ಅಪಾಯಕಾರಿ ಸ್ಟಂಟ್‌, ಆಘಾತಕಾರಿ ವಿಡಿಯೋ ವೈರಲ್‌

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Mar 17, 2025

ವೇಗವಾಗಿ ಬಂದ  ಎರಡು ಕಾರುಗಳು ಒಂದು ಕಾರು ಹಾಗೂ ರಸ್ತೆಯ ಬದಿಯಲ್ಲಿದ್ದ ಪಾದಾಚಾರಿಗಳಿಗೆ ಡಿಕ್ಕಿ ಹೊಡೆದ ಆಘಾತಕಾರಿ ಘಟನೆ ಹರಿಯಾಣದ  ಗುರುಗ್ರಾಮ್‌ನಲ್ಲಿ ನಡೆದಿದೆ. ಆ ಭಯಾನಕ ಅಪಘಾತದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.



ವಿಡಿಯೋದಲ್ಲಿರುವಂತೆ ಎರಡು ಕಾರುಗಳು ವೇಗವಾಗಿ ಬಂದು  ಬಿಳಿ ಬಣ್ಣದ ಕಾರಿಗೆ ಡಿಕ್ಕಿ ಹೊಡೆದಿವೆ. ಅದರಲ್ಲಿ ಒಂದು ಕಾರಿನ ಮುಂಬಾಗ ಸಂಪೂರ್ಣ ನುಜುಗುಜ್ಜಾಗಿದೆ. ಆದರೆ ಇನ್ನೊಂದು ಕಾರಿನ ಚಾಲಕ ಡಿಕ್ಕಿ ಹೊಡೆದು ನಿಲ್ಲಿಸದೆ ಹಾಗೆಯೇ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಬೀಕರ ಅಪಘಾತದಿಂದ ಅಲ್ಲಿದ್ದ ಸುತ್ತಮುತ್ತಲಿನ ಜನರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್‌ ಪಾದಾಚಾರಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

ಮಾಹಿತಿ ಪಡೆದ ನಂತರ, ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡಿದಾಗ ಯುವಕರು ಅಪಾಯಕಾರಿ ಸಾಹಸಗಳಲ್ಲಿ ತೊಡಗಿರುವುದು ಕಂಡುಬಂದಿದೆ. ಈ ಹಿನ್ನಲೆ ಇಬ್ಬರೂ ಚಾಲಕರನ್ನು ಪೊಲೀಸರು ಬಂಧಿಸಿದರು.

SUMMARY | Two speeding cars collided with a car and pedestrians on the side of the road

 KEYWORDS | cars,road, pedestrians, viral video,

 

Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು