ಶಿವಮೊಗ್ಗ, ಮೈಸೂರು ಸೇರಿದಂತೆ ಪ್ರಮುಖ ಟ್ರೈನ್​ ಸಂಚಾರ 2 ದಿನ ರದ್ದು! ಕಾರಣವೇನು?

Important trains including Shimoga, Mysore are canceled for 2 days! What is the reason? ಶಿವಮೊಗ್ಗ, ಮೈಸೂರು ಸೇರಿದಂತೆ ಪ್ರಮುಖ ಟ್ರೈನ್​ಗಳ​ ಓಡಾಟ 2 ದಿನ ರದ್ದು! ಕಾರಣವೇನು?

ಶಿವಮೊಗ್ಗ, ಮೈಸೂರು ಸೇರಿದಂತೆ ಪ್ರಮುಖ ಟ್ರೈನ್​ ಸಂಚಾರ 2 ದಿನ ರದ್ದು! ಕಾರಣವೇನು?

KARNATAKA NEWS/ ONLINE / Malenadu today/ Nov 15, 2023 SHIVAMOGGA NEWS

Karnataka | Malnenadutoday.com |   ನೈಋತ್ಯ ರೈಲ್ವೆ ಮೈಸೂರು ವಿಭಾಗ (South Western Railway Mysuru Division) ಮುಖ್ಯವಾದ ಪ್ರಕಟಣೆಯನ್ನ ನೀಡಿದ್ದು, ಪ್ರಮುಖ ರೈಲು ಸಂಚಾರವನ್ನು ಇವತ್ತು ಮತ್ತು ನಾಳೆಯ ಮಟ್ಟಿಗೆ ರದ್ದುಗೊಳಿಸಿದೆ. ಅದರ ವಿವರವನ್ನು ನೋಡುವುದಾದರೆ, 

ಈ ಪೈಕಿ ಶಿವಮೊಗ್ಗದಿಂದ ತುಮಕೂರು ಜಿಲ್ಲೆಗೆ ತೆರಳುವ 16568 ರೈಲು (16568  Shivamogga Town-Tumkur -16.11.2023 ) ಸಂಚಾರ ನಾಳೆ ಇರುವುದಿಲ್ಲ ಹಾಗೂ ತುಮಕೂರು ಜಿಲ್ಲೆಯಿಂದ ಶಿವಮೊಗ್ಗ  ಜಿಲ್ಲೆಗೆ ತೆರಳುವ 16567 (16567 -Tumkur- Shivamogga Town-15.11.2023) ರೈಲಿನ ಸಂಚಾರವು ಇವತ್ತು ರದ್ದು ಗೊಂಡಿದೆ. 



ಇನ್ನೂ  ರೈಲು ಸಂಖ್ಯೆ 07327 ಮೈಸೂರು-ಚಾಮರಾಜನಗರ ರೈಲು ಸಂಚಾರ ಇಂದು ರದ್ದು ಗೊಂಡಿದೆ. ಅದೇ ರೀತಿಯಲ್ಲಿ ಚಾಮರಾಜನಗರ-ತುಮಕೂರು 07345 ರೈಲು ಸಂಚಾರ ಕೂಡ ಇವತ್ತಿನ ಮಟ್ಟಿಗೆ ರದ್ದುಗೊಂಡಿದೆ. 

ರೈಲು ಸಂಖ್ಯೆ  07346 ತುಮಕೂರಿನಿಂದ ಚಾಮರಾಜನಗರ ತೆರಳುವ ರೈಲು ಸಂಚಾರ 16.11.2023  ರಂದು ರದ್ದುಗೊಳಿಸಲಾಗಿದೆ

ರೈಲು ಸಂಖ್ಯೆ 07328 ಚಾಮರಾಜನಗರ-ಮೈಸೂರು ಟ್ರೈನ್ ಸಂಚಾರ ಸಹ 16.11.2023  ರಂದು ರದ್ದುಗೊಂಡಿದೆ.  ಈ ರೈಲು ಸೇವೆಗಳ ರದ್ದತಿಯ ಬಗ್ಗೆ  ನೈಋತ್ಯ ರೈಲ್ವೆ  ಪ್ರಕಟಣೆಯಲ್ಲಿ ತಿಳಿಸಿದೆ.