#SAVEVISL : ವಿಐಎಸ್​ಎಲ್​ ಕಾರ್ಖಾನೆಯು ಅಯೋಧ್ಯೆ ಇದ್ದಂತೆ | ಫ್ಯಾಕ್ಟರಿ ಉಳಿಸಲು ಧರಣಿ ಕುಳಿತ ವಿನಯ್ ಗುರೂಜಿ!| ಭದ್ರಾವತಿಯಲ್ಲಿ ಭುಗಿಲೆದ್ದ ಹೋರಾಟ

#SAVEVISL : ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ವಿಐಎಸ್​ಎಲ್​ ಕಾರ್ಖಾನೆಗೆ ಕೊನೆ ಬೀಗ ಹಾಕಿರೋದನ್ನ ಖಂಡಿಸಿ ಭದ್ರಾವತಿಯಲ್ಲಿ ಪ್ರತಿಭಟನೆ ನಡೆಯುತ್ತಿದೆ. ಕಾರ್ಖಾನೆಯ ಗುತ್ತಿಗೆನೌಕರರು ತಮ್ಮ ಬದುಕಿನ ಭವಿಷ್ಯ ಪ್ರಶ್ನೆ ಕೇಳುತ್ತಾ ಧರಣಿ ಕುಳಿತಿದ್ದಾರೆ. ಇವರ ಈ ಪ್ರತಿಭಟನೆ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. 

*Secretary, Ministry of Civil Aviation : ಶಿವಮೊಗ್ಗ ವಿಮಾನ ನಿಲ್ದಾಣದ ವಿಚಾರದಲ್ಲಿ ಹೊಸದೊಂದು ಅಪ್​ಡೇಟ್ಸ್​​ ಇಲ್ಲಿದೆ*

#SAVEVISL  :  ವಿಐಎಸ್​ಎಲ್​ ಕಾರ್ಖಾನೆಯು ಅಯೋಧ್ಯೆ ಇದ್ದಂತೆ | ಫ್ಯಾಕ್ಟರಿ ಉಳಿಸಲು ಧರಣಿ ಕುಳಿತ ವಿನಯ್ ಗುರೂಜಿ!|   

ಈ ನಡುವೆ ವಿಐಎಸ್ಎಲ್ ಕಾರ್ಖಾನೆ ಮುಂಭಾಗದಲ್ಲಿ ಗುತ್ತಿಗೆ ಕಾರ್ಮಿಕರು ಕೈಗೊಂಡಿರುವ  ಹೋರಾಟ  ಬೆಂಬಲಿಸಿ ಮಾತ ನಾಡಿದ  ಗೌರಿಗದ್ದೆ ಅವಧೂತ ವಿನಯ್ ಗುರೂಜಿ  ವಿಐಎಸ್‌ಎಲ್ ಕಾರ್ಖಾನೆಯನ್ನು ಉಳಿಸುವ ಹಾಗು ಕಾರ್ಮಿಕರ ಹಿತ ಕಾಪಾಡುವ ಜವಾಬ್ದಾರಿ ರಾಜ್ಯ ಮತ್ತು ಕೇಂದ್ರ ಸರಕಾರಗಳದ್ದಾಗಿದೆ. ಕೇಂದ್ರ ಸರಕಾರವು ಅಯೋಧ್ಯೆ ನಿರ್ಮಿಸಿದೆ. ಅದೇ ರೀತಿಯ ಲಕ್ಷಾಂತರ ಜನರಿಗೆ ಅನ್ನ ನೀಡಿದ ಕಾರ್ಖಾನೆಯೂ ಅಯೋಧ್ಯೆ ಇದ್ದಂತೆ ಎಂದು ಭಾವಿಸಿ ಉಳಿಸಬೇಕಿದೆ ಎಂದು ಸಲಹೆ ನೀಢಿದರು. ದೇಶಕ್ಕೆ ಕಬ್ಬಿಣ, ಉಕ್ಕು, ಸಿಮೆಂಟ್, ಸಕ್ಕರೆ, ಕಾಗದ ನೀಡಿದ ಊರನ್ನು ಪ್ರಧಾನಿ, ಮುಖ್ಯಮಂತ್ರಿ, ಸಂಸದರು, ಶಾಸಕರು ಕಾರ್ಖಾನೆಗಳನ್ನು ಉಳಿಸಬೇಕು ಎಂದು ಸಲಹೆ ನೀಡಿದರು. ತಾಲೂಕಿನ ಜನರು ಸಹ ಒಗ್ಗಟ್ಟಾಗಿ ಹೋರಾಡಿದರೆ ಕಾರ್ಖಾನೆಯನ್ನು ಉಳಿಸಬಹುದು. ನಾನು ಸಹ ಇನ್ನು ಮೂರಾ ಲ್ಕು ದಿನಗಳಲ್ಲಿ ಪ್ರಧಾನಿಗಳ ಬಳಿ ಮಾತನಾಡುತ್ತೇನೆ. ಹೊರ ದೇಶದ ಕಾರ್ಖಾನೆಗಳು ಕಂಪನಿಗಳು ನಮ್ಮ ದೇಶದಲ್ಲಿ ಉಳಿಯುತ್ತಿರುವಾಗ, ನಮ್ಮ ದೇಶದ ಕಂಪನಿಗಳನ್ನು ಉಳಿಸುವುದು ಆದ್ಯ ಕರ್ತವ್ಯ ಎಂದಿದ್ದಾರೆ. ನಾಡಿನ ಜಲ, ನೆಲ, ಭಾಷೆ, ಅನ್ನ ಗಾಳಿ ಸೇವಿಸುವ ಎಲ್ಲರೂ ವೈಯಕ್ತಿಕವಾಗಿ ಮಾಧ್ಯಮಗಳ ಬೆಂಬಲ ಪಡೆದು ಪತ್ರ ಚಳುವಳಿ ಮಾಡಬೇಕು. ಜೊತೆಗೆ ನ್ಯಾಯಾಂಗ ಎಲ್ಲವನ್ನೂ ಮೀರಿದ್ದು ಸುಪ್ರೀಂ ಕೋರ್ಟಿನಲ್ಲಿ ಕರ್ನಾಟಕದ ನ್ಯಾಯಾಧೀಶರು, ವಕೀಲರಿದ್ದಾರೆ. ಕಾರ್ಖಾನೆ ಮುಚ್ಚದಂತೆ ಅರ್ಜಿಯನ್ನು ಸಲ್ಲಿಸಬೇಕೆಂದು ಸಲಹೆ ನೀಡಿದ್ರು. 

Doddapete police station : ಕೋವಿಡ್​ ಟೈಂನಲ್ಲಿ ಕೋಟಿಗಟ್ಲೇ ವಂಚನೆ / ನಂಬಿಕೆ ದ್ರೋಹಕ್ಕೆ ಈಗ ದಾಖಲಾಯ್ತು ಕೇಸ್

#SAVEVISL  :  ವಿಐಎಸ್​ಎಲ್​ ಕಾರ್ಖಾನೆಯು ಅಯೋಧ್ಯೆ ಇದ್ದಂತೆ | ಭದ್ರಾವತಿಯಲ್ಲಿ ಭುಗಿಲೆದ್ದ ಹೋರಾಟ

ಇನ್ನೂ ಭದ್ರಾವತಿಯಲ್ಲಿ ನಡೆಯುತ್ತಿರುವ ಈ ಹೋರಾಟಕ್ಕೆ ವಿವಿಧ ಸಂಘಟನೆಗಳು ಬೆಂಬಲ ನೀಡಿವೆ. ದಿನದಿಂದ ದಿನಕ್ಕೆ ಹೋರಾಟ ಪ್ರಬಲಗೊಳ್ಳುತ್ತಿದೆ. ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಹೋರಾಟಕ್ಕೆ ರೈತ ಮುಖಂಡ ಎಚ್.ಆರ್ ಬಸವರಾಜಪ್ಪ ಹಾಗು ಆಮ್ ಆದ್ಮಿ ಪಾರ್ಟಿ ಶಿವಮೊಗ್ಗ ವಿಧಾನಕ್ಷೇತ್ರದ ಆಕ್ಷಾಂಕ್ಷಿ ಟಿ. ನೇತ್ರಾವತಿ ಬೆಂಬಲ ಸೂಚಿಸಿದ್ದಾರೆ. ಇನ್ನೊಂದೆಡೆ  ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಪ್ರಮುಖರು ಗುತ್ತಿಗೆ ಕಾರ್ಮಿಕರ ಹೋರಾಟಕ್ಕೆ ಬೆಂಬಲ ಸೂಚಿಸಿದ್ಧಾರೆ. ವಿಐಎಸ್‌ಎಲ್ ಕಾರ್ಖಾನೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ತಾಲೂಕು ಒಕ್ಕಲಿಗರ ಸಂಘ ಶ್ರೀ ಕ್ಷೇತ್ರ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಡಾ. ನಿರ್ಮಲನಂದನಾಥ ಸ್ವಾಮೀಜಿಯವರ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಒತ್ತಡ ತರಲು ಮುಂದಾಗಿದೆ. ಇಷ್ಟೆ ಅಲ್ಲದೆ ಪಕ್ಷಾತೀತ ಹೋರಾಟಕ್ಕೆ ಸಭೇ ನಡೆಸಲಾಗಿದ್ದು ಇವತ್ತು ಬೃಹತ್​ ಪ್ರತಿಭಟನೆ ನಡೆಯಲಿದೆ. ಇನ್ನೂ ವಿವಿಧ ಮುಖಂಡರು ಹೋರಾಟಕ್ಕೆ ಬೆಂಬಲ ನೀಡುತ್ತಿದ್ದು, ಕಾರ್ಖಾನೆಯನ್ನು ಉಳಿಸಿಕೊಳ್ಳುತ್ತೇವೆ ಎಂದು ಸ್ಥಳೀಯರು ಸಹ ಪ್ರತಿಭಟನೆಗೆ ಸಹಕಾರ ನೀಡುತ್ತಿದ್ದಾರೆ. 

 

Leave a Comment

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು