ಚಂದ್ರಗುತ್ತಿ ಕೋಟೆಯಲ್ಲಿ ವಿಜಯನಗರ ಕಾಲದ ವೀರಗಲ್ಲು ಪತ್ತೆ

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Jan 31, 2025

ಸೊರಬ | ತಾಲೂಕಿನ ಚಂದ್ರಗುತ್ತಿಯಲ್ಲಿ ಪುರಾತನ ಕಾಲದ ವೀರಗಲ್ಲೊಂದು ಪತ್ತೆಯಾಗಿದೆ. ಈ ಶಾಸನವನ್ನು ಪ್ರೌಡಶಾಲೆ ನಿವೃತ್ತ ಶಿಕ್ಷಕರಾದ ಯಶವಂತಪ್ಪ ಅವರು ಪತ್ತೆಹಚ್ಚಿದ್ದಾರೆ.

- Advertisement -

ಈ ಪುರಾತನವಾದ ವೀರಗಲ್ಲನ್ನು ಯಶವಂತಪ್ಪರವರು ಇತಿಹಾಸ ಸಂಶೋಧಕ ಶ್ರೀಪಾದ ಬಿಚ್ಚುಗತ್ತಿ ಅವರಿಗೆ ತೋರಿಸಿದ್ದಾರೆ. ಈ ವೀರಗಲ್ಲನ್ನ ಗಮನಿಸಿದ ಅವರು ಇದು ವಿಜಯನಗರ ಕಾಲದ ವೀರಗಲ್ಲಾಗಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ. ಅಷ್ಟೇ ಅಲ್ಲದೆ ಈ ವೀರಗಲ್ಲಲ್ಲಿ ಆರಗದ ದೇವಪ್ಪ ಒಡೆಯರ ಉಲ್ಲೇಖ ಕಾಣಿಸುತ್ತಿದ್ದು, ಸ್ವಚ್ಛಗೊಳಿಸಿ ಓದಬೇಕಿದೆ.  ಸದ್ಯದಲ್ಲಿಯೆ ಶಾಸನ ತಜ್ಞ ರಮೇಶ್ ಹಿರೆಜಂಬೂರು ಹಾಗೂ ಚುರ್ಚುಗುಂಡಿ ಮಂಜಪ್ಪ ಅವರನ್ನು ಕರೆಸಿ ಇದನ್ನು ಪೂರ್ಣವಾಗಿ  ಓದಿಸೋಣ ಎಂದು ಸಂಶೋದಕರು ಹೇಳಿದ್ದಾರೆ.

ಚಂದ್ರಗುತ್ತಿ ಯಲ್ಲಿ ಕಂಡುಬಂದ ಮೊದಲ ವೀಎಗಲ್ಲು ಇದಾಗಿದ್ದು, ಇದು ಚಂದ್ರಗುತ್ತಿ ಕೋಟೆ, ಇತಿಹಾಸದ ಮಹತ್ವಪೂರ್ಣ ದಾಖಲೆಯಾಗಲಿದೆ. ಇಲ್ಲಿನ ರೇಣುಕಾ ದೇಗುಲವೂ ಸೇರಿದಂತೆ ವಿಠ್ಠಲ ದೇವಸ್ಥಾನ, ಪಾಳುಗೊಂಡ ಚಂದ್ರನಾಥ ಬಸದಿ, ಕೋಟೆಯೊಳಗಿನ ಕೆಲವು ಪಾಳು ಕಟ್ಟಡ, ಊರೊಳಗಿನ ಕಲ್ಯಾಣಿ, ಈಶ್ವರ ದೇಗುಲದ ಅವಶೇಷ ಎಲ್ಲವೂ ವಿಜಯನಗರದ ಅವಧಿಯದ್ದಾಗಿದೆ. ಈ ಎಲ್ಲಾ ಆಕರಗೊಳೊಂದಿಗೆ ಪ್ರಸ್ತುತ ದೊರಕಿರುವ ಶಾಸನ ಮಹತ್ವದ್ದು ಎಂದು ಸಂಶೋಧಕರು ಹೇಳಿದ್ದಾರೆ.

SUMMARY | An ancient hero has been found at Chandragutti in the taluk. This inscription was discovered by Yashwanthappa, a retired high school teacher.

KEYWORDS | ancient , Chandragutti,  soraba

Share This Article
Leave a Comment

Leave a Reply

Your email address will not be published. Required fields are marked *