ಮಲೆನಾಡುಟುಡೆ ನ್ಯೂಸ್ : ಶಿವಮೊಗ್ಗ, ಆಗಸ್ಟ್ 29 2025 : ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತು ಕೂಡ ಮಳೆ ಮುಂದುವರಿದಿದೆ. ಈ ಸಂಬಂದ ಇಲ್ಲಿವರೆಗಿನ ಮಾಹಿತಿ ಪ್ರಕಾರ, ನಾಲ್ಕು ತಾಲ್ಲೂಕುಗಳಲ್ಲಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ ಎಂದು ಗೊತ್ತಾಗಿದೆ.
ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯಲ್ಲಿ ತಾಪಮಾನ ಬಹಳಷ್ಟು ಕುಗ್ಗಿದೆ. ಹಾಗೂ ಮಳೆಯು ನಿರಂತರವಾಗಿ ಸುರಿಯುತ್ತಿರುವುದರಿಂದ ಆರೋಗ್ಯ ಹದಗೆಡುವ ಆತಂಕವೂ ಮನೆ ಮಾಡಿದೆ. ಇತ್ತ ಇವತ್ತು ಮಳೆಯ ಆರ್ಭಟ ಹೆಚ್ಚಿರುವ ಮುನ್ಸೂಚನೆ ಹಾಗೂ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಶಾಲೆಗಳಿಗೆ ರಜೆ ನೀಡಲಾಗುತ್ತಿದೆ.

ಶಿವಮೊಗ್ಗ, ಸಾಗರ, ಹೊಸನಗರ, ಶಿಕಾರಿಪುರ, ಸೊರಬ ತಾಲ್ಲೂಕಿನ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳು ಮತ್ತು ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂಬ ಮಾಹಿತಿ ಇದೆ. ಈ ನಡುವೆ ತೀರ್ಥಹಳ್ಳಿಯಲ್ಲಿ ರಜೆ ನೀಡಲಾಗಿದೆ ಎನ್ನಲಾಗ್ತಿದೆಯಾದರೂ, ಅಧಿಕೃತವಾಗಿ ಸರ್ಕಾರಿ ಅಧಿಕಾರಿಗಳಿಂದ ಮಾಹಿತಿ ಲಭ್ಯವಾಗಿಲ್ಲ. ಅಧಿಕೃತ ಮಾಹಿತಿಯ ಹೊರತಾಗಿ ರಜೆ ಎಂಬ ಸಂದೇಶಗಳು ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ಇದನ್ನು ಮಲೆನಾಡು ಟುಡೆ ಖಾತರಿಪಡಿಸುವುದಿಲ್ಲ.
Shimoga School Holiday due to Heavy Rain
school closed in Shivamogga, rain holiday today, Malenadu rain update, school college holiday August 29, Sagara school holiday, Tirthahalli school holiday, malenadutoday news, Shivamogga news, latest news from Shivamogga , ಶಿವಮೊಗ್ಗ ಶಾಲಾ ರಜೆ,