ಮಧ್ಯಮವರ್ಗದ ದುಡ್ಡಿನ ಚೀಲದಲ್ಲಿ ಉಳಿತಾಯ ಖಾತೆ ಓಪನ್‌ | ಟ್ಯಾಕ್ಸ್‌ ಕಟ್ಟಂಗಿಲ್ಲಂತೋ!?

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Feb 1, 2025

ಇಂದು 2025-26 ನೇ ಸಾಲಿನ ಕೇಂದ್ರ ಬಜೆಟ್‌ನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿದ್ದಾರೆ. ವಿಶೇಷ ಅಂದರೆ ಈ ಬಾರಿಯ ಬಜೆಟ್‌ನಲ್ಲಿ ವಿತ್ತ ಸಚಿವೆ, ಮಧ್ಯಮವರ್ಗ ಹಾಗೂ ವೇತನ ಪಡೆಯುವ ನೌಕರ ವರ್ಗಕ್ಕೆ ಬಿಗ್‌ ನ್ಯೂಸ್‌ ಕೊಟ್ಟಿದ್ದಾರೆ. ಮಾರ್ಚ್‌ ಅಂತ್ಯಕ್ಕೆ ಮುಲಾಜಿಲ್ಲದೆ ಕಟ್‌ ಮಾಡಿಕೊಳ್ಳುತ್ತಿದ್ದ ಟ್ಯಾಕ್ಸ್‌ಗೆ ವಿನಾಯಿತಿ ನೀಡಿದ್ದಾರೆ. 

- Advertisement -

ನಿಜ ನಿರ್ಮಲಾ ಸೀತಾರಾಮನ್‌ ವಾರ್ಷಿಕ ಎಳು ಲಕ್ಷ ರೂಪಾಯಿಗಿದ್ದ ಟ್ಯಾಕ್ಸ್‌ ವಿನಾಯಿತಿಯನ್ನು 12 ಲಕ್ಷ ಕ್ಕೆ ಏರಿಸಿದ್ದಾರೆ. ಬದಲಾದ ವೇತನ ವ್ಯವಸ್ಥೆ ಹಾಗೂ ಆರ್ಥಿಕತೆಯನ್ನು ಗಮನದಲ್ಲಿಟ್ಟುಕೊಂಡು ಈ ವಿನಾಯಿತಿಯನ್ನು ನೀಡಲಾಗಿದೆಯಾದರೂ ಸಹ ಕೇಂದ್ರದ ನಿರ್ಧಾರದಿಂದ ಮಿಡ್ಲ್‌ ಕ್ಲಾಸ್‌ ಮಂದಿಗೆ ದೊಡ್ಡ ಅನಕೂಲವೇ ಆಗಲಿದೆ. ಎಷ್ಟೆಂದರೆ, ವರ್ಷಕ್ಕೊಮ್ಮೆ ಉಳಿಯುವ ಟ್ಯಾಕ್ಸ್‌ ನಿಂದ ಮನೆಗೆ ಸರಿಸುಮಾರು ಅರ್ಧ ಲಕ್ಷ ಮೊತ್ತದ ಸಾಮಗ್ರಿಗಳನ್ನು ತಂದುಕೊಳ್ಳಬಹುದು. 

ವಾರ್ಷಿಕ 12 ಲಕ್ಷ ರೂಪಾಯಿವರೆಗೂ ಆದಾಯ ಹೊಂದಿರುವರರು ಟ್ಯಾಕ್ಸ್‌ ಕಟ್ಟಂಗಿಲ್ಲ. standard deduction ಅಂದರೆ, ನಿಗದಿತ ಮೊತ್ತದ ಟ್ಯಾಕ್ಸ್‌ ಹೊಂದಿದ್ದ ನೌಕರರಿಗೆ ಈ ವಿನಾಯಿತಿ 12.70 ಲಕ್ಷವರೆಗೂ ಸಿಗಲಿದೆ. ಉಳಿದಂತೆ ಕೆಲವೆ ಕ್ಷಣಗಳಲ್ಲಿ ಪೂರ್ತಿ ಟ್ಯಾಕ್ಸ್‌ ಚಿತ್ರಣ ನೀಡುತ್ತವೆ. 

 ಇದು ನಿರ್ಮಲಾ ಸೀತಾರಾಮ್‌ ರವರು ಮಂಡಿಸುತ್ತಿರುವ 8ನೇ ಕೇಂದ್ರ ಬಜೆಟ್‌ ಆಗಿದ್ದು, ಇದರಲ್ಲಾಗಿರುವ ಕೆಲವು ಬದಲಾವಣೆಗಳಿಂದ ಮಧ್ಯಮ ವರ್ಗದ ಜನರಿಗೆ ಉಪಯೋಗವಾಗಿದೆ.

SUMMARY | Union Finance Minister Nirmala Sitharaman will present the Union Budget 2025-26 today.

KEYWORDS |  Union Finance Minister,  Nirmala Sitharaman, Union Budget, 2025-26 ,

Share This Article
Leave a Comment

Leave a Reply

Your email address will not be published. Required fields are marked *