Thirthahalli Police Station : ಕೊಣಂದೂರಿನ ಮಹಿಳೆಗೆ ಪಕ್ಕದ ಮನೆಯಿಂದ ಬಂತೊಂದು ಫೋನ್ ಕಾಲ್ : ಮನೆಗೆ ಬಂದು ನೋಡಿದಾಗ ಕಾದಿತ್ತು ಶಾಕ್
ಮಗಳ ಮನೆಗೆ ತೆರಳಿದ್ದಾಗ ಕೋಣಂದೂರಿನ ಮಹಿಳೆಯೊಬ್ಬರ ಮನೆಯಲ್ಲಿ ಕಳ್ಳತನ ನಡೆದಿದ್ದು, ಬೀರುವಿನಲ್ಲಿದ್ದ 40 ಸಾವಿರ ರೂಪಾಯಿ ನಗದು ದೋಚಲಾಗಿದೆ. ಈ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೇಗಾಯ್ತು ಘಟನೆ
ಜುಲೈ 15 ರಂದು ಕೋಣಂದೂರಿನ ಸೋನಗರ ಕೇರಿಯ ಮಹಿಳೆ ಮಗಳ ಮನೆಗೆಂದು ಆನವಟ್ಟಿಗೆ ತೆರಳಿದ್ದರು. ಆಗ ಪಕ್ಕದ ಮನೆಯವರು ನಿಮ್ಮ ಮನೆಯಲ್ಲಿ ಕಳ್ಳತನವಾಗಿದೆ ಎಂದು ಫೋನ್ ಮಾಡಿದ್ದಾರೆ. ಕೂಡಲೇ ಮಹಿಳೆ ಮನೆಗೆ ಬಂದು ನೋಡಿದಾಗ ಕಳ್ಳರು ಮನೆ ಬೀಗ ಒಡೆದು ಬೀರುವಿನಲ್ಲಿಟ್ಟಿದ್ದ 40 ಸಾವಿರ ಹಣವನ್ನು ಕದ್ದು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

