Shivamogga Traffic Safety june 25/ ಶಿವಮೊಗ್ಗ ಟ್ರಾಫಿಕ್ ಪೊಲೀಸರಿಂದ ಶಾಲಾ ಆಡಳಿತ ಮಂಡಳಿಗಳಿಗೆ ಮಹತ್ವದ ಸೂಚನೆ

ajjimane ganesh

Shivamogga Traffic Safety june 25/ ಶಿವಮೊಗ್ಗ ಟ್ರಾಫಿಕ್ ಪೊಲೀಸರಿಂದ ಶಾಲಾ ಆಡಳಿತ ಮಂಡಳಿಗಳಿಗೆ ಮಹತ್ವದ ಸೂಚನೆ

Shivamogga news : ಶಾಲಾ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಹಾಗೂ ಸುಗಮ ಸಂಚಾರ ವ್ಯವಸ್ಥೆಯ ನಿರ್ವಹಣೆಗಾಗಿ ಶಿವಮೊಗ್ಗ ಟ್ರಾಫಿಕ್ ಪೊಲೀಸರು ಈಗಾಗಲೇ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಇತ್ತೀಚೆಗೆ ಸ್ಕೂಲ್​ ವ್ಯಾನ್​ಗಳ ಚಾಲಕರನ್ನು ತಪಾಸಣೆಗೆ ಒಳಪಡಿಸಿದ ಪೊಲೀಸರು ನಾಲ್ಕು ಡ್ರಂಕ್​ ಆಂಡ್ ಡ್ರೈವ್ ಕೇಸ್ ದಾಖಲಿಸಿದ್ದರು. ಇದರ ಬೆನ್ನಲ್ಲೆ  ನಿನ್ನೆ ಸಂಜೆ ಶಿವಮೊಗ್ಗ ಸಂಚಾರ ವೃತ್ತ ಕಚೇರಿಯಲ್ಲಿ ನಗರದ ಬಸ್ ಸೌಲಭ್ಯ ಹೊಂದಿರುವ ಶಾಲಾ ಆಡಳಿತ ಮಂಡಳಿಗಳ ಮುಖ್ಯಸ್ಥರ ಸಭೆಯನ್ನು ಕರೆದಿದ್ದರು. 

ಈ ಸಭೆಯಲ್ಲಿ ಡಿವೈಎಸ್​ಪಿ ಸಂಜೀವ್ ಕುಮಾರ್ ಶಾಲಾ ವಾಹನಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸ್ಪಷ್ಟ ನಿರ್ದೇಶನ ನೀಡಿದರು. 

- Advertisement -

Shivamogga Traffic Safety

ಶಾಲಾ ವಾಹನಗಳಿಗೆ ಕಡ್ಡಾಯವಾಗಿ ಸ್ಪೀಡ್ ಗವರ್ನರ್‌ಗಳನ್ನು ಅಳವಡಿಸಬೇಕು ಮತ್ತು ವಾಹನಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳು ಸದಾ ಚಾಲ್ತಿಯಲ್ಲಿರುವಂತೆ ನೋಡಿಕೊಳ್ಳಬೇಕು ಎಂದು ಅವರು ಸೂಚಿಸಿದರು.

ಶಾಲಾ ವಾಹನಗಳು ನಿಗದಿತ ಸಾಮರ್ಥ್ಯಕ್ಕಿಂತ ಹೆಚ್ಚು ಮಕ್ಕಳನ್ನು ಕರೆದುಕೊಂಡು ಹೋಗಬಾರದು. ಕನಿಷ್ಠ ನಾಲ್ಕು ವರ್ಷಗಳ ಚಾಲನಾ ಪರವಾನಿಗೆ ಅನುಭವ ಹೊಂದಿರುವ ಚಾಲಕರನ್ನು ಮಾತ್ರ ಇಂತಹ ವಾಹನಗಳಿಗೆ ನೇಮಕ ಮಾಡಿಕೊಳ್ಳಬೇಕು 

ಶಾಲಾ ಆಡಳಿತ ಮುಖ್ಯಸ್ಥರು ಮತ್ತು ಸಂಚಾರ ಪೊಲೀಸರನ್ನು ಒಳಗೊಂಡ ಒಂದು ವಾಟ್ಸಾಪ್ ಗ್ರೂಪ್ ರಚಿಸಲಾಗುವುದು. ಅದರಲ್ಲಿ ದೂರುಗಳು ಹಾಗೂ ಸಮಸ್ಯೆಗಳನ್ನು ಚರ್ಚಿಸಬಹುದು ಎಂದರು. 

ಈ ಸಭೆಯಲ್ಲಿ  ಶಿವಮೊಗ್ಗ ಸಂಚಾರ ವೃತ್ತದ ಸಿಪಿಐ ದೇವರಾಜ್, ಪಶ್ಚಿಮ ಸಂಚಾರ ಪೊಲೀಸ್ ಠಾಣೆಯ ಪಿಎಸ್‌ಐ ತಿರುಮಲೇಶ್, ಪೂರ್ವ ಸಂಚಾರ ಪೊಲೀಸ್ ಠಾಣೆಯ ಪಿಎಸ್‌ಐಗಳಾದ ನವೀನ್ ಕುಮಾರ್ ಮಠಪತಿ ಮತ್ತು ಶಿವಣ್ಣನವರ್ ಹಾಗೂ ಇತರ ಸಿಬ್ಬಂದಿ ಉಪಸ್ಥಿತರಿದ್ದರು.

ಇನ್ನಷ್ಟು ಸುದ್ದಿಗಳಿಗಾಗಿ : malendutoday.com

Shivamogga Traffic Safety , School Bus Guidelines , Police Meeting Shivamogga ,Student Transportation Rules

Share This Article
Leave a Comment

Leave a Reply

Your email address will not be published. Required fields are marked *