Vandalizing Narasimha Swamy Idol in Anavatti, Karnataka ಆನವಟ್ಟಿಯಲ್ಲಿ ನರಸಿಂಹ ಸ್ವಾಮಿ ಮೂರ್ತಿ ವಿರೂಪ: ಆರೋಪಿ ಬಂಧನ
Vandalizing Narasimha Swamy Idol in Anavatti, Karnataka ಆನವಟ್ಟಿ, ಸೊರಬ: ಇಲ್ಲಿನ ಕುಬಟೂರು ಗ್ರಾಮದಲ್ಲಿರುವ ಪುರಾತನ ನರಸಿಂಹ ಸ್ವಾಮಿ ದೇವಸ್ಥಾನದ ಮೂರ್ತಿಯನ್ನು ವಿರೂಪಗೊಳಿಸಿದ ಪ್ರಕರಣದಲ್ಲಿ ಶಿವಮೊಗ್ಗ ಪೊಲೀಸ್ ಇಲಾಖೆ ತತ್ತಕ್ಷಣದ ಕ್ರಮಕೈಗೊಂಡಿದೆ. ಈ ಆರೋಪದ ಅಡಿಯಲ್ಲಿ ದಾಖಲಾದ ಪ್ರಕರಣದಲ್ಲಿ ಓರ್ವನನ್ನು ಆನವಟ್ಟಿ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹಾವೇರಿ ಜಿಲ್ಲೆ, ಹಾನಗಲ್ ತಾಲ್ಲೂಕಿನ ಗೊಂದಿ ಗ್ರಾಮದ ಕೋಟೇಶ್ವರ (32) ಬಂಧಿತ ವ್ಯಕ್ತಿ. ಪಿಎಸ್ಐ ಚಂದನ್ ನೇತೃತ್ವದ ಪೊಲೀಸ್ ತಂಡ ಈ ಕಾರ್ಯಾಚರಣೆ ನಡೆಸಿದೆ.

Vandalizing Narasimha Swamy Idol in Anavatti, Karnataka
ನಿನ್ನೆ ಬೆಳಗ್ಗೆ ದೇವಸ್ಥಾನದ (temple) ಬಾಗಿಲು ತೆರೆದಿರುವುದನ್ನು ಗಮನಿಸಿದ ಗ್ರಾಮಸ್ಥರು, ದೇಗುಲದ ಮೂರ್ತಿಯನ್ನು ವಿರೂಪಗೊಳಿಸಿದ್ದನ್ನು ಗಮನಿಸಿದ್ದಾರೆ. ಈ ಸಂಬಂಧ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ತಕ್ಷಣವೇ ಡಿವೈಎಸ್‌ಪಿ, ಸಿಪಿಐ, ಪಿಎಸ್‌ಐ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.


ಆರೋಪಿ ಮಾನಸಿಕ ಅಸ್ವಸ್ಥ ?
ಆನಂತರ ದೇವಸ್ಥಾನದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ ಸಂದರ್ಭದಲ್ಲಿ ಯುವಕ ಚಹರೆ ಸ್ಪಷ್ಟವಾಗಿದೆ. ಇದನ್ನು ಆಧರಿಸಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರ ವಿಚಾರಣೆ ವೇಳೆ, ಬಂಧಿತ ಕೋಟೇಶ್ವರ ಮಾನಸಿಕ ಅಸ್ವಸ್ಥ (mentally unstable) ಎಂಬುದು ತಿಳಿದುಬಂದಿದೆ. ಆತ ತನ್ನ ಸ್ವಗ್ರಾಮದಲ್ಲೂ ದೇವರ ವಿಗ್ರಹಗಳನ್ನು ನದಿಗೆ ಎಸೆದಿದ್ದ ಎನ್ನಲಾಗಿದೆ. ಈ ಸಂಬಂಧ ಇನ್ನಷ್ಟು ತನಿಖೆ ನಡೆಯುತ್ತಿದೆ.
Vandalizing Narasimha Swamy Idol in Anavatti, Karnataka
A man has been arrested by Anavatti police for allegedly vandalizing a Narasimha Swamy idol at a temple in Kubatur village.
ಆನವಟ್ಟಿ ಸುದ್ದಿ, ನರಸಿಂಹ ಸ್ವಾಮಿ ದೇವಸ್ಥಾನ, ಕುಬಟೂರು ಗ್ರಾಮ, ಮೂರ್ತಿ ವಿರೂಪ, ಮಾನಸಿಕ ಅಸ್ವಸ್ಥ, ಕೋಟೇಶ್ವರ ಬಂಧನ, ಪೊಲೀಸ್ ಬಂಧನ, Anavatti news, Kubatur temple, Narasimha Swamy idol, idol vandalism, mentally unstable accused, Anavatti police, Kotaeshwara arrest , #Anavatti #TempleVandalism #NarasimhaSwamy #Shivamogga #KarnatakaPolice #IdolVandalism #Kubatur #Arrest