ಇನ್ಮುಂದೆ ರಾಜ್ಯದ  ಚಿತ್ರಮಂದಿರಗಳಲ್ಲಿ ಟಿಕೆಟ್‌ ದರ 200 ರೂ ಮೀರುವಂತಿಲ್ಲ

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Mar 7, 2025

ರಾಜ್ಯದಲ್ಲಿ ಮಲ್ಟಿಫ್ಲೆಕ್ಸ್‌ ಸೇರಿದಂತೆ ಎಲ್ಲಾ ಚಿತ್ರಮಂದಿರಗಳಲ್ಲಿ ಸಿನಿಮಾ ಟಿಕೆಟ್‌ ಬೆಲೆ 200 ರೂಪಾಯಿ ಮೀರುವಂತಿಲ್ಲ ಎಂದು ಇಂದಿನ ರಾಜ್ಯ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.

- Advertisement -

ಇಂದು 2025-26 ನೇ ಸಾಲಿನ ಹಣಕಾಸು ವರ್ಷದ ರಾಜ್ಯ ಬಜೆಟ್‌ನ್ನು ಸಿಎಂ ಸಿದ್ದರಾಮಯ್ಯ ಮಂಡಿಸಿದ್ದಾರೆ. ಈ ಬಜೆಟ್‌ನಲ್ಲಿ ಮೂಲಸೌಕರ್ಯ, ಧಾರ್ಮಿಕ ಹಂಚಿಕೆಗಳು, ಸಿನಿಮಾ ಪ್ರಚಾರ ಗ್ಯಾರಂಟಿ ಯೋಜನೆ ಮತ್ತು ಮಹಿಳಾ ಸಬಲೀಕರಣ ಸೇರಿದಂತೆ ಪ್ರಮುಖ  ವಿಷಯಗಳಿಗೆ  ಹೆಚ್ಚಿನ ಮಹತ್ವ ನೀಡಲಾಗಿತ್ತು.  ಅದರಂತೆಯೇ ಒಟ್ಟು  4,08,647 ಕೋಟಿ ರೂಪಾಯಿ ಮೌಲ್ಯದ ಬಜೆಟ್‌ನ್ನು ಸಿಎಂ ಮಂಡಿಸಿದ್ದರು. ಈ ವೇಳೆ ಪ್ರಮುಖ ಚಲನಚಿತ್ರ ಬಿಡುಗಡೆಗೆ ಮುಂಚಿತವಾಗಿ ಟಿಕೆಟ್ ದರವನ್ನು ಹೆಚ್ಚಿಸುವಂತೆ ಆಗಾಗ ರಾಜ್ಯ ಸರ್ಕಾರಕ್ಕೆ ಕೇಳಿಕೊಳ್ಳುತ್ತಿದ್ದ, ನಿರ್ಮಾಪಕರಿಗೆ ಬಿಗ್‌ ಶಾಕ್‌ ಎದುರಾಗಿದೆ.  ಅದೇನೆಂದರೆ ರಾಜ್ಯ ಸರ್ಕಾರ ರಾಜ್ಯದಲ್ಲಿ ಮಲ್ಟಿಫ್ಲೆಕ್ಸ್‌ ಸೇರಿದಂತೆ  ಎಲ್ಲಾ ಥೇಟರ್‌ಗಳಲ್ಲಿ ಸಿನಿಮಾ ಟಿಕೇಟ್‌ ದರವು 200 ರೂ ಮೀರುವಂತಿಲ್ಲ ಎಂದು ಘೋಷಿಸಿದೆ. ಅಷ್ಟೇ ಅಲ್ಲದೆ ಈ ಕಾನೂನು ಕರ್ನಾಟಕದಲ್ಲಿ ಬಿಡುಗಡೆಯಾಗುವ ಎಲ್ಲಾ ಚಿತ್ರಗಳಿಗೂ ಅನ್ವಯವಾಗಲಿದ್ದು, ಈ ಹೊಸ ನಿಯಮ ಶೀಘ್ರದಲ್ಲೇ ರಾಜ್ಯಾದ್ಯಂತ ಜಾರಿಯಾಗಲಿದೆ. ಸರ್ಕಾರದ ಈ ಕಾನೂನು ಸಿನಿ ಪ್ರಿಯರಿಗೆ ಸಂತೋಷವನ್ನುಂಟು ಮಾಡಿದೆ.

SUMMARY | Chief Minister Siddaramaiah announced in today’s state budget that the price of movie tickets in all theatres, including multiplexes, should not exceed Rs 200.

KEYWORDS |  Siddaramaiah multiplexes, budget,  movie tickets,

Share This Article
Leave a Comment

Leave a Reply

Your email address will not be published. Required fields are marked *