traffic rules :  ಶಿವಮೊಗ್ಗದಲ್ಲಿ ಟ್ರಾಫಿಕ್​ ನಿಯಮ ಉಲ್ಲಂಘನೆ | 8 ಸಾವಿರ ದಂಡ

prathapa thirthahalli
Prathapa thirthahalli - content producer

traffic rules :  ಶಿವಮೊಗ್ಗದಲ್ಲಿ ಟ್ರಾಫಿಕ್​ ನಿಯಮ ಉಲ್ಲಂಘನೆ | 8 ಸಾವಿರ ದಂಡ

traffic rules :  ದೇಶದಾದ್ಯಂತ ದಿನನಿತ್ಯ ಸಾವಿರಾರು ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಈ ಹಿನ್ನಲೆ ಪೊಲೀಸರು ಟ್ರಾಫಿಕ್​ ನಿಯಮಗಳ  ಕುರಿತು ಅನೇಕ ಕ್ರಮಗಳನ್ನು ಕೈಗೊಳ್ಳುತ್ತಾರೆ. ಆದರೆ  ಸವಾರರು ಅದಕ್ಕೆ ಕ್ಯಾರೇ ಅನ್ನೋದಿಲ್ಲ. ಕೊನೆಗೆ ದಂಡ ಬಿದ್ದಾಗ ಅಯ್ಯೋ ಈ ತಪ್ಪು ಮಾಡಬಾರದಿತ್ತು ಎಂದು ಪಶ್ಚಾತಾಪ ಪಡುತ್ತಾರೆ. ಇದರ ನಡುವೆ ಕೆಲವರು ಪೊಲೀಸರಿಂದ ತಪ್ಪಿಸಿಕೊಂಡು ಓಡಾಡುತ್ತಾರೆ. ಆದರೆ ಈಗಂತೂ ಟ್ರಾಫಿಕ್​ ನಿಯಮದಿಂದ ತಪ್ಪಿಸಿಕೊಳ್ಳೋಕೆ ಸಾಧ್ಯವೇ ಇಲ್ಲ. ಏಕೆಂದರೆ ಎಲ್ಲಾಕಡೆ ಸಿಗ್ನಲ್​ಗಳಲ್ಲಿ ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಸಿರುತ್ತಾರೆ. ಹಾಗೆಯೇ ದಂಡದ ರಶೀದಿಯನ್ನು ಮನೆಗೆ ಕಳುಹಿಸುತ್ತಾರೆ.

ಅದೇ ರೀತಿ ಶಿವಮೊಗ್ಗದಲ್ಲಿ ನಿಮಯ ಉಲ್ಲಂಘಿಸಿದ ಸವಾರನೋರ್ವನ ಮೇಲೆ ಟ್ರಾಫಿಕ್​ ಪೊಲಿಸರು ಸಾವಿರಾರು ರೂಪಾಯಿಯ ಉದ್ದದ ರಶೀದಿಯನ್ನು ಹರೆದಿದ್ದಾರೆ. ಬೈಕ್​ ಸವಾರರೊಬ್ಬರ ತಮ್ಮ ಬೈಕ್​ನಲ್ಲಿ ಹಲವು ಬಾರಿ ಸಂಚಾರ ನಿಯಮವನ್ನು ಉಲ್ಲಂಘಿಸಿದ್ದಾರೆ. ಇದನ್ನು ಸಿಸಿ ಟಿವಿಯಲ್ಲಿ ಗಮನಿಸಿದ ಪಶ್ಚಿಮ ಸಂಚಾರ ಪೊಲೀಸರು  ಬೈಕ್ ಮಾಲೀಕರಿಂದ  8,000 ರೂಪಾಯಿ ದಂಡವನ್ನು ಕಟ್ಟಿಸಿಕೊಂಡಿರುತ್ತಾರೆ.

Share This Article