ಟ್ಯಾಟೂ ಹಾಕ್ಸೋದ್ರಿಂದ ಬರುತ್ತೆ ಕ್ಯಾನ್ಸರ್‌  | ಅಪಾಯ ತಡೆಗಟ್ಟಲು ಸರ್ಕಾರದಿಂದ ಹೊಸ ಮಾರ್ಗಸೂಚಿ

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Mar 1, 2025\

ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಯುವಜನತೆ ಫ್ಯಾಷನ್‌ಗಾಗಿ ಹಚ್ಚೆಗಳನ್ನು (ಟ್ಯಾಟೋ) ಗಳನ್ನು ಹಾಕಿಸುತ್ತಿದ್ದು, ಅಂತಹವರಿಗೆ ಈಗ ದೊಡ್ಡದೊಂದು ಶಾಕ್‌ ಎದುರಾಗಿದೆ. ಅದೇನೆಂದರೆ ಹಚ್ಚೆ  ಹಾಕುವ ಶಾಯಿ ಮತ್ತು ಬಣ್ಣಗಳಲ್ಲಿ 22 ರೀತಿಯ ಲೋಹಗಳು ಕಂಡು ಬಂದಿದ್ದು, ಇದು ಕ್ಯಾನ್ಸರ್ ನಂತಹ ಗಂಭೀರ ರೋಗಗಳಿಗೆ ಎಡೆಮಾಡಿಕೊಡಲಿದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ.

- Advertisement -



ಈ ಕುರಿತು ತಮ್ಮ ಟ್ವೀಟರ್‌ ಖಾತೆಯಲ್ಲಿ ಪೋಸ್ಟ್‌ನ್ನು ಶೇರ್‌ ಮಾಡಿರುವ ಅವರು ಟ್ಯಾಟೋ ಕುರಿತಾಗಿ   ನಮ್ಮ ಇಲಾಖೆಯು   ಗಂಭೀರವಾಗಿ  ಪರಿಗಣಿಸಿದ್ದು, ಅದರಿಂದ ಉಟಾಗುವ ಅಪಾಯವನ್ನು ತಡೆಗಟ್ಟಲು ಹೊಸ ಮಾರ್ಗಸೂಚಿಗಳನ್ನು ತರಲು ಸಿದ್ಧವಾಗಿದೆ. ಇದರ ಜೊತೆಗೆ ಕೇಂದ್ರ ಔಷಧ ನಿಯಂತ್ರಣಕ್ಕೆ ಕಟ್ಟುನಿಟ್ಟಾದ ಮಾರ್ಗಸೂಚಿಗಳು ಮತ್ತು ಸುರಕ್ಷತಾ ನಿಯಮಗಳನ್ನು ಜಾರಿಗೊಳಿಸಲು ಒತ್ತಾಯಿಸುತ್ತಿದೆ. ಸಾರ್ವಜನಿಕ ಆರೋಗ್ಯ ನಮ್ಮ ಆದ್ಯತೆಯಾಗಿದ್ದು, ಜನರ ಆರೋಗ್ಯ ರಕ್ಷಣೆಗೆ ಎಲ್ಲಾ ಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುವುದು. ಎಂದು ಬರೆದುಕೊಂಡಿದ್ದಾರೆ. 

Malenadu Today

SUMMARY | As many as 22 types of metals have been found in tattooing ink and paints, which can lead to serious diseases like cancer

KEYWORDS | metals, cancer, tattoo, dinesh gundu rao, state government,

Share This Article
Leave a Comment

Leave a Reply

Your email address will not be published. Required fields are marked *