ಕಾಗೆಗೆ ಎಡೆ ಇಡಲು ಹೋದ ಮಹಿಳೆಗೆ ಜೀವ ಬೆದರಿಕೆ : ಏನಿದು ಪ್ರಕರಣ

prathapa thirthahalli
Prathapa thirthahalli - content producer

ಶಿವಮೊಗ್ಗ: ಹಬ್ಬದ ಸಂದರ್ಭದಲ್ಲಿ ಸಂಪ್ರದಾಯದಂತೆ ಕಾಗೆಗೆ ಎಡೆ ಇಡಲು ತಾಯಿ ಮನೆಗೆ ಬಂದ ಮಹಿಳೆಯೊಬ್ಬರಿಗೆ ವ್ಯಕ್ತಿಯೊಬ್ಬರು ಜೀವ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಘಟನೆ ತೀರ್ಥಹಳ್ಳಿ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ.

ತೀರ್ಥಹಳ್ಳಿ ತಾಲೂಕಿನ ಗ್ರಾಮವೊಂದರ ನಿವಾಸಿಯಾದ ಮಹಿಳೆಯೊಬ್ಬರು, ಹಬ್ಬದ ಪ್ರಯುಕ್ತ ತಮ್ಮ ತಾಯಿಯ ಮನೆಯಾದ ಇನ್ನೊಂದು ಗ್ರಾಮಕ್ಕೆ ಎಡೆ ಇಡುವ ಆಚರಣೆಗಾಗಿ ತೆರಳಿದ್ದರು. ಈ ಸಮಯದಲ್ಲಿ,  ವ್ಯಕ್ತಿಯೊಬ್ಬರು ಆಕೆಯನ್ನು ತಡೆದು, “ನಮ್ಮ ಜಾಗದಲ್ಲಿ ಎಡೆ ಇಡಲು ಬರುತ್ತೀಯಾ?” ಎಂದು ಪ್ರಶ್ನಿಸಿದ್ದಾರೆ. ಜೊತೆಗೆ, ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಈ ಹಿನ್ನೆಲೆ ಮಹಿಳೆ, ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ.

Thirthahalli Threat case

Share This Article