SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 20, 2024
ಶಿವಮೊಗ್ಗ| ಅಂಚೆವಿಮೆ ಹಾಗೂ ಗ್ರಾಮೀಣ ಜೀವ ವಿಮೆ ಉತ್ಪನ್ನಗಳನ್ನು ಮಾರಾಟ ಮಾಡಲು ಶಿವಮೊಗ್ಗ ವಿಭಾಗದಲ್ಲಿ ನೇರ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ನೇರ ಸಂದರ್ಶನವನ್ನು ಏರ್ಪಡಿಸಲಾಗಿದೆ.
ಸಂದರ್ಶನ ಜನವರಿ 7 ಮತ್ತು 8 ರಂದು ಅಂಚೆ ಅಧೀಕ್ಷಕರ ಕಚೇರಿ , ಕೋಟೆ ರಸ್ತೆಯಲ್ಲಿ ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ.ಆಸಕ್ತ ಅಭ್ಯರ್ಥಿಗಳು ತಮ್ಮ ಇತ್ತೀಚಿನ ಭಾವಚಿತ್ರದೊಂದಿಗೆ ಸ್ವವಿವರ, ಶೈಕ್ಷಣಿಕ ಪ್ರಮಾಣಪತ್ರ ಜೆರಾಕ್ಸ್ ಪ್ರತಿಯನ್ನು ಪಡೆದು ಸರಿಯಾದ ಸಮುಯಕ್ಕೆ ಹಾಜಾರಾಗಬೇಕೆಂದು ಶಿವಮೊಗ್ಗ ವಿಭಾಗದ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.

ಈ ಹುದ್ದೆಗೆ ಆಯ್ಕೆಯಾಗ ಬಯಸುವ ಅಭ್ಯರ್ಥಿಗಳು 10 ನೇ ತರಗತಿ ಉತ್ತೀರ್ಣರಾಗಿರಬೇಕು. ಕನಿಷ್ಟ 18 ವರ್ಷ ಮತ್ತು ಗರಿಷ್ಟ ಮಿತಿ ಇರುವುದಿಲ್ಲ.ನಿರುದ್ಯೋಗಿ ಹಾಗೂ ಸ್ವಯಂ ಉದ್ಯೋಗನಿರತ ಯುವಕರು, ವಿಮಾ ಕಂಪನಿಗಳ ಮಾಜಿ ಏಜೆಂಟರು ಹಾಗೂ ಸಲಹೆಗಾರರು, ಮಾಜಿ ಸೈನಿಕರು, ಅಂಗನವಾಡಿ ಕಾರ್ಯಕರ್ತೆಯರು, ಮಹಿಳಾ ಮಂಡಳದ ಕಾರ್ಯಕರ್ತೆಯರು, ನಿವೃತ್ತ ಪ್ರಧಾನ ಮತ್ತು ಗ್ರಾಮ ಪಂಚಾಯಿತಿಯ ಸದಸ್ಯರು ಹಾಗೂ ಅಂಚೆ ವಿಭಾಗದ ಮುಖ್ಯಸ್ಥರಿಗೆ ಸಮಂಜಸವೆಂದು ಕಂಡುಬಂದ ಯಾವುದೇ ಅಭ್ಯರ್ಥಿಗಳು ಆಯ್ಕೆಯಾದ ಪಕ್ಷದಲ್ಲಿ ಅವಕಾಶ ನೀಡಲಾಗುವುದು ಎಂದು ತಿಳಿಸಿರುತ್ತಾರೆ
ಅಭ್ಯರ್ಥಿಗಳು ರೂಪಾಯಿ ಐದು ಸಾವಿರಗಳನ್ನು ರಾಷ್ಟ್ರೀಯ ಉಳಿತಾಯ ಪತ್ರ ಅಥವಾ ಕಿಸಾನ್ ವಿಕಾಸ ಪತ್ರದ ರೂಪದಲ್ಲಿ ಭದ್ರತಾ ಠೇವಣಿಯನ್ನು ಇಡಬೇಕಾಗುತ್ತದೆ. ಆಯ್ಕೆಯಾದ ನೇರ ಪ್ರತಿನಿಧಿಗಳಿಗೆ ಅವರು ಮಾಡಿದ ವ್ಯವಹಾರಕ್ಕೆ ತಕ್ಕಂತೆ ಇಲಾಖೆಯಿಂದ ಕಾಲಕಾಲಕ್ಕೆ ನಿಗದಿಪಡಿಸಿದ ಪ್ರೋತ್ಸಾಹಧನ ನೀಡಲಾಗುವುದು. ಇತರೆ ಟಿಎ/ಡಿಎ ಇತ್ಯಾದಿ ಭತ್ಯೆ ಇರುವುದಿಲ್ಲ. ಹೆಚ್ಚಿನ ಮಾಹಿತಿಗೆ ಅಂಚೆ ಜೀವ ವಿಮಾ ಅಭಿವೃದ್ದಿ ಅಧಿಕಾರಿ ಮೊ.ಸಂ: 9620455929 ನ್ನು ಸಂಪರ್ಕಿಸಬಹುದೆಂದು ಶಿವಮೊಗ್ಗ ವಿಭಾಗದ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.
SUMMARY | A direct interview has been conducted to select direct representatives in Shivamogga division to sell postal insurance and rural life insurance products.
KEYWORDS | Shivamogga, postal insurance, rural life insurance products, interview,