ಶಿವಮೊಗ್ಗದ ಮೂವರಲ್ಲಿ ಕೊರೊನಾ ಪಾಸಿಟಿವ್! ನಿನ್ನೆ ಎಷ್ಟಿತ್ತು ಕೇಸ್​? ಒಟ್ಟು ಎಷ್ಟು ಪ್ರಕರಣ? ವಿವರ ಇಲ್ಲಿದೆ

Three people from Shimoga test positive for coronavirus How many cases were there yesterday? How many cases in total? Here's the details

ಶಿವಮೊಗ್ಗದ ಮೂವರಲ್ಲಿ ಕೊರೊನಾ ಪಾಸಿಟಿವ್! ನಿನ್ನೆ ಎಷ್ಟಿತ್ತು ಕೇಸ್​? ಒಟ್ಟು ಎಷ್ಟು ಪ್ರಕರಣ? ವಿವರ ಇಲ್ಲಿದೆ
three-people-from-shimoga-test-positive-for-coronavirus

SHIVAMOGGA  |  Dec 30, 2023  | ಶಿವಮೊಗ್ಗದಲ್ಲಿ ಕೋವಿಡ್​-19 ಸೋಂಕಿನ ಕುರಿತಾಗಿ ನಿನ್ನೆ ಬಿಡುಗಡೆಯಾದ ಹೆಲ್ತ್​ ಬುಲೆಟಿನ್​ ನಲ್ಲಿ ನಿನ್ನೆಯ ಮಟ್ಟಿಗೆ ಶಿವಮೊಗ್ಗದ ಮೂವರಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. 

ಇದುವರೆಗೂ ಒಟ್ಟು 22 ಪಾಸಿಟಿವ್ ಕೇಸ್​ಗಳಿದ್ದು, ಈ ಪೈಕಿ ಓರ್ವರು ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಉಳಿದ 21 ಮಂದಿಯನ್ನ ಹೋಮ್ ಐಸೋಲೇಷನ್​ನಲ್ಲಿ ಇರಿಸಲಾಗಿದೆ. 

ನಿನ್ನೆ  303 ಸ್ಯಾಂಪಲ್​​ಗಳನ್ನ ಪರೀಕ್ಷೆಗೆ ಒಳಪಡಿಸಿದ್ದು,  ಈ ಪೈಕಿ ಮೂವರಲ್ಲಿ ಕೊರೊನಾ ದೃಢಪಟ್ಟಿದೆ. 



ನೀರಿನ ಕಂದಾಯ ವಸೂಲಾತಿಗೆ ವಿಶೇಷ ಕೌಂಟರ್ ಆರಂಭ

ಶಿವಮೊಗ್ಗ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ವಹಣಾ ವಿಭಾಗ ಮತ್ತು ಉಪವಿಭಾಗವು ದಿ: 31/12/2023 ರ ಭಾನುವಾರದಂದು 2023-24 ನೇ ಸಾಲಿನ ನೀರಿನ ಕಂದಾಯ ಮತ್ತು ಬಾಕಿ ಕಂದಾಯ ವಸೂಲಾತಿಗಾಗಿ ನಗರದ “ಗೋಪಾಳ ಕೊನೆ ಬಸ್‍ಸ್ಟಾಪ್ ಹತ್ತಿರ, ವಿನೋಬನಗರ ಪೊಲೀಸ್ ಚೌಕಿ ಹತ್ತಿರ, ಶರಾವತಿನಗರ ಎ ಬ್ಲಾಕ್ ಆದಿಚುಂಚನಗಿರಿ ಶಾಲೆ ನರ್ಸ್ ಕ್ವಾಟ್ರಸ್ ಎದುರು, ಮಂಡ್ಲಿ ಸರ್ಕಲ್ ಹತ್ತಿರ” ಈ ಎಲ್ಲಾ ಕಡೆಗಳಲ್ಲಿ ವಿಶೇಷ ನೀರಿನ ಕಂದಾಯ ವಸೂಲಾತಿ ಕೌಂಟರ್‍ಗಳನ್ನು ತೆರೆಯಲಾಗಿದೆ. 



ನೀರಿನ ಖಾತೆದಾರರು ಬಾಕಿ ಉಳಿಸಿಕೊಂಡಿರುವ ನೀರಿನ ಕಂದಾಯವನ್ನು ಪಾವತಿಸದಿದ್ದಲ್ಲಿ ನೀರಿನ ಸಂಪರ್ಕವನ್ನು ಕಡಿತಗೊಳಿಸುವುದು ಅನಿವಾರ್ಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಕರ್ನಾಟಕ ನಗರ ನೀರುಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.   

------------------