ಶರತ್​ ಭೂಪಾಳಂ ಸಾವಿಗೆ ಕಾರಣವಾಗಿದ್ದು ಅಗ್ನಿಶಾಮಕ ದಳದ ನಿರ್ಲಕ್ಷ್ಯ? ಕುಟುಂಬಸ್ಥರ ಆರೋಪವೇನು?

ಕಳೇದ ಜನವರಿ 8 ರಂದು ಶಿವಮೊಗ್ಗ ನಗರದ ಕುವೆಂಪು ರಸ್ತೆಯಲ್ಲಿರುವ ಭೂಪಾಳಂರವರ ನಿವಾಸದಲ್ಲಿ ಸಂಭವಿಸಿದ ಅಗ್ನಿದುರಂತದ ಬಗ್ಗೆ ಇದೀಗ ಕೆಲವೊಂದು ಆರೋಪಗಳು ಕೇಳಿಬಂದಿವೆ. ಅಗ್ನಿದುರಂತದಲ್ಲಿ ಶರತ್​ ರವರ ಸಾವು ಸಂಭವಿಸಲು ಅಗ್ನಿಶಾಮಕ ದಳದ ನಿರ್ಲಕ್ಷ್ಯವೂ ಸಹ ಒಂದು ಕಾರಣ ಎಂಬ ಆರೋಪವನ್ನು ಕುಟುಂಬಸ್ಥರು ಮಾಡುತ್ತಿದ್ದಾರೆ. ಈ ಸಂಬಂಧ ಸುದ್ದಿಗೋಷ್ಟಿ ನಡೆಸಿದ ಕುಟುಂಬಸ್ಥರು ಇದೇ ವಿಚಾರವಾಗಿ ಜನವರಿ 16 ರಂದು ಪ್ರತಿಭಟನೆ ನಡೆಸುತ್ತೇವೆ ಎಂದಿದ್ದಾರೆ. 

ಮಹಿಳಾ ಅಭಿಮಾನಿಗಳ ಪ್ರಶ್ನೆಗಳಿಗೆ ಶಿವಣ್ಣನ ರಿಯಾಕ್ಷನ್​ ನೋಡಿ

ಇನ್ನೂ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಶಶಿಧರ್ ಭೂಪಾಳಂ ಘಟನೆ ವೇಳೆ ಅಗ್ನಿ ಶಾಮಕ ದಳದ ಸಿಬ್ವಂದಿಗಳ ಮೈಮೇಲೆ ಸಮವಸ್ತ್ರವಿಲ್ಲದ ಕಾರಣ ಯಾರು ಇಲಾಖೆಯವರು ಯಾರು ಸಾರ್ವಜನಿಕರು ಎಂಬುದೇ ಗುರುತು ಹಿಡಿಯಲು ಕಷ್ಟವಾಗಿತ್ತು ಎಂದು ಆರೋಪಿಸಿದ್ದಾರೆ.  ಅಗ್ನಿಶಾಮಕದಳದ ನಿಲಕ್ಷ್ಯದಿಂದ ಸಾವು ನೋವು ಸಂಭವಿಸಿದೆ. ಈ ಹಿನ್ನೆಲೆ  ಜನವರಿ 16 ರಂದು ಶರತ್ ಭೂಪಾಳಂ ಮನೆ ಶುಭಶ್ರೀಯಿಂದ ಜಿಲ್ಲಾಧಿಕಾರಿಗಳ ಕಚೇರಿಯ ವರೆಗೆ ಬೆಳಿಗ್ಗೆ 10-30 ರವರೆಗೆ  ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು. 

ಅಗ್ನಿಶಾಮಕ ದಳದ ವೈಫಲ್ಯಗಳ ಬಗ್ಗೆ ಭೂಪಾಳಂ ಕುಟುಂಬದ ಆರೋಪವೇನು?

  • 1 ಅಗ್ನಿಶಾಮಕದಳದ ಸಮವಸ್ತ್ರವಿಲ್ಲದ ನೌಕರವರ್ಗ, ಆ ಸಮಯದಲ್ಲಿ ಮನೆಯೊಳಗೆ ನುಗ್ಗಿದ್ದರಿಂದ ಅಗ್ನಿಶಾಮಕ ದಳದವರನ್ನು ಗುರುತಿಸುವಲ್ಲಿ ಗೊಂದಲವಾಗಿತ್ತು
  • 2 ಬೆಳ್ಳಂಬೆಳ್ಳಗೆ ಕತ್ತಲು, ಹೊಗೆಯ  ನಡುವೆ ಟಾರ್ಚ್  ಲೈಟ್‌ಗಳಿಲ್ಲದೆ ಆದ ತೊಂದರೆ,
  • 3 Fire protection, Resistance ಅನುಕೂಲತೆಗಳಿಲ್ಲದೆ ಪರದಾಟ
  • 4 ಆಕ್ಸಿಜನ್ ಸಿಲಿಂಡರ್ ಮತ್ತು ಮಾಸ್ಕ್‌ಗಳಿಲ್ಲದೆ ಪರದಾಟ
  • 5 ನಿವಾಸದ ಕಾಂಪೌಂಡ್‌ನಿಂದ ಒಳಬರಲು ಸಾಕಷ್ಟು ಜಾಗದ ಅವಕಾಶವಿದ್ದರು ವಾಹನಗಳು ಒಳಬರಲು ನಿರಾಕರಿಸಿದ್ದವು
  • 6 ಅಗ್ನಿಶಾಮಕದಳದ ವಾಹನ ಬಂದ ನಂತರವು ನೀರಿನ ಪೈಪ್‌ಗಳ ಕೊರತೆ, ಹೊಂದಾಣಿಕೆ ಇಲ್ಲದ ವಾತಾವರಣದಿಂದ ಮತ್ತಷ್ಟು ಗೊಂದಲ ಉಂಟಾಗಿತ್ತು.
  • 7 ಅಗ್ನಿಶಾಮಕ ದಳದಲ್ಲಿ ಪ್ರಮುಖವಾಗಿ ಬೇಕಾಗಿರುವ ಇನ್ಸಿಡೆಂಟ್ ಅನಾಲಿಸಿಸ್ ಬಗ್ಗೆ ಅಜ್ಞಾನ,
  • 8 ಅತಿಮುಖ್ಯವಾದ ಎರಡನೇ ಆಗ್ನಿಶಾಮಕದಳದ ವಾಹನ ಘಟನೆ ಸಂಭವಿಸಿ ಅರ್ಧಗಂಟೆಯ ನಂತರ ಆಗಮನ, ಈ ವಾಹನದಲ್ಲಿ ಪ್ರಮುಖವಾಗಿ ಬೇಕಾಗಿದ್ದ ಎಲ್ಲಾ ಅನುಕೂಲತೆಗಳಿದ್ದು ಸಮಯಕ್ಕೆ ಒದಗಿಬರಬೇಕಾದರು ಬರದೇ ದುರಂತಕ್ಕೆ ಮೂಲ ಕಾರಣವಾಯಿತು.

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com

Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು