sigandur bridge inauguration :  ಸಿಗಂದೂರು ಸೇತುವೆ ಉದ್ಘಾಟನೆ : ಇದು ಬಿಜೆಪಿ ಪಕ್ಷದ ಕಾರ್ಯಕ್ರಮ ನನಗೆ ಆಹ್ವಾನ ನೀಡಿಲ್ಲ : ಬೇಳೂರು ಗೋಪಾಲ ಕೃಷ್ಣ, july 12

prathapa thirthahalli
Prathapa thirthahalli - content producer

sigandur bridge inauguration :  ಶಿವಮೊಗ್ಗ: ಸಿಗಂದೂರು ಸೇತುವೆ ಲೋಕಾರ್ಪಣೆ ಕಾರ್ಯಕ್ರಮವನ್ನು ಬಿಜೆಪಿ ಪಕ್ಷದ ಕಾರ್ಯಕ್ರಮವಾಗಿ ನಡೆಸಲಾಗುತ್ತಿದೆ ಎಂದು ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರದ ಯೋಜನೆಯಾಗಿರುವ ಈ ಸೇತುವೆಯ ಉದ್ಘಾಟನೆ ವಿಚಾರದಲ್ಲಿ ರಾಜಕಾರಣ ಮಾಡಬಾರದು ಎಂದು ಅವರು ಆಗ್ರಹಿಸಿದ್ದು, ತಮಗೆ ಈವರೆಗೂ ಆಹ್ವಾನ ಪತ್ರಿಕೆ ನೀಡಿಲ್ಲ ಎಂದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಬೇಳೂರು ಗೋಪಾಲಕೃಷ್ಣ, ಸಿಗಂದೂರು ಸೇತುವೆ ಆ ಭಾಗದ ಜನರಿಗೆ ಬಹಳಷ್ಟು ಉಪಯುಕ್ತವಾಗಲಿದೆ. ಆದರೆ ಬಿಜೆಪಿಯವರು ಈ ಲೋಕಾರ್ಪಣೆ ಕಾರ್ಯಕ್ರಮವನ್ನು ತಮ್ಮ ಪಕ್ಷದ ಕಾರ್ಯಕ್ರಮವಾಗಿ ನಡೆಸುತ್ತಿದ್ದಾರೆ. ಸೇತುವೆ ಉದ್ಘಾಟನಾ ಕಾರ್ಯಕ್ರಮಕ್ಕೆ ನನಗೆ ಇಲ್ಲಿಯವರೆಗೂ ಆಹ್ವಾನ ಪತ್ರಿಕೆ ನೀಡಿಲ್ಲ. ಸಂಸದ ಬಿವೈ ರಾಘವೇಂದ್ರ ಅವರು ಪ್ರತಿದಿನ ಬಂದು ಪೆಂಡಾಲ್ ಹಾಗೂ ಸೇತುವೆಯನ್ನು ಪರಿಶೀಲಿಸಿ ಹೋಗುತ್ತಾರೆ, ಆದರೂ ನನಗೆ ಆಹ್ವಾನ ಪತ್ರಿಕೆ ಕೊಟ್ಟಿಲ್” ಎಂದು ಬೇಸರ ವ್ಯಕ್ತಪಡಿಸಿದರು.

- Advertisement -

ನಿತಿನ್ ಗಡ್ಕರಿ ಹಾಗೂ ಯಡಿಯೂರಪ್ಪ ಅವರು ಕಾರ್ಯಕ್ರಮಕ್ಕೆ ಆಗಮಿಸುತ್ತಿರುವುದರಿಂದ ನಾವೇನು ರಾಜಕಾರಣ ಮಾಡುವುದಿಲ್ಲ. ನಾನು ಸೇತುವೆ ಉದ್ಘಾಟನೆಗೆ ಹೋಗುತ್ತೇನೆ” ಎಂದು ಅವರು ಸ್ಪಷ್ಟಪಡಿಸಿದರು. ಇದು ಕೇಂದ್ರ ಸರ್ಕಾರದ ಯೋಜನೆಯಾಗಿರುವುದರಿಂದ ಇದರಲ್ಲಿ ರಾಜಕಾರಣ ಮಾಡಬಾರದು ಎಂದು ಒತ್ತಿ ಹೇಳಿದರು. ಸಿಗಂದೂರು ಕ್ಷೇತ್ರದ ಧರ್ಮದರ್ಶಿ ರಾಮಪ್ಪ ಅವರಿಗೂ ಆಹ್ವಾನ ಪತ್ರಿಕೆ ನೀಡಿಲ್ಲ ಎಂದು ತಿಳಿದುಬಂದಿದೆ ಎಂದೂ ಅವರು ತಿಳಿಸಿದರು.

sigandur bridge inauguration :   ಸೇತುವೆಗೆ ದೇವಿ ಹೆಸರು ಬಿಟ್ಟು ಬೇರೆ ಹೆಸರಿಟ್ಟರೆ ಬೋರ್ಡ್ ಹಾಕಲು ಬಿಡುವುದಿಲ್ಲ 

ಸೇತುವೆಯ ನಾಮಕರಣದ ಕುರಿತು ಮಾತನಾಡಿದ ಬೇಳೂರು ಗೋಪಾಲಕೃಷ್ಣ, “ಸೇತುವೆಗೆ ಸಿಗಂದೂರು ದೇವಿ ಹೆಸರನ್ನೇ ಇಡಬೇಕು. ಬೇರೆ ಹೆಸರಿಡಲು ಪ್ರಯತ್ನಿಸಿದರೆ ಅಲ್ಲಿ ಬೋರ್ಡ್ ಹಾಕಲು ಬಿಡುವುದಿಲ್ಲ” ಎಂದು ಎಚ್ಚರಿಕೆ ನೀಡಿದರು. ಯಡಿಯೂರಪ್ಪ ಅವರೇ ದೇವಸ್ಥಾನದಲ್ಲಿ ದೇವಿ ಹೆಸರಿಡಬೇಕು ಎಂದು ಹೇಳಿದ್ದರಿಂದ, ಅದೇ ಹೆಸರನ್ನೇ ಇಡಬೇಕು ಎಂದು ಅವರು ಒತ್ತಾಯಿಸಿದರು.

sigandur bridge inauguration :   ಹಸಿರುಮಕ್ಕಿ ಸೇತುವೆ ಕಾಮಗಾರಿ ನಿಲ್ಲಿಸಿದ್ದು ಹಾಲಪ್ಪ ಹಾಗೂ ರಾಘವೇಂದ್ರ

ಶಾಸಕ ಹಾಲಪ್ಪ ಕುರಿತು ತೀವ್ರ ವಾಗ್ದಾಳಿ ನಡೆಸಿದ ಗೋಪಾಲಕೃಷ್ಣ ಶರಾವತಿ ಹಿನ್ನೀರಿನಲ್ಲಿ ಹಾಲಪ್ಪ ಅವರ ಕಡೆಯವರು ಯಾರೂ ಮುಳುಗಿಲ್ಲ. ಹಾಲಪ್ಪ ಬರೀ ಬೊಗಳೆ ಬಿಡುತ್ತಾರೆ. ಅವರ ಕುಟುಂಬದವರು ಯಾರೂ ಅಲ್ಲಿ ಮುಳುಗಡೆ ಆಗಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು. “ನಾನು ಎಂ.ಎಲ್.ಎ. ಆಗಿದ್ದಾಗಲೇ ಯಡಿಯೂರಪ್ಪ ಸಿಎಂ ಆಗಿದ್ದಾಗ ನನ್ನ ಪತ್ರದ ಮೇಲೆಯೇ 100 ಕೋಟಿ ರೂ. ಅನುದಾನ ಕೊಟ್ಟಿದ್ದರು. ಆಗ ಹಾಲಪ್ಪ ಹಾಗೂ ಇದೇ ರಾಘವೇಂದ್ರ ಅವರು ಸಿಗಂದೂರು ಸೇತುವೆ ಆಗಬೇಕು ಎಂದು ಹಸಿರುಮಕ್ಕಿ ಸೇತುವೆ ಕಾಮಗಾರಿ ನಿಲ್ಲಿಸಿದ್ದರು” ಎಂದು ಗಂಭೀರ ಆರೋಪ ಮಾಡಿದರು. ಸೇತುವೆ ನಿರ್ಮಾಣವು ಯಡಿಯೂರಪ್ಪ ಅವರ ಕಲ್ಪನೆಯಾಗಿತ್ತು ಎಂದೂ ಅವರು ಸ್ಪಷ್ಟಪಡಿಸಿದರು.

ಸೇತುವೆ ನಿರ್ಮಾಣದಿಂದ ಸ್ಥಳೀಯ ಜನರಿಗೆ ಬಹಳ ಉಪಯೋಗವಾಗಿದ್ದು, ಈ ಹಿಂದೆ ಓಡಾಡಲು ತುಂಬಾ ತೊಂದರೆ ಇತ್ತು, ಈಗ ಬಹಳ ಅನುಕೂಲವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಇದೇ ವೇಳೆ, “ನಾವು ಕೂಡ ಹಸಿರುಮಕ್ಕಿ ಸೇತುವೆ ಉದ್ಘಾಟನೆಗೆ ಸಿಎಂ, ಡಿಸಿಎಂ ಅವರನ್ನೂ ಕರೆಸಿ ರಾಜಕಾರಣ ಮಾಡುತ್ತೇವೆ ಎಂದರು.

nitin gadkari ಬೇಲೂರು ಗೋಪಾಲ ಕೃಷ್ಣ
nitin gadkari ಬೇಲೂರು ಗೋಪಾಲ ಕೃಷ್ಣ
Share This Article
Leave a Comment

Leave a Reply

Your email address will not be published. Required fields are marked *