ಶಿವಮೊಗ್ಗದಲ್ಲಿ ನಡೆಯಬೇಕಿದ್ದ ಕಂಬಳ ರದ್ದು, ಕಾರಣವೇನು

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Mar 31, 2025

ಶಿವಮೊಗ್ಗದಲ್ಲಿ ಇದೇ ಮೊದಲ ಬಾರಿಗೆ ಏಪ್ರಿಲ್‌ 19 ಹಾಗೂ 20 ಕ್ಕೆ ನಡೆಯಬೇಕಿದ್ದ ಕಂಬಳ ರದ್ದಾಗಿದೆ. ಕಂಬಳ ಕುರಿತು ಪ್ರಾಣಿ ದಯಾ ಸಂಘ ಕೋರ್ಟ್‌ ಮೊರೆ ಹೋಗಿರುವ ಕಾರಣ ಶಿವಮೊಗ್ಗದಲ್ಲಿ ಕಂಬಳವನ್ನು ರದ್ದುಪಡಿಸಲಾಗಿದೆ ಎನ್ನಲಾಗಿದೆ.

- Advertisement -

ಶಿವಮೊಗ್ಗದಲ್ಲಿ ಅದ್ದೂರಿಯಾಗಿ ಕಂಬಳವನ್ನು ನಡೆಸಲು ನಿರ್ಧರಿಸಲಾಗಿತ್ತು. ಅಷ್ಟೇ ಅಲ್ಲದೆ ಅದಕ್ಕೆ ಗುದ್ದಲಿ ಪೂಜೆಯನ್ನು ಸಹ ನೆರವೇರಿಸಲಾಗಿತ್ತು.  ಮಾಚೇನಹಳ್ಳಿಯಲ್ಲಿರುವ 16 ಎಕರೆ ಜಾಗದಲ್ಲಿ ಟ್ರ್ಯಾಕ್‌ನ್ನು ನಿರ್ಮಿಸಲು ಯೋಜಿಸಲಾಗಿತ್ತು. ಸುಮಾರು 6 ಕೋಟಿ ವೆಚ್ಚದಲ್ಲಿ ಈ ಕಂಬಳವನ್ನು ನಡೆಸಲು ತೀರ್ಮಾನಿಸಲಾಗಿತ್ತು. ಅದರೆ ಪ್ರಾಣಿ ದಯಾ ಸಂಘ ನೂರಾರು ಕಿಲೋಮೀಟರ್‌ ದೂರ ಕೋಣಗಳನ್ನು ಕರೆದುಕೊಂಡು ಹೋಗುವುದು ಸರಿಯಲ್ಲ, ಇದರಿಂದ ಪ್ರಾಣಿಗಳಿಗೆ ತೊಂದರೆಯಾಗುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿದೆ. ಆ ಹಿನ್ನಲೆ ಇದೀಗ ಜಿಲ್ಲಾ ಕಂಬಳ ಸಮಿತಿಗೆ ನ್ಯಾಯಾಲಯದಿಂದ ನೋಟೀಸ್‌ ಜಾರಿಯಾಗಿದೆ. ಆದ್ದರಿಂದ ಶಿವಮೊಗ್ಗದಲ್ಲಿ ನಡೆಸುವ ಕಂಬಳವನ್ನು ಏಪ್ರಿಲ್‌ 19 ರಂದು ಬೈಂದೂರಿನಲ್ಲಿ ನಡೆಸಲು ತೀರ್ಮಾನಿಸಲಾಗಿದೆ.  ಶಿವಮೊಗ್ಗದಲ್ಲಿ ಮೊದಲ ಬಾರಿಗೆ ಕಂಬಳ ಆಯೋಜಿಸಲಾಗಿದ್ದು, ಈ ಹಿನ್ನಲೆ ಕಂಬಳ ನೋಡಬೇಕೆಂದು ಕೊಂಡಿದ್ದ ಎಷ್ಟೋ ಜನರ ಆಸೆಗೆ ತಣ್ಣಿರು ಎರೆಚಿದಂತಾಗಿದೆ.

SUMMARY | Kambala has been cancelled in Shivamogga as the Animal Daya Sangha has approached the court over kambala.

KEYWORDS |  Kambala,  cancelled,  Shivamogga, 

Share This Article
Leave a Comment

Leave a Reply

Your email address will not be published. Required fields are marked *