಷ್ಟು ವ್ಯಯಕ್ತಿಕವಾಗಿ ಹಣ ನೀಡುತ್ತೇನೆ ಎಂದರು. ಹಾಗೆಯೇ ಸಂಸದ ರಾಘವೇಂದ್ರ ಹಾಗೂ ಶಾಸಕ ಚನ್ನಬಸಪ್ಪ ರವರೂ ತಮ್ಮ ನಿಧಿಯಂದ ಹಣ ಕೊಡಲು ನಿರ್ಧರಿಸಿದ್ದರಿಂದ ಇನ್ನಷ್ಟು ಹಣ ಬರಬಹುದು ಎಂದರು.
ಇಲ್ಲಿ ಯಾವ ಪಕ್ಷದ ಎಂಪಿ ಎಂ ಎಲ್ ಎ ಇದ್ದರೂ ನಾವು ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಿಸುತ್ತೇವೆ. ಅಭಿವೃದ್ಧಿಯಲ್ಲಿ ಸರ್ವರಿಗೂ ಸಮಾ ಬಾಳು ಸರ್ವರಿಗೂ ಸಮ ಪಾಲು ಎಂದರು. ಶಿವಮೊಗ್ಗ ಜಿಲ್ಲೆ ರಾಜ್ಯಕ್ಕೆ 4 ಜನ ಉತ್ತಮ ಮುಖ್ಯಮಂತ್ರಿಗಳನ್ನು ನೀಡಿದೆ. ಬಂಗಾರಪ್ಪ ಜೆ ಹೆಚ್ ಪಟೇಲ್, ಕಡಿದಾಳ್ ಮಂಜಪ್ಪ ಯಡಿಯೂರಪ್ಪರವರಂತಹ ಉತ್ತಮ ಮುಖ್ಯಮಂತ್ರಿಗಳನ್ನ ನಾವು ಕಂಡಿದ್ದೇವೆ. ಇದೀಗ ಇಬ್ಬರು ಮುಖ್ಯಮಂತ್ರಿಗಳ ಮಕ್ಕಳು ಈಗ ನಮ್ಮೊಂದಿಗೆ ಇದ್ದಾರೆ ಎಂದ ಸಚಿವರು ಮಧು ಬಂಗಾರಪ್ಪರವರೊಂದಿಗೆ ಕೆಲಸ ಮಾಡಲು ನನಗೆ ಸಂತೋಷ ಆಗುತ್ತಿದೆ ಎಂದರು.
SUMMARY| Urban Development and Town Development Minister Byrathi Suresh said that 7 crore is being released for the construction of Kanakadasa Bhavan.
KEYWORDS| Urban Development and Town Development Minister, Byrathi Suresh, Kanakadasa Bhavan, shivamogga,