ಲೀಜ್​ ಹಣ ಕೇಳಿದ ವ್ಯಕ್ತಿಯ ಮೇಲೆ ಗುದ್ದಲಿಯಿಂದ ಹಲ್ಲೆ : ಏನಿದು ಪ್ರಕರಣ

prathapa thirthahalli
Prathapa thirthahalli - content producer

Shivamogga Crime news  : ಶಿವಮೊಗ್ಗದ ಮಾದರಿ ಪಾಳ್ಯದಲ್ಲಿ ಲೀಜ್ ಹಣ ಕೇಳಲು ಹೋದ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವ ಘಟನೆ ವರದಿಯಾಗಿದೆ.

ಈದ್ಗಾ ಮೈದಾನ ಕ್ರಾಸ್‌ನ ನಿವಾಸಿಯಾಗಿರುವ ವ್ಯಕ್ತಿಯೊಬ್ಬರು ತಮ್ಮ ಮನೆಯನ್ನು ಲೀಜ್‌ಗೆ ಹಾಕಿದ್ದ ಬಾಕಿ ₹1,50,000 ಹಣವನ್ನು ಕೇಳಲು ಹೋಗಿದ್ದರು. ಹಣವನ್ನು ಹಿಂದಿರುಗಿಸುವಂತೆ ಕೇಳಿದಾಗ, ಎದುರಿನ ವ್ಯಕ್ತಿ ಯಾವ ಹಣ ಕೊಡಬೇಕು ಎಂದು ಪ್ರಶ್ನಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ತಕ್ಷಣ ಅಲ್ಲಿದ್ದ ಗುದ್ದಲಿಯಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ನಂತರ ಅವರ ಪುತ್ರವೂ ಸಹ ಹಲ್ಲೆಗೊಳಗಾದ ವ್ಯಕ್ತಿಯ ಹೊಟ್ಟೆಗೆ ಕೈಯಿಂದ ಹೊಡೆದಿದ್ದಾನೆ ಎಂದು ಆರೋಪಿಸಲಾಗಿದೆ.  ಆಗ ನೋವಿನಿಂದ ಕೂಗಿಕೊಂಡಾಗ, ಸ್ಥಳೀಯರು ಮಧ್ಯ ಪ್ರವೇಶಿಸಿ ಗಲಾಟೆಯನ್ನು ಬಿಡಿಸಿದ್ದಾರೆ. ಗಾಯಗೊಂಡ  ವ್ಯಕ್ತಿಯನ್ನು  ತಕ್ಷಣ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Shivamogga Crime news

 

Share This Article