ಅಂಗಡಿ ತೆರೆಯಲು ನೆರವಾದ ಗೃಹಲಕ್ಷ್ಮೀ ಹಣ

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Jan 2, 2025

ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆ ಜಾರಿಗೆ ಬಂದು ಸರಿಸುಮಾರು ಒಂದೂವರೆ ವರ್ಷಗಳೇ ಕಳೆದಿವೆ. ಈ ಹಿನ್ನಲೆ ರಾಜ್ಯ ಸರ್ಕಾರ ನೀಡುತ್ತಿರುವ ಮಾಸಿಕ 2000 ರೂಪಾಯಿಯನ್ನು ರಾಜ್ಯದ ಅನೇಕ ಗೃಹಿಣಿಯರು ಸಮರ್ಪಕವಾಗಿ ಬಳಸಿಕೊಂಡು ಜೀವನವನ್ನು ಕಟ್ಟಿಕೊಳ್ಳುತ್ತಿದ್ದಾರೆ.

ಇದಕ್ಕೆ  ಎಂಬಂತೆ ಭದ್ರಾವತಿ ತಾಲೂಕಿನ ಜಯನಗರ ಗ್ರಾಮದ ಫಲಾನುಭವಿ ಕಾವ್ಯ ಅವರು ಗೃಹಲಕ್ಷ್ಮಿ ಯೋಜನೆಯಡಿ ಬಂದಿದ್ದ ಹಣವನ್ನು ಕೂಡಿಟ್ಟು ಸ್ವಂತ ಅಂಗಡಿಯನ್ನು ತೆರೆದಿದ್ದಾರೆ. ಕಾವ್ಯರವರಿಗೆ ಗೃಹಲಕ್ಷ್ಮೀ ಯೋಜನೆಯಿಂದ  10 ತಿಂಗಳಲ್ಲಿ ಒಟ್ಟು 20 ಸಾವಿರ ಹಣ ಬಂದಿತ್ತು. ಆ ಹಣವನ್ನು ಹಾಗೇ ಕೂಡಿಸಿಟ್ಟಿದ್ದ ಕಾವ್ಯ ಅದಕ್ಕೆ ಇನ್ನಷ್ಟು ಹಣವನ್ನು ಸೇರಿಸಿ ಅಂಗಡಿ ತೆರೆದು ವ್ಯಾಪಾರ ಮಾಡುತ್ತಿದ್ದಾರೆ.

SUMMARY | Kavya has opened her own shop with the money she received under the Grihalakshmi scheme

KEYWORDS | own shop, Grihalakshmi scheme, state government,

Share This Article