ಅಡ್ರೆಸ್‌ ಹೇಳಿದ ವ್ಯಾಪಾರಿಗೆ ನಾಲ್ವರಿಂದ ಹಲ್ಲೆ, ಇರಿತ | ಶಿವಮೊಗ್ಗದಲ್ಲಿ ಸಲಿಸ್ತಾಯ್ತಾ ಕ್ರೈಂ!?

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 15, 2025 ‌‌ 

ಶಿವಮೊಗ್ಗ ನಗರದಲ್ಲಿ ನಿನ್ನೆ ದಿನ ವ್ಯಾಪಾರಿಯೊಬ್ಬನ ಮೇಲೆ ಹಲ್ಲೆ ಮಾಡಿ, ಆತನಿಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಲಾಗಿದೆ. ಈ ಘಟನೆ ನಗರದ ಕಸ್ತೂರಿ ಬಾ ರಸ್ತೆಯಲ್ಲಿ ನಡೆದಿದೆ, ವ್ಯಾಪಾರ ಕೇಂದ್ರವಾಗಿರುವ ಇಲ್ಲಿ ಘಟನೆ ನಡೆದಿದ್ದು, ಇನ್ನಷ್ಟು ಮಾಹಿತಿಗಳು ಲಭ್ಯವಾಗಬೇಕಿದೆ. 

ಇಲ್ಲಿನ ಮುರುಡೇಶ್ವರ ದೇವಾಲಯದ ಬಳಿ, ನಿನ್ನೆ ಅಂದರೆ ಜನವರಿ 14 ರಂದ ರಾತ್ರಿ ಎಂಟು ಗಂಟೆ ಸುಮಾರಿಗೆ ನಾಲ್ವರು ಇಲ್ಲಿನ ಅಂಗಡಿಯೊಂದರ ಬಳಿ ಬಂದು ವಿಳಾಸ ಕೇಳಿದ್ದಾರೆ. ಅಂಗಡಿಯ ಮಾಲೀಕ ಕೇಳಿದ ವಿಳಾಸ ಎಲ್ಲಿದೆ ಎಂದು ತೋರಿಸಿದ್ದಾನೆ. ಅಲ್ಲಿಗೆ ತೆರಳಿದ ನಾಲ್ವರು ಅಲ್ಲಿ ಯಾರು ಇಲ್ಲದ್ದನ್ನು ಗಮನಿಸಿ ಹೊರಕ್ಕೆ ಬಂದು ದೂರದಿಂದಲೇ ವಿಳಾಸ ಹೇಳಿದ ಅಂಗಡಿಯವನಿಗೆ ನಿಂದಿಸಿದ್ದಾರೆ. ಆಗ ಅಂಗಡಿಯಾತ ತನ್ನ ಅಂಗಡಿಯಿಂದ ಹೊರಬಂದು ಯುವಕರನ್ನ ಪ್ರಶ್ನಿಸಿದ್ದಾರೆ. ಈ ವೇಳೆ ಓರ್ವ ಯುವಕ ತನ್ನ ಬಳಿ ಇದ್ದ ಮಾರಕಾಸ್ತ್ರ ತೆಗೆದು ಅಂಗಡಿಯಾತನಿಗೆ ಚುಚ್ಚಿದ್ದಾನೆ. ಅದೇ ವೇಳೆ ಉಳಿದ ಯುವಕರು ಆತನ ಮೇಲೆ ಹಲ್ಲೆ ಮಾಡಿದ್ದಾರೆ. ಅಷ್ಟರಲ್ಲಿ ಅಲ್ಲಿದ್ದ ಸ್ಥಳೀಯ ವ್ಯಾಪಾರಸ್ಥರು, ಹಲ್ಲೆಗೆ ಮುಂದಾದವರ ಮೇಲೆ ದಾಳಿ ಮಾಡಿ, ಅಂಗಡಿಯಾತನನ್ನ ರಕ್ಷಿಸಿದ್ದಾರೆ. ಈ ನಡುವೆ ಓರ್ವ ಯುವಕ ‍ಸ್ಥಳೀಯರ ಕೈಗೆ ಸಿಕ್ಕಿಬಿದ್ದು ಪೆಟ್ಟು ತಿಂದಿದ್ದಾನೆ. 

ಹೊಸವರ್ಷದ ಆರಂಭದಿಂದ ಶಿವಮೊಗ್ಗ ನಗರದಲ್ಲಿ ಇಂತಹ ಸಣ್ಣಪುಟ್ಟ ಘಟನೆಗಳು ವರದಿಯಾಗುತ್ತಲೇ ಇದೆ. ಪೊಲೀಸ್‌ ಇಲಾಖೆಯಿಂದ ದಾಟಿ ವಿಚಾರಗಳು ಆಚೆ ಬರುತ್ತಿಲ್ಲ. ಪ್ರಕರಣಗಳು ನಡೆದಾಗ ಅವುಗಳ ವಿಚಾರದಲ್ಲಿ ತೋರುತ್ತಿರುವ ಮೃಧುದೋರಣೆ ಹಾಗೂ ಕ್ರೈಂಗಳ ಮೇಲೆ ಕಡಿಮೆಯಾಗಿರುವ ಇಲಾಖೆಯ ಗಮನಕ್ಕೆ ಈ ಘಟನೆಗಳು ಸಾಕ್ಷಿಯಾಗುತ್ತಿದೆ. 

 



SUMMARY |   Shopkeeper attacked by youths on Kasturi Ba Street, Gandhi Bazaar, Shivamogga, incident caught on CCTV camera

KEY WORDS |‌Shopkeeper attacked by youths , Kasturi Ba Street, Gandhi Bazaar, Shivamogga, incident caught on CCTV camera

Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು