ಮಲೆನಾಡು ಟುಡೆ ಸುದ್ದಿ, ಶಿಮೊಗ್ಗ ಸೆಪ್ಟೆಂಬರ್ 4 2025 : ರೈಲ್ವೆ ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಶಿವಮೊಗ್ಗ ಮತ್ತು ತಮಿಳುನಾಡಿನ ತಿರುನೆಲ್ವೇಲಿ ನಡುವೆ ರೈಲ್ವೆ ಇಲಾಖೆ ಹೊಸ ವಿಶೇಷ ರೈಲು ಸೇವೆಯನ್ನು ಆರಂಭಿಸಿದೆ.
ಶಿವಮೊಗ್ಗ ಮತ್ತು ತಮಿಳುನಾಡಿನ ತಿರುನೆಲ್ವೇಲಿ ರೈಲು
ಈ ಸಂಬಂಧ ಸಂಸದ ಬಿ.ವೈ. ರಾಘವೇಂದ್ರ ರೈಲ್ವೆ ಇಲಾಖೆಗೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಾಯೋಗಿಕವಾಗಿ ಸೇವೆಯನ್ನು ಪ್ರಾರಂಭಿಸಲಾಗುತ್ತಿದೆ.
ಶಿವಮೊಗ್ಗ ಮತ್ತು ತಮಿಳುನಾಡಿನ ತಿರುನೆಲ್ವೇಲಿ ರೈಲು ಸೆಪ್ಟೆಂಬರ್ 7, 2025 ರಿಂದ ಎಂಟು ವಾರಗಳ ಕಾಲ ಸಂಚರಿಸಲಿದ್ದು, ಮುಂಬರುವ ದಸರಾ ಮತ್ತು ದೀಪಾವಳಿ ಹಬ್ಬಗಳ ಸಮಯದಲ್ಲಿ ಪ್ರಯಾಣಿಕರಿಗೆ ಮಹತ್ವದ ಅನುಕೂಲತೆ (Convenience) ಒದಗಿಸಲಿದೆ.
ಶಿವಮೊಗ್ಗ-ತಿರುನಲ್ವೇಲಿ ರೂಟ್
- ರೈಲು ಸಂಖ್ಯೆ 06103 ತಿರುನೆಲ್ವೇಲಿಯಿಂದ ಸೆಪ್ಟೆಂಬರ್ 7 ರಂದು ಮಧ್ಯಾಹ್ನ 3:40 ಕ್ಕೆ ಹೊರಟು, ಮರುದಿನ ಮಧ್ಯಾಹ್ನ 1:00 ಗಂಟೆಗೆ ಶಿವಮೊಗ್ಗವನ್ನು ತಲುಪಲಿದೆ.
- ಅದೇ ರೀತಿ, ಶಿವಮೊಗ್ಗದಿಂದ ರೈಲು ಸಂಖ್ಯೆ 06104 ಸೆಪ್ಟೆಂಬರ್ 8 ರಂದು ಮಧ್ಯಾಹ್ನ 2:20 ಕ್ಕೆ ಹೊರಟು, ಮರುದಿನ ಬೆಳಗ್ಗೆ 9:53 ಕ್ಕೆ ತಿರುನೆಲ್ವೇಲಿಗೆ ತಲುಪಲಿದೆ.
- ಶಿವಮೊಗ್ಗ, ಬೀರೂರು, ತುಮಕೂರು, ಬೆಂಗಳೂರು, ಜೋಲಾರ್‌ಪೆಟ್ಟೈ ಮತ್ತು ಮಧುರೈ ಮಾರ್ಗವಾಗಿ ಸಂಚರಿಸಲಿದೆ.
ರೈಲು ಸೇವೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದರೆ ಅದನ್ನು ಖಾಯಂ ಆಗಿ ಮುಂದುವರಿಸಲು ಪ್ರಯತ್ನಿಸಲಾಗುವುದು ಎಂದು ಸಂಸದರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.

Special Train from Shivamogga to Tirunelveli Announced for eight weeks from September 7, 2025,
ಶಿವಮೊಗ್ಗದಿಂದ ತಿರುನೆಲ್ವೇಲಿಗೆ ವಿಶೇಷ ರೈಲು
ಶಿವಮೊಗ್ಗದಿಂದ ತಿರುನೆಲ್ವೇಲಿಗೆ ಮತ್ತು ತಿರುನೆಲ್ವೇಲಿಯಿಂದ ಶಿವಮೊಗ್ಗಕ್ಕೆ ಒಂದು ಹೊಸ ರೈಲನ್ನು ಬಿಡುವಂತೆ ಸಾರ್ವಜನಿಕರು ಬೇಡಿಕೆ ಇಟ್ಟಿದ್ದು ಸಾರ್ವಜನಿಕರ ಒತ್ತಾಯದ ಮೇರೆಗೆ ಕೇಂದ್ರ ಮತ್ತು ರಾಜ್ಯ ರೈಲ್ವೆ ಸಚಿವರ ಮುಂದೆ ಒಂದು ಹೊಸದಾಗಿ ರೈಲನ್ನು ಮಂಜೂರು ಮಾಡುವಂತೆ ಕೋರಿಕೆ… pic.twitter.com/aSqkQCq2wR
— B Y Raghavendra (@BYRBJP) September 3, 2025
Shivamogga Tirunelveli special train, festival special train Karnataka, new train from Shivamogga, Shivamogga train schedule, Tirunelveli train route, Shivamogga to Tirunelveli train, Tirunelveli to Shivamogga train, BY Raghavendra train update, Shivamogga express train, ಶಿವಮೊಗ್ಗ, ತಿರುನೆಲ್ವೇಲಿ, ವಿಶೇಷ ರೈಲು, ದಸರಾ, ದೀಪಾವಳಿ, ರೈಲ್ವೆ ಇಲಾಖೆ, ಬಿ.ವೈ.ರಾಘವೇಂದ್ರ, ರೈಲು ವೇಳಾಪಟ್ಟಿ.