ಜಿಂಕೆ ಮಾಂಸದೂಟಕ್ಕೆ ಸಿದ್ದವಾಗುತ್ತಿದ್ದಾಗ ಎಂಟ್ರಿ ಕೊಟ್ಟು ಶಾಕ್ ನೀಡಿದ ಅರಣ್ಯ ಇಲಾಖೆ! ಮೂವರು ಅರೆಸ್ಟ್! ಅಡುಗೆ ಪಾತ್ರೆ ಜಪ್ತಿ

The umblebailu forest officials conducted a raid and arrested three persons and registered a case under the Wildlife Act while the deer was being cooked

Shivamogga Feb 12, 2024 |  ಮಲ್ನಾಡ್​ನಲ್ಲಿ ಬ್ಯಾನ್​ ಇದ್ರೂ ಶಿಕಾರಿ ಮಾತ್ರ ಕತ್ತಲ ರಾತ್ರಿಗಳಲ್ಲಿ ನಡೆಯುತ್ತಲೇ ಇರುತ್ತದೆ. ಕಾಡಿನ ಬೇಟೆ ಎಷ್ಟೆ ಕದ್ದು ಮುಚ್ಚಿ ಮಾಡಿದರೂ ಅದರ ವಾಸನೆ ಅರಣ್ಯ ಇಲಾಖೆಗೂ ಆಗಾಗ ಬಡಿಯುತ್ತಿರುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಇನ್ನೇನು ತಂದ ಶಿಕಾರಿಯ ಅಡುಗೆಯನ್ನ ಉಣ್ಣಲು ಇಕ್ಕಬೇಕು ಎನ್ನುವಷ್ಟರಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಗೃಹಪ್ರವೇಶ ಮಾಡಿದ ಘಟನೆಯೊಂದರ ಬಗ್ಗೆ ವರದಿಯಾಗಿದೆ. 

ಏನಿದು ಪ್ರಕರಣ 

ಶಿವಮೊಗ್ಗದ ಉಂಬಳೆಬೈಲು  ಅರಣ್ಯ ವಲಯದ ವ್ಯಾಪ್ತಿಯಲ್ಲಿ‘ ಜಿಂಕೆಯೊಂದನ್ನ ಶಿಕಾರಿ ಮಾಡಲಾಗಿತ್ತು. ಅಲ್ಲದೆ ಅದನ್ನ ಅಚ್ಚುಕಟ್ಟಾಗಿ ಪಾಲು ಮಾಡಿ ಬೇಯಲು ಇಟ್ಟಿದ್ದರು. ಅಷ್ಟರಲ್ಲಿ ಅರಣ್ಯ ಅಧಿಕಾರಿಗಳು ಜಿಂಕೆ ಬೇಯುಸುತ್ತಿದ್ದವರಿಗೆ ಶಾಕ್ ಕೊಟ್ಟಿದ್ದಾರೆ. ಅರಣ್ಯ ವ್ಯಾಪ್ತಿಯಲ್ಲಿ ಜಿಂಕೆ ಬೇಟೆಯಾಡಿ ಮಾಂಸದ ಅಡುಗೆ ಮಾಡಿದ ಕಾರಣ  03 ಜನ ಆರೋಪಿಗಳ ವಿರುದ್ಧ ವನ್ಯಜೀವಿ ಮೊಕದ್ದಮೆಯನ್ನು ದಾಖಲಿಸಿ ಅವರನ್ನ ಬಂಧಿಸಿದ್ದಾರೆ. 

ಬಂಧಿತರು

A1. ಹನುಮಂತಪ್ಪ

A2. ಅಂಜನಪ್ಪ

A3. ರಾಮ 

ಮೂವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಅಧಿಕಾರಿಗಳು ಈ ಸಂಬಂಧ ಅಡುಗೆಗೆ ಬಳಸಿದ್ದ ಪಾತ್ರೆಗಳು ಸಹ ಜಪ್ತು ಮಾಡಿದ್ದಾರೆ. ಇನ್ನೂ ಈ ಕಾರ್ಯಾಚರಣೆಯಲ್ಲಿ  ಭದ್ರಾವತಿ ಡಿಸಿಎಫ್  ಆಶಿಶ್ ರೆಡ್ಡಿ, IFS ಹಾಗೂ  ರತ್ನಪ್ರಭ, ACF   ಉಂಬಳೇಬೈಲು RFO ಎಸ್.ಎಂ ಶಿವರಾತ್ರೆಶ್ವರ ಸ್ವಾಮಿ, ಪವನ್ ಮಹೇಂದ್ರಕರ್ DyRFO,  ಗಿಡ್ಡಸ್ವಾಮಿ DyRFO, ಗಸ್ತು ವನಪಾಲಕರಾದ ಸುನಿಲ್ ಸಾಸಲವಾಡ,  ಮಾಲತೇಶ ಸೂರ್ಯವಂಶಿ,  ಶ್ರೀಕಾಂತ್, ದಿನೇಶ, ಹಾಗೂ ಇತರೆ ಅರಣ್ಯ ಇಲಾಖೆ ಸಿಬ್ಬಂದಿಗಳು ಭಾಗವಹಿಸಿದ್ದರು