ರೈಲ್ವೆ ಕ್ರಾಸಿಂಗ್‌ ಗೇಟ್‌ ಕ್ಲೋಸ್‌ | ಬೈಕ್‌ನ್ನು ಹೆಗಲ ಮೇಲೆ ಹೊತ್ತು ಗೇಟ್‌ ಕ್ರಾಸ್‌ ಮಾಡಿದ ಭೂಪ

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Mar 8, 2025

ಪ್ರತಿನಿತ್ಯ ಕೆಲಸದ ಒತ್ತಡದಲ್ಲಿ ಸಮಯವನ್ನು ಉಳಿಸಲು ಜನರು ನಾನಾ ರೀತಿಯ  ಕಸರತ್ತನ್ನು ಮಾಡುತ್ತಲೇ ಇರುತ್ತಾರೆ. ಆಫೀಸ್‌ಗೆ ಹೋಗುವರು ರಸ್ತೆಯಲ್ಲಿ ಒಂದು 5 ನಿಮಿಷದ ಸಿಗ್ನಲ್‌ ಬಿತ್ತೆಂದರೆ ಸಾಕು ಯಾಕಾಪ್ಪಾ ಈ ಸಿಗ್ನಲ್‌ ಬೀಳುತ್ತೆ, ಕೆಲಸಕ್ಕೆ ತಡವಾದರೆ ಮ್ಯಾನೇಜರ್‌ ಬೈಯುತ್ತಾನೆ ಎಂದು ಮನಸೊಳಗೆ ಗೊಣಗುತ್ತಾ ಹಿಡಿ ಶಾಪವನ್ನು ಹಾಕುತ್ತಿರುತ್ತಾರೆ. ಇದರ ನಡುವೆ ಇಲ್ಲೊಬ್ಬ ಸಮಯವನ್ನು ಉಳಿಸಲು ದೊಡ್ಡ ಸಾಹಸ ಒಂದಕ್ಕೆ ಕೈ ಹಾಕಿದ್ದಾನೆ.  ಅದೇನೆಂದರೆ ರೈಲು ಕ್ರಾಸಿಂಗ್‌ ಮಾಡುವ ಸಲುವಾಗಿ  ವಾಹನ ಸಂಚಾರ ಮಾಡುವ ಗೇಟ್‌ನ್ನು ಬಂದ್‌ ಮಾಡಲಾಗಿತ್ತು. ಆದರೆ ಆತ ರೈಲು ಕ್ರಾಸ್‌ ಆಗುವುದರ ಒಳಗೆ ಸಮಯವನ್ನು ಉಳಿಸುವ ಸಲುವಾಗಿ ತನ್ನ ಬೈಕ್‌ನ್ನು ಒಬ್ಬನೆ  ಹೆಗಲ ಮೇಲೆ ಹೊತ್ತುಕೊಂಡು ಹಳಿಯನ್ನು ಕ್ರಾಸ್‌ ಮಾಡಿದ್ದಾನೆ. ಆತನ ಈ ಸಾಹಸವನ್ನು ಅಲ್ಲಿ ನೆರೆದಿದ್ದ ಜನ ಮೂಗಿನ ಮೇಲೆ ಬೆರಳಿಟ್ಟು ಆಶ್ಚರ್ಯಚಕಿತರಾಗಿ ನೋಡುತ್ತಾ ನಿಂತಿದ್ದಾರೆ. 

- Advertisement -



17 ಸೆಕೆಂಡ್‌ ಇರುವ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು ಈ ವಿಡಿಯೋ ಒಂದು ಮಿಲಿಯನ್‌ಗೂ ಅಧಿಕ ವೀಕ್ಷಣೆ ಕಂಡಿದೆ. ಅಷ್ಟೇ ಅಲ್ಲದೆ ಅಪಾಯ ತಂದೊಡ್ಡುವ ಈ ವಿಡಿಯೋಗೆ ನೆಟ್ಟಿಗರು  ನಾನಾ ರೀತಿಯ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ.

SUMMARY |  In order to save time before the train crossed, he carried his bike on his shoulders alone and crossed the track.

KEYWORDS | train crossed, bike,  viral video,

Share This Article