ಶಿವಮೊಗ್ಗ-ತೀರ್ಥಹಳ್ಳಿ ರಸ್ತೆ ಸಂಚಾರದಲ್ಲಿ ಈ ದಿನ ಮಾರ್ಗ ಬದಲಾವಣೆ: ಯಾವಾಗ, ಏಕೆ..?

ಶಿವಮೊಗ್ಗ | ಶಿವಮೊಗ್ಗದ ಹೊರವಲಯದ ಹರಕೆರೆ ಗ್ರಾಮದಲ್ಲಿ ಫೆಬ್ರವರಿ 15ರಂದು ನಡೆಯಲಿರುವ ಶ್ರೀ ರಾಮೇಶ್ವರ ಸ್ವಾಮಿಯ ಮಹಾ ಶಿವರಾತ್ರಿ ಹಬ್ಬದ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ, ಶಿವಮೊಗ್ಗ-ತೀರ್ಥಹಳ್ಳಿ ರಸ್ತೆಯ ಸಂಚಾರ ವ್ಯವಸ್ಥೆಯಲ್ಲಿ ತಾತ್ಕಾಲಿಕ ಬದಲಾವಣೆ ಮಾಡಲಾಗಿದೆ. ಈ ಕುರಿತು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. 

SUNCONTROL_FINAL-scaled

ಶಿವಮೊಗ್ಗ : 100 ರೂಪಾಯಿಗೆ ಸಿಗುತ್ತೆ 30 ಕೆಜಿ ಕುರಿ. ಎಲ್ಲಿ ,ಏನಿದು ಸುದ್ದಿ

ಜಾತ್ರೆಯ ಪ್ರಯುಕ್ತ ಫೆಬ್ರವರಿ 15ರ ಮುಂಜಾನೆ 4:00 ಗಂಟೆಯಿಂದ ಫೆಬ್ರವರಿ 16ರ ಮುಂಜಾನೆಯವರೆಗೆ ಶಿವಮೊಗ್ಗ ನಗರ ಮತ್ತು ಸುತ್ತಮುತ್ತಲ ಗ್ರಾಮಗಳಿಂದ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ಹರಕೆರೆಗೆ ಆಗಮಿಸುವ ನಿರೀಕ್ಷೆಯಿದೆ. ಇದರೊಂದಿಗೆ ಸೂಳೆಬೈಲು ಏರಿಯಾದ ಬೆಟ್ಟದ ಮಲ್ಲೇಶ್ವರ ದೇವಸ್ಥಾನಕ್ಕೂ ಸಾವಿರಾರು ಭಕ್ತರು ಭೇಟಿ ನೀಡಲಿದ್ದು, ಈ ಮಾರ್ಗದಲ್ಲಿ ವಾಹನ ದಟ್ಟಣೆ ನಿಯಂತ್ರಿಸಲು ಈ ಕ್ರಮ ಕೈಗೊಳ್ಳಲಾಗಿದೆ. 

ಶಿವಮೊಗ್ಗ-ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿಯು ಹರಕೆರೆ ಬಳಿ ಕಿರಿದಾಗಿರುವುದರಿಂದ, ಸಾರ್ವಜನಿಕರ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕಾಗಿ ಮೋಟಾರು ವಾಹನ ಕಾಯ್ದೆಯಡಿ ಈ ಬದಲಾವಣೆ ಮಾಡಲಾಗಿದೆ. ಪೊಲೀಸ್ ಅಧೀಕ್ಷಕರ ಪ್ರಸ್ತಾವನೆಯನ್ನು ಪುರಸ್ಕರಿಸಿರುವ ಜಿಲ್ಲಾಡಳಿತ, ಕೆಳಕಂಡ ಪರ್ಯಾಯ ಮಾರ್ಗಗಳನ್ನು ಸೂಚಿಸಿದೆ. 

ಪರ್ಯಾಯ ಸಂಚಾರ ಮಾರ್ಗಗಳು ಹೀಗಿವೆ

ಶಿವಮೊಗ್ಗದಿಂದ ತೀರ್ಥಹಳ್ಳಿ ಕಡೆಗೆ 

ಶಿವಮೊಗ್ಗದಿಂದ ಹೊರಡುವ ವಾಹನಗಳು ಗಜಾನನ ಗ್ಯಾರೇಜ್ ಪಕ್ಕದ ರಸ್ತೆಯ ಮೂಲಕ ಚಲಿಸಿ, ರಾಮಿನಕೊಪ್ಪ ಚಾನಲ್ ಮಾರ್ಗವಾಗಿ ಎನ್.ಹೆಚ್. ಆಸ್ಪತ್ರೆಯ ಪಕ್ಕದ ರಸ್ತೆಯನ್ನು ಸೇರಿ ಮುಂದೆ ಸಾಗಬೇಕು.

ತೀರ್ಥಹಳ್ಳಿಯಿಂದ ಶಿವಮೊಗ್ಗ ಕಡೆಗೆ 

ತೀರ್ಥಹಳ್ಳಿ ಕಡೆಯಿಂದ ಬರುವ ಎಲ್ಲಾ ವಾಹನಗಳು ಎನ್.ಹೆಚ್. ಆಸ್ಪತ್ರೆ ಪಕ್ಕದ ರಸ್ತೆಯ ಮೂಲಕ ರಾಮಿನಕೊಪ್ಪ ಚಾನಲ್ ಕ್ರಾಸ್ ತಲುಪಿ, ಅಲ್ಲಿಂದ ಗಜಾನನ ಗ್ಯಾರೇಜ್ ಮೂಲಕ ಶಿವಮೊಗ್ಗ ನಗರವನ್ನು ಪ್ರವೇಶಿಸಬೇಕು.

Shimoga-Thirthahalli Road Traffic Diversion

Shimoga-Thirthahalli Road Traffic Diversion Shimoga APMC License Renewal Deadline set for February 28 ವರ್ತಕರೇ ಗಮನಿಸಿ: ಲೈಸೆನ್ಸ್ ನವೀಕರಣಕ್ಕೆ ಫೆಬ್ರವರಿ 28 ರವರೆಗೆ ಮಾತ್ರ ಅವಕಾಶ
Shimoga-Thirthahalli Road Traffic Diversion
shivamogga car decor sun control house
shivamogga car decor sun control house
SUNCONTROL_FINAL-scaled
ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು