ಮೊಹಮ್ಮದ್​​ ಜುನೈದ್​ ಹಾಗೂ ವಿರೇಶ್​ ನಾಪತ್ತೆ, ಎಲ್ಲಾದರು ಕಂಡರೆ ಪೊಲಿಸರಿಗೆ ಮಾಹಿತಿ ನೀಡಿ.

ಶಿವಮೊಗ್ಗ: ಡಿಸೆಂಬರ್​ ತಿಂಗಳಲ್ಲಿ ಭದ್ರಾವತಿ ಹಳೆ ನಗರ ಪೊಲೀಸ್​ ಠಾಣಾ ವ್ಯಾಪ್ತಿಯ ದುರ್ಗಿನಗರ ವಾಸಿ  ಜುನೈದ್ ಹಾಗೂ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗಾಜನೂರು ಜನತಾ ಕಾಲೋನಿ ವಾಸಿ ವಿರೇಶ್​ ಎಂಬುವವರು ನಾಪತ್ತೆಯಾಗಿದ್ದಾರೆ. ಈ ಎರಡು ಪ್ರತ್ಯೇಕ ಪ್ರಕರಣಕ್ಕೆ ಸಂಭಂದಿಸಿದಂತೆ ನಾಪತ್ತೆಯಾದವರ ಮಾಹಿತಿಗಾಗಿ ಪೊಲೀಸರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.

ಶಿವಮೊಗ್ಗ : 100 ರೂಪಾಯಿಗೆ ಸಿಗುತ್ತೆ 30 ಕೆಜಿ ಕುರಿ. ಎಲ್ಲಿ ,ಏನಿದು ಸುದ್ದಿ

Shimoga ಮೊಹಮದ್​ ಜುನೈದ್​ ನಾಪತ್ತೆ

26 ವರ್ಷದ ಮೊಹಮದ್ ಜುನೈದ್​ ಡಿಸೆಂಬರ್​ ತಿಂಗಳಲ್ಲಿ ಬೆಂಗಳೂರಿಗೆ ಹೋಗಿ ಬರುತ್ತೇನೆ ಎಂದು ಹೋದವರು ಇದುವರೆಗೂ ಬರಲಿಲ್ಲ.ವ್ಯಕ್ತಿಯ ಚಹರೆ : 5.5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಕೋಲುಮುಖ, ಗೋಧಿ ಮೈಬಣ್ಣ ಹೊಂದಿದ್ದು, ಮನೆಯಿಂದ ಹೋಗುವಾಗ ನೀಲಿ ಬಣ್ಣದ ಶರ್ಟ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.  

ಈ ವ್ಯಕ್ತಿ ಬಗ್ಗೆ ಸುಳಿವು ದೊರತಲ್ಲಿ ಭದ್ರಾವತಿ ಹಳೇನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

ವಿರೇಶ್​ ನಾಪತ್ತೆ 

ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗಾಜನೂರು ಜನತಾ ಕಾಲೋನಿ ವಾಸಿ ಲಕ್ಷ್ಮೀ  ಎಂಬುವವರ ಪತಿ ವೀರೇಶ್ ಎಂಬ 47 ವರ್ಷ ವ್ಯಕ್ತಿ 2025ರ ಡಿಸೆಂಬರ್‌ನಲ್ಲಿ ಬೇರೆ ಊರಿಗೆ ಕೂಲಿ ಕೆಲಸಕ್ಕೆಂದು ಹೋದವರು ಈವರೆಗೂ ವಾಪಾಸ್ಸಾಗಿರುವುದಿಲ್ಲ.ಈತನ ಚಹರೆ :  5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ ಹೊಂದಿರುತ್ತಾರೆ. 

ಈ ವ್ಯಕ್ತಿ ಬಗ್ಗೆ ಸುಳಿವು ದೊರತಲ್ಲಿ ತುಂಗಾನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

Shimoga Mohammed Junaid & Veeresh Missing

Shimoga
Shimoga Mohammed Junaid & Veeresh Missing
shivamogga car decor sun control house
shivamogga car decor sun control house
ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು