ಫೆ. 27 ಬಿಎಸ್‌ವೈ ಹೊನಲು ಬೆಳಕಿನ ಥ್ರೋಬಾಲ್‌ ಕಪ್ 

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Feb 24, 2025

ಶಿವಮೊಗ್ಗ |  ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪರವರ 81 ನೇ ಜನ್ಮದಿನದ ದಿನದ ಪ್ರಯುಕ್ತ ಫೆಬ್ರವರಿ 27 ರಂದು ಮಹಿಳೆ ಮತ್ತು ಪುರುಷರ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಥ್ರೋಬಾಲ್‌ ಪಂದ್ಯಾವಳಿಯನ್ನು ಜಿಲ್ಲಾ ಥ್ರೋ ಬಾಲ್‌ ಅಸೋಸಿಯೇಷನ್‌ ವತಿಯಿಂದ ನಗರದ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಬಿಜೆಪಿ ಮುಖಂಡ ಬಳ್ಳೇಗೆರೆ ಸಂತೋಷ್‌ ತಿಳಿಸಿದರು.

- Advertisement -

ಇಂದು ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಜಿಲ್ಲಾ ಮಟ್ಟದ ಆಹ್ವಾನಿತ ಹೊನಲು ಬೆಳಕಿನ “ಬಿ.ಎಸ್.ವೈ. ಕಪ್ ಥ್ರೋಬಾಲ್ ಪಂದ್ಯಾವಳಿಯನ್ನು ಮಹಿಳೆಯರು ಮತ್ತು ಪುರುಷರಿಗಾಗಿ ಆಯೋಜಿಸಲಾಗಿದೆ. ಹೊನಲು ಬೆಳಕಿನ ಥ್ರೋಬಾಲ್ ಪಂದ್ಯಾವಳಿಯಲ್ಲಿ ಮಹಿಳೆಯರು ಮತ್ತು ಪುರುಷರ 15 ತಂಡಗಳು ಭಾಗವಹಿಸಿ, ಅದ್ಭುತ ಆಟದ ಪ್ರದರ್ಶನ ನೀಡಲಿವೆ. ವಿಜೇತ ತಂಡಗಳಿಗೆ ಆಕರ್ಷಕ ಬಹುಮಾನ ಮತ್ತು ಟ್ರೋಫಿ ಹಾಗೂ ಪಾರಿತೋಷಕಗಳನ್ನು ನೀಡಲಾಗುವುದು ಈ ಕ್ರೀಡಾ ಕೂಟದ ಉದ್ಘಾಟನೆಯನ್ನು ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್‌ ಯಡಿಯೂರಪ್ಪನವರು ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ವಿಧಾನಪರಿಷತ್‌ ಸದಸ್ಯರಾದ ಡಿ ಎಸ್‌ ಅರುಣ್‌ ವಹಿಸಲಿದ್ದಾರೆ. ಆ ವೇಳೆ  ಸಂಸದರಾದ ಬಿವೈ ರಾಘವೇಂದ್ರ ಸೇರಿದಂತೆ ಪ್ರಮುಖರು ಉಪಸ್ಥಿತರಿರಲಿದ್ದಾರೆ ಎಂದರು.

ಒಂದು ದಿನ ಹಗಲು ಹಾಗೂ ಹೊನಲು ಬೆಳಕಿನ  ಕ್ರೀಡಾ ಕೂಟದಲ್ಲಿ 2 ಥ್ರೋಬಾಲ್‌ ಅಂಕಣದ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಕ್ರೀಡಾ ಕೂಟದಲ್ಲಿ 20 ವರ್ಷ ಮೇಲ್ಪಟ್ಟ ಕ್ರೀಡಾ ಪಟುಗಳನ್ನೊಳಗೊಂಡ  ಜಿಲ್ಲೆಯ ಪುರುಷ ಹಾಗೂ ಮಹಿಳಾ ತಂಡಗಳು ಭಾಗವಹಿಸಬಹುದಾಗಿದೆ. ಆಟಗಾರ ಅನುಕೂಲಕ್ಕಾಗಿ ಉತ್ತಮ ಅಂಕಣಗಳನ್ನು ಸಿದ್ಧಪಡಿಸಲಾಗಿದೆ. ರಾಷ್ಟ್ರ ಮಟ್ಟದ ನುರಿತ ಥೋಬಾಲ್ ತೀರ್ಪುಗಾರರು ಆಗಮಿಸಲಿದ್ದಾರೆ. ಜಿಲ್ಲೆಯ ವಿವಿಧ ತಾಲೂಕುಗಳಿಂದ ಬರುವ ಎಲ್ಲಾ ಕ್ರೀಡಾಪಟುಗಳಿಗೂ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. 

ಬಹುಮಾನದ ವಿವರಗಳನ್ನು ನೋಡುವುದಾದರೆ ಮಹಿಳೆಯರ ವಿಭಾಗದಲ್ಲಿ ಪ್ರಥಮ ಬಹುಮಾನ 6 ಸಾವಿರ ದ್ವಿತೀಯ ಬಹುಮಾನ 4 ಸಾವಿರ ತೃತೀಯ ಬಹುಮಾನ 3 ಸಾವಿರ ಚತುರ್ಥ ಬಹುಮಾನ 2 ಸಾವಿರ ರೂಪಾಯಿಗಳನ್ನು ನಿಗದಿ ಪಡಿಸಲಾಗಿದೆ. ಪುರುಷರಿಗೂ ಸಹ ಇದೇ ಮಾದರಿಯ ಬಹುಮಾನಗಳನ್ನು ನಿಗದಿಪಡಿಸಲಾಗಿದೆ ಎಂದರು.

SUMMARY | Bjp leader Ballagere Santhosh said that the District Throwball Association will organise a district-level women’s and men’s district-level throwball tournament on February 27 at Nehru Stadium in the city.

KEYWORDS | Ballagere Santhosh, Nehru Stadium,  throwball tournament,  yeddyurappa cup,

Share This Article
Leave a Comment

Leave a Reply

Your email address will not be published. Required fields are marked *