ಶಿವಮೊಗ್ಗ: ಫೆಬ್ರವರಿ 16ರಂದು ಮೈಸೂರು, ಅರಸೀಕೆರೆ, ಶಿವಮೊಗ್ಗ ಮತ್ತು ತಾಳಗುಪ್ಪ ಮಾರ್ಗವಾಗಿ ಸಂಚರಿಸುವ ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಹಬ್ಬನಘಟ್ಟ ಮತ್ತು ಅರಸೀಕೆರೆ ನಿಲ್ದಾಣಗಳ ನಡುವೆ ವಿಶ್ವೇಶ್ವರಯ್ಯ ಜಲ ನಿಗಮದ (VJNL) ಕಾಲುವೆ ಕ್ರಾಸಿಂಗ್ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆಯು ರೈಲುಗಳ ರದ್ದತಿ ಹಾಗೂ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿದೆ.

1. ಸಂಪೂರ್ಣ ರದ್ದಾದ ರೈಲುಗಳು: ದಿನಾಂಕ 16.02.2026 ರಂದು ಈ ಕೆಳಗಿನ ರೈಲುಗಳು ಸಂಚರಿಸುವುದಿಲ್ಲ:
ರೈಲು ಸಂಖ್ಯೆ 16206: ಮೈಸೂರು – ತಾಳಗುಪ್ಪ ಎಕ್ಸ್ಪ್ರೆಸ್.
ರೈಲು ಸಂಖ್ಯೆ 16205: ತಾಳಗುಪ್ಪ – ಮೈಸೂರು ಎಕ್ಸ್ಪ್ರೆಸ್.
ರೈಲು ಸಂಖ್ಯೆ 56267: ಅರಸೀಕೆರೆ – ಮೈಸೂರು ಪ್ಯಾಸೆಂಜರ್. (Cancellation)
2. ಭಾಗಶಃ ರದ್ದಾದ ರೈಲು
ರೈಲು ಸಂಖ್ಯೆ 16225: ಮೈಸೂರು – ಶಿವಮೊಗ್ಗ ಟೌನ್ ಎಕ್ಸ್ಪ್ರೆಸ್. ಈ ರೈಲು ಅಂದು ಮೈಸೂರು ಮತ್ತು ಅರಸೀಕೆರೆ ನಡುವೆ ಸಂಚರಿಸುವುದಿಲ್ಲ. ಬದಲಿಗೆ, ಇದು ಅರಸೀಕೆರೆಯಿಂದಲೇ ತನ್ನ ಪ್ರಯಾಣ ಆರಂಭಿಸಿ ಶಿವಮೊಗ್ಗಕ್ಕೆ ತಲುಪಲಿದೆ.
3. ತಡವಾಗಿ ಸಂಚರಿಸುವ (ನಿಯಂತ್ರಿಸಲಾದ) ರೈಲುಗಳು ಕಾಮಗಾರಿ ಹಿನ್ನೆಲೆಯಲ್ಲಿ ಈ ಕೆಳಗಿನ ರೈಲುಗಳನ್ನು ಮಾರ್ಗ ಮಧ್ಯೆ ತಡೆಹಿಡಿಯಲಾಗುತ್ತದೆ:
ರೈಲು ಸಂಖ್ಯೆ 56266: ಮೈಸೂರು – ಅರಸೀಕೆರೆ ಪ್ಯಾಸೆಂಜರ್ (110 ನಿಮಿಷ ವಿಳಂಬ).
ರೈಲು ಸಂಖ್ಯೆ 16221: ತಾಳಗುಪ್ಪ – ಮೈಸೂರು ಎಕ್ಸ್ಪ್ರೆಸ್ (100 ನಿಮಿಷ ವಿಳಂಬ).
4. ಮರುನಿಗದಿಪಡಿಸಲಾದ (Rescheduled) ರೈಲುಗಳು:
ರೈಲು ಸಂಖ್ಯೆ 56265: ಅರಸೀಕೆರೆ – ಮೈಸೂರು ಪ್ಯಾಸೆಂಜರ್: ಅರಸೀಕೆರೆಯಿಂದ 100 ನಿಮಿಷ ತಡವಾಗಿ ಹೊರಡಲಿದೆ.
ರೈಲು ಸಂಖ್ಯೆ 06269: ಮೈಸೂರು – ಎಸ್ಎಂವಿಟಿ ಬೆಂಗಳೂರು ವಿಶೇಷ ಪ್ಯಾಸೆಂಜರ್: ಮೈಸೂರಿನಿಂದ 100 ನಿಮಿಷ ತಡವಾಗಿ ಪ್ರಯಾಣ ಆರಂಭಿಸಲಿದೆ.
ರೈಲು ಪ್ರಯಾಣಿಕರು ಈ ಬದಲಾವಣೆಗಳನ್ನು ಗಮನಿಸಿ ತಮ್ಮ ಪ್ರಯಾಣವನ್ನು ಯೋಜಿಸಬೇಕೆಂದು ಮೈಸೂರು ವಿಭಾಗದ ರೈಲ್ವೆ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ಕೋರಿದ್ದಾರೆ.
South Western Railway Train Cancellations on Feb 16


