ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬೇರೆ ಬೇರೆ ಪ್ರದೇಶಗಳಲ್ಲಿ ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ ಒಟ್ಟು ನಾಲ್ವರು ಪುರುಷರು ನಾಪತ್ತೆಯಾಗಿದ್ದಾರೆ. ಈ ವ್ಯಕ್ತಿಗಳ ಬಗ್ಗೆ ಸುಳಿವು ನೀಡುವಂತೆ ಪೊಲೀಸ್ ಇಲಾಖೆಯು ಅಧಿಕೃತ ಪ್ರಕಟಣೆ ಹೊರಡಿಸಿದೆ.

ಶಿವಮೊಗ್ಗ | ಬಂಗಾರವಾಯ್ತು ಬೆಳ್ಳಿ : ಕೆಜಿ ಬೆಳ್ಳಿಗೆ 3.64 ಲಕ್ಷ, 10 ಗ್ರಾಂ ಚಿನ್ನಕ್ಕೆ 1.67 ಲಕ್ಷ
ನಾಪತ್ತೆಯಾದವರ ವಿವರಗಳು ಹೀಗಿವೆ
ಶಿವು ಜಿ. (29 ವರ್ಷ): ಹೊಸಮನೆ ನಿವಾಸಿ ಸ್ವಾಮಿ ಎಂಬುವವರ ಸಹೋದರ ಶಿವು ಅವರು 2025ರ ಮೇ ತಿಂಗಳಲ್ಲಿ ಜೆಸಿಬಿ ಚಾಲಕ ಕೆಲಸಕ್ಕೆಂದು ಹೋದವರು ಮರಳಿ ಬಂದಿಲ್ಲ. 5.6 ಅಡಿ ಎತ್ತರ, ಕೋಲು ಮುಖ ಮತ್ತು ಗೋಧಿ ಮೈಬಣ್ಣದ ಈ ಯುವಕನ ಪತ್ತೆಗಾಗಿ ಹುಡುಕಾಟ ಮುಂದುವರಿದಿದೆ.
ಲೋಹಿತ (36 ವರ್ಷ): ನ್ಯೂಮಂಡ್ಲಿ ನಿವಾಸಿ ಲೋಹಿತ ಅವರು ಟೈಲ್ಸ್ ಕೆಲಸಕ್ಕೆಂದು 2025ರ ಆಗಸ್ಟ್‌ನಲ್ಲಿ ಮನೆಯಿಂದ ಹೊರಟು ನಾಪತ್ತೆಯಾಗಿದ್ದಾರೆ. ಇವರು 5.6 ಅಡಿ ಎತ್ತರ, ದುಂಡು ಮುಖ ಹಾಗೂ ಸಾಧಾರಣ ಮೈಕಟ್ಟು ಹೊಂದಿದ್ದಾರೆ.
ಬಿ.ಎಂ. ಸಿದ್ದಯ್ಯ (64 ವರ್ಷ): ಬೊಮ್ಮನಕಟ್ಟೆಯ ನಿವಾಸಿ ಸಿದ್ದಯ್ಯ ಅವರು 2025ರ ಫೆಬ್ರವರಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸಕ್ಕೆ ತೆರಳಿದವರು ಕಾಣೆಯಾಗಿದ್ದಾರೆ. 5.3 ಅಡಿ ಎತ್ತರವಿರುವ ಇವರು ವಯೋಸಹಜವಾಗಿ ಸಾಧಾರಣ ಮೈಕಟ್ಟು ಹೊಂದಿದ್ದಾರೆ.
ಸಚಿನ್ ಈ. (19 ವರ್ಷ): ಗಾಡಿಕೊಪ್ಪದ ಯುವಕ ಸಚಿನ್ 2024ರ ಸೆಪ್ಟೆಂಬರ್‌ನಿಂದಲೇ ಕಾಣೆಯಾಗಿದ್ದು, ಇಂದಿಗೂ ಮನೆಗೆ ಮರಳಿಲ್ಲ. 5.4 ಅಡಿ ಎತ್ತರವಿರುವ ಇವರು ದುಂಡು ಮುಖದ ಚಹರೆ ಹೊಂದಿದ್ದಾರೆ.
ಈ ವ್ಯಕ್ತಿಗಳ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಸಾರ್ವಜನಿಕರು ತಕ್ಷಣ ಪೊಲೀಸ್ ನಿಯಂತ್ರಣ ಕೊಠಡಿ (100) ಅಥವಾ ದೂರವಾಣಿ ಸಂಖ್ಯೆಗಳಾದ 08182-261400, 261424, 9480803308 ಅಥವಾ 9480803373 ಗೆ ಸಂಪರ್ಕಿಸಲು ಮನವಿ ಮಾಡಲಾಗಿದೆ.
Vinobhanagar Police Limits 4 Persons Missing


