ಶಿವಮೊಗ್ಗದಲ್ಲಿ ಇಂಟೀರಿಯರ್‌ ವರ್ಕ್‌ ಮಾಡಲು ಬಂದವರು ದೋಚಿದ್ದು 2 ಲಕ್ಷದ ವಸ್ತು | ಏನಿದು ಘಟನೆ

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Apr 8, 2025

ಶಿವಮೊಗ್ಗದ ಬ್ಯೂಟಿ ಪಾರ್ಲರ್‌ ಒಂದರಲ್ಲಿ ಇಂಟೀರಿಯರ್‌ ಕೆಲಸಕ್ಕೆಂದು ಬಂದವರು ಲಕ್ಷಾಂತರ ಮೌಲ್ಯದ ವಸ್ತುಗಳನ್ನು ದೋಚಿಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ. ಈ ಹಿನ್ನಲೆ ವಿನೋಬನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

ಏನಿದು ಘಟನೆ 

ನೇತ್ರಾವತಿ ಎಂಬುವವರು ವಿನೋಬನಗರ 60 ಅಡಿ ರಸ್ತೆ ಶುಭ ಮಂಗಳ ಹತ್ತಿರವಿರುವ ತೀರ್ಥ ಸದನದಲ್ಲಿ ಬ್ಯೂಟಿ ಪಾರ್ಲರ್‌ ಒಂದನ್ನು ನಡೆಸುತ್ತಿದ್ದರು. ಹಾಗೆಯೇ ಆ ಬ್ಯೂಟಿ ಪಾರ್ಲರ್‌ಗೆ ಇಂಟೀರಿಯರ್‌ ವರ್ಕ್‌ ಮಾಡಲು ಕೆಲಸಗಾರರಿಗೆ ಬಿಟ್ಟಿದ್ದರು. ಕೆಲಸಗಾರರು ತಮ್ಮ ಕೆಲಸವನ್ನು ಮುಗಿಸಿ ಅಲ್ಲಿಯೇ ಮಲಗುತ್ತಿದ್ದರು. ಆದರೆ ಮಾರ್ಚ್‌ 14 ರಂದು ಬೆಳಿಗ್ಗೆ ಮಾಲೀಕರಾದ ನೇತ್ರಾವತಿ ಪಾರ್ಲರ್‌ಗೆ ಬಂದು ನೋಡಿದಾಗ ಅವರಿಗೆ ಆಘಾತ ಎದುರಾಗಿತ್ತು,  ಅದೇನೆಂದರೆ ಕಳ್ಳರು ಸಲೂನ್‌ಗೆ ಬೀಗ ಹಾಕಿ ಬೀಗದ ಕೀಯನ್ನು ಬಿಸಾಡಿ ಸುಮಾರು ಎರಡು ಲಕ್ಷದ ವಸ್ತುಗಳನ್ನು ದೋಚಿಕೊಂಡು ಪರಾರಿಯಾಗಿದ್ದರು. ಹಾಗೆಯೇ ಎಷ್ಟೇ ಫೋನ್‌ ಮಾಡಿದರು ಸಹ ಕಾಲ್‌ ಮಾಡುತ್ತಿರಲಿಲ್ಲ. ನಂತರ ಸಿಸಿ ಟಿವಿಯನ್ನು ಪರಿಶೀಲಿಸಿದಾಗ ಕೆಲಸಗಾರರೇ ವಸ್ತುಗಳನ್ನು ಕಳುವು ಮಾಡಿದ್ದಾರೆಂಬುದು ಮಾಲಿಕರಿಗೆ ತಿಳಿಯಿತು. ಆ ಹಿನ್ನಲೆ ಮಾಲೀಕರು ಕೆಲಸಗಾರರಾದ ರಾಮಮೂರ್ತಿ, ಕಿಶೋರ, ನರೇಶ್, ದೀಪಕ್, ಸಂದೀಪ್, ಎಂಬುವವರ ಮೇಲೆ  ವಿನೋಬನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ. 

SUMMARY | In a shocking incident, a group of people who had come to work as an interior worker at a beauty parlour in Shivamogga were robbed of valuables worth lakhs of rupees

KEYWORDS |  Shivamogga,  beauty parlour, robbed,

Share This Article
Leave a Comment

Leave a Reply

Your email address will not be published. Required fields are marked *