ಮಲೆನಾಡು ಟುಡೆ ಸುದ್ದಿ, ಶಿವಮೊಗ್ಗ, ಸೆಪ್ಟೆಂಬರ್ 4 2025 : ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು 2025-26ನೇ ಸಾಲಿನ ನವೋದ್ಯಮ (Start-up) ಯೋಜನೆಗಳಡಿ ಸಹಾಯಧನ ಪಡೆಯಲು ಅಲ್ಪಸಂಖ್ಯಾತ ಸಮುದಾಯದ ಯುವಕ/ಯುವತಿಯರಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಮುಸಲ್ಮಾನ, ಕ್ರೈಸ್ತ, ಜೈನ್, ಆಂಗ್ಲೋ-ಇಂಡಿಯನ್, ಬೌದ್ಧ, ಸಿಖ್ ಮತ್ತು ಪಾರ್ಸಿ ಸಮುದಾಯಕ್ಕೆ ಸೇರಿದವರು ಈ ಯೋಜನೆಯ ಲಾಭ ಪಡೆಯಬಹುದು ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.
ಅರ್ಜಿ ಸಲ್ಲಿಸಲು ಇರುವ ನಿಯಮಗಳು /Start-up Subsidy Applications for minority
- ಅರ್ಜಿದಾರರು ಈ ಕೆಳಗಿನ ಮಾನದಂಡಗಳನ್ನು ಪೂರೈಸಬೇಕು:
- ಸಂಸ್ಥೆಯು ಕರ್ನಾಟಕದಲ್ಲಿ ಪ್ರೈ.ಲಿ (Pvt Ltd), ಒಪಿಸಿ, ಎಲ್‌ಎಲ್‌ಪಿ ಅಥವಾ ಪಾಲುದಾರಿಕೆ ಸಂಸ್ಥೆಯಾಗಿ ನೋಂದಣಿಯಾಗಿರಬೇಕು.
- ನವೋದ್ಯಮದ ಒಟ್ಟು ಆದಾಯ ₹100 ಕೋಟಿಗಿಂತ ಕಡಿಮೆ ಇರಬೇಕು.
- ನವೋದ್ಯಮದ ನೋಂದಣಿ ದಿನಾಂಕದಿಂದ 10 ವರ್ಷ ಮೀರಿರಬಾರದು.
- ಉತ್ಪನ್ನಗಳು, ಸೇವೆಗಳು ಅಥವಾ ತಂತ್ರಜ್ಞಾನಗಳ ಅಭಿವೃದ್ಧಿ ಅಥವಾ ಸುಧಾರಣೆಯಲ್ಲಿ ಕಾರ್ಯ ನಿರ್ವಹಿಸುತ್ತಿರಬೇಕು.
- ಕಂಪನಿ ಅಥವಾ ಸಂಸ್ಥೆಯಲ್ಲಿ ನಿರ್ದೇಶಕರು/ಪಾಲುದಾರರು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿರಬೇಕು ಮತ್ತು ಕನಿಷ್ಠ ಶೇ. 51ರಷ್ಟು ಪಾಲು ಹೊಂದಿರಬೇಕು.
- ಅರ್ಜಿದಾರರು ಡಿಜಿಟಲ್ ಜಾತಿ ಪ್ರಮಾಣಪತ್ರವನ್ನು ಹೊಂದಿರಬೇಕು.
ಅರ್ಜಿ ಸಲ್ಲಿಕೆ ಮತ್ತು ಸಂಪರ್ಕ ಮಾಹಿತಿ /Start-up Subsidy Applications for minority
ಆಸಕ್ತರು www.eitbt.karnataka.gov.in ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 15. ಅರ್ಜಿಯ ಜೊತೆಗೆ ಎಂಎಸ್‌ಎಂಇ ಉದ್ಯೋಗ, ಆಧಾರ್, ಜಿಎಸ್‌ಟಿ, ಟ್ರೇಡ್ ಯೂನಿಯನ್, ಕೆಎಂಎಫ್, ವ್ಯಾಟ್ ಪ್ರಮಾಣಪತ್ರಗಳು ಅಥವಾ ಅಂಗಡಿ ಮತ್ತು ಸಂಸ್ಥೆಯ ನೋಂದಣಿ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ.

ಹೆಚ್ಚಿನ ಮಾಹಿತಿಗಾಗಿ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ನಂಜಪ್ಪ ಆಸ್ಪತ್ರೆ ಮುಂಭಾಗದ ರಸ್ತೆ, ಅಜ್ಯುತ್‌ರಾವ್ ಲೇಔಟ್, 4ನೇ ತಿರುವು, ಶಿವಮೊಗ್ಗ ಇಲ್ಲಿ ಸಂಪರ್ಕಿಸಬಹುದು ಅಥವಾ 08182-228262 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.
Start-up Subsidy Applications for minority
Karnataka Minorities Development Corporation schemes, start-up subsidy for minorities, Karnataka government schemes Apply for start-up subsidy Karnataka, Karnataka Minorities Development Corporation, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ನವೋದ್ಯಮ ಯೋಜನೆ, ಸಹಾಯಧನ,