ಪೆಟ್ರೋಲ್ ಬಿಲ್ ಇಳಿಕೆ! ಲೀಟರ್​ಗೆ 20 ರೂಪಾಯಿ ಆಗುತ್ತಾ? ನೀರಿಗಿಂತ ಅಗ್ಗವಾಗುತ್ತಾ ಇಂದನ ದರ! ಏನಿದು ವರದಿ!?

ajjimane ganesh

Petrol and diesel ಡಿಸೆಂಬರ್,02, 2025 : ಮಲೆನಾಡು ಟುಡೆ ಸುದ್ದಿ :  ಯಾರು ಅಧಿಕಾರಕ್ಕೆ ಬಂದ್ರು ಪೆಟ್ರೋಲ್ ಡೀಸೆಲ್ ರೇಟೇನು ಕಡಿಮೆಯಾಗಲ್ಲ ಅನ್ನುತ್ತಿದ್ದವರಿಗೆ ದೊಡ್ಡ ಸುದ್ದಿಯೊಂದು ಅಚ್ಚರಿ ಮೂಡಿಸ್ತಿದೆ. ಹೀಗೂ ಆಗುಬಹುದಾ ಅಂತಾ ಕೇಳುವಂತೆ ಮಾಡುತ್ತಿದೆ ಈ ಸುದ್ದಿ. ಇಷ್ಟಕ್ಕೂ ಸುದ್ದಿ ಏನಂದರೆ, ಪೆಟ್ರೋಲ್, ಡೀಸೆಲ್ ಬೆಲೆ ನೀರಿನ ಬಾಟಲಿಗಿಂತಲೂ ಅಗ್ಗವಾಗಲಿದೆಯಂತೆ. ಹಂಗಂಗೆ, ಆಥರಕ್ಕೆ ಆಥರವೇ ಆದ ಪಕ್ಷದಲ್ಲಿ, ಮುಂದಿನ ಮೂರು ವರ್ಷಗಳಲ್ಲಿ ಪ್ರತಿ ಲೀಟರ್ ಕಚ್ಚಾ ತೈಲ 18 ರೂ.ಗೆ ಇಳಿಕೆಯಾಗಲಿದೆಯಂತೆ ಹಾಗಂತ  ಜೆ.ಪಿ. ಮಾರ್ಗನ್ ಸಂಸ್ಥೆ ವರದಿ ಮಾಡಿದೆ. Petrol and diesel expected to cost ₹20 per liter

Petrol and diesel expected to cost ₹20 per liter ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ 2027 ರ ವೇಳೆಗೆ ಕಚ್ಚಾ ತೈಲ ಬೆಲೆ ಲೀಟರ್‌ಗೆ 18 ರೂ.ಗೆ ಸಾಧ್ಯತೆ Petrol Diesel Price Drop Crude Oil May Fall to ₹18 per Liter by 2027

ಮಲೆನಾಡಲ್ಲಿ ಅಡಿಕೆ ದರ ಏರಿಳಿತ: ಶಿವಮೊಗ್ಗ, ಸಾಗರ ಸೇರಿದಂತೆ ಹಲವು APMC ಅಡಕೆ ರೇಟ್‌ಗಳು ಇಲ್ಲಿವೆ

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಮುಂದಿನ ದಿನಗಳಲ್ಲಿ ತೀವ್ರವಾಗಿ ಕಡಿಮೆಯಾಗಬಹುದು ಎಂಬ ಅಚ್ಚರಿಯ ವರದಿಯನ್ನು ಪ್ರಮುಖ ಜಾಗತಿಕ ಹಣಕಾಸು ದಲ್ಲಾಳಿ ಸಂಸ್ಥೆ ಜೆ.ಪಿ. ಮಾರ್ಗನ್  ವರದಿ ಮಾಡಿದೆ ಎಂದು ಭಾರತೀಯ ಸುದ್ದಿಸಂಸ್ಥೆಗಳು ರಿಪೋರ್ಟ್ ಮಾಡಿವೆ. ಅಲ್ಲದೆ ಹಾಗೆ ಆದಲ್ಲಿ ಒಂದು ಬಾಟಲಿ ನೀರಿಗಿಂತ ಪೆಟ್ರೋಲ್ ರೇಟ್ ಕಡಿಮೆಯಾಗಲಿದೆ ಅಂತಾ ವರದಿಯನ್ನು ವಿಶ್ಲೇಷಣೆ ಮಾಡಲಾಗುತ್ತಿದೆ. 

ಇನ್ನೂ ವರದಿಯ ಪ್ರಕಾರ, ಮಾರ್ಚ್ 2027 ರ ವೇಳೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರೆಲ್‌ಗೆ ಕೇವಲ 30 ಡಾಲರ್‌ಗಳವರೆಗೆ ಕುಸಿಯುವ ಸಾಧ್ಯತೆಯನ್ನು ಅಂದಾಜಿಸಲಾಗಿದೆ. ಸದ್ಯ ಪ್ರತಿ ಬ್ಯಾರೆಲ್‌ಗೆ ಶೇಕಡಾ 62 ರಷ್ಟಿರುವ ಬ್ರೆಂಟ್ ಕಚ್ಚಾ ತೈಲದ ಬೆಲೆಯು, ಮುಂದಿನ ದಿನಗಳಲ್ಲಿ ಶೇಕಡಾ 50 ಕ್ಕಿಂತಲೂ ಕಡಿಮೆಯಾಗುವ ನಿರೀಕ್ಷೆಯಿದೆ. ಈ ಬ್ರೆಂಟ್ ತೈಲವು ಜಾಗತಿಕವಾಗಿ ಶೇಕಡಾ 60-70 ರಷ್ಟು ಕಚ್ಚಾ ತೈಲದ ಬೆಲೆ ನಿಗದಿಗೆ ಮಾನದಂಡವಾಗಿರುವ ತೈಲವಾಗಿದ್ದು, ಇದು ಉತ್ತರ ಸಮುದ್ರದ ಬ್ರಿಟನ್ ಮತ್ತು ನಾರ್ವೆ ನಡುವಿನ ಪ್ರದೇಶಗಳಲ್ಲಿ ಉತ್ಪಾದನೆಯಾಗುತ್ತದೆ.

ಮಲೆನಾಡಲ್ಲಿ ಅಡಿಕೆ ದರ ಏರಿಳಿತ: ಶಿವಮೊಗ್ಗ, ಸಾಗರ ಸೇರಿದಂತೆ ಹಲವು APMC ಅಡಕೆ ರೇಟ್‌ಗಳು ಇಲ್ಲಿವೆ

ಭಾರತವು ತನ್ನ ಕಚ್ಚಾ ತೈಲದ ಅಗತ್ಯದಲ್ಲಿ ಶೇಕಡಾ 86 ರಷ್ಟನ್ನು ಇತರ ದೇಶಗಳಿಂದ ಆಮದು ಮಾಡಿಕೊಳ್ಳುವುದರಿಂದ, ಮುಂದಿನ ಭವಿಷ್ಯದ ಮುನ್ಸೂಚನೆ ಕುತೂಹಲಕ್ಕೆ ಕಾರಣವಾಗಿದೆ. ಇನ್ನೂ ಅಂಕಿ ಅಂಶಗಳನ್ನು ಸರಳವಾಗಿ ಲೆಕ್ಕ ಹಾಕಿದರೆ, ಒಂದು ಬ್ಯಾರೆಲ್ ಕಚ್ಚಾ ತೈಲವು 159 ಲೀಟರ್​ಗೆ ಸಮ. ಒಂದು ಡಾಲರ್‌ಗೆ 95 ರೂಪಾಯಿಗಳ ವಿನಿಮಯ ದರದಲ್ಲಿ ಲೆಕ್ಕ ಹಾಕಿದರೆ, 30 ಡಾಲರ್‌ಗೆ ಒಂದು ಬ್ಯಾರೆಲ್ ತೈಲದ ಬೆಲೆಯು 2,850 ರೂಪಾಯಿಗಳಾಗುತ್ತದೆ. ಅಂದರೆ, ಒಂದು ಲೀಟರ್ ಕಚ್ಚಾ ತೈಲದ ಬೆಲೆಯು ಕೇವಲ 17.92 ರೂಪಾಯಿ ಆದಂಗಾಯ್ತು. ಈ ರೇಟು ಒಂದು ಲೀಟರ್‌ ನೀರಿನ ಬಾಟಲಿ ರೇಟು 20 ರೂಪಾಯಿಗಿಂತಲೂ ಕಡಿಮೆ ಅನ್ನುವುದು ಸದ್ಯದ ತರ್ಕ  (Petrol and diesel expected to cost ₹20 per liter)

Petrol and diesel expected to cost ₹20 per liter ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ 2027 ರ ವೇಳೆಗೆ ಕಚ್ಚಾ ತೈಲ ಬೆಲೆ ಲೀಟರ್‌ಗೆ 18 ರೂ.ಗೆ ಸಾಧ್ಯತೆ Petrol Diesel Price Drop Crude Oil May Fall to ₹18 per Liter by 2027
Petrol and diesel expected to cost ₹20 per liter ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ 2027 ರ ವೇಳೆಗೆ ಕಚ್ಚಾ ತೈಲ ಬೆಲೆ ಲೀಟರ್‌ಗೆ 18 ರೂ.ಗೆ ಸಾಧ್ಯತೆ Petrol Diesel Price Drop Crude Oil May Fall to ₹18 per Liter by 2027

Petrol and diesel expected to cost ₹20 per liter

ಇನ್ನೂ ಹೀಗೆ ಕಚ್ಚಾತೈಲದ ರೇಟು ಕುಸಿತ ಆಗೋದಕ್ಕೆ ಕಾರಣವು ವರದಿಯಲ್ಲಿದೆ. ಮುಂದಿನ 2 ರಿಂದ 3 ವರ್ಷಗಳಲ್ಲಿ  ಪ್ರಪಂಚದೆಲ್ಲೆಡೆ ತೈಲದ ಬೇಡಿಕೆಯು ಹೆಚ್ಚಾಗುವುದರ ಜೊತೆ ತೈಲದ ಪೂರೈಕೆಯು ಜಾಸ್ತಿಯಾಗುತ್ತದೆಯಂತೆ.  ಅಲ್ಲದೆ ಓಪೆಕ್ (OPEC) ಸಂಘಟನೆಯಲ್ಲಿ ಇಲ್ಲದ ರಷ್ಯಾ, ಮೆಕ್ಸಿಕೋ, ಮಲೇಷ್ಯಾ, ಕಜಕಿಸ್ತಾನ್ ಮತ್ತು ಅಜರ್‌ಬೈಜಾನ್‌ನಂತಹ ದೇಶಗಳಿಂದ ತೈಲ ಪೂರೈಕೆಯು ಭಾರಿ ಪ್ರಮಾಣದಲ್ಲಿ ಹೆಚ್ಚಾಗುವ ನಿರೀಕ್ಷೆ ಇದೆಯಂತೆ. ಸಪ್ಲೆ ಜಾಸ್ತಿಯಾದರೆ ಡಿಮ್ಯಾಂಡ್ ಕಡಿಮೆಯಾಗುವ ಅರ್ಥಶಾಸ್ತ್ರದ ಬೇಸಿಕ್ ನಿಯಮದ ಅಡಿಯಲ್ಲಿಯೇ ವರದಿ ನೀಡಲಾಗಿದ್ದು, ಭವಿಷ್ಯದಲ್ಲಿ  ಇಂದನದ ದರ ಕಡಿಮೆಯಾಗಿ ಅನುಕೂಲವಾಗಲಿ ಎನ್ನುವ ಆಶಯ ಜನರ ಮನಸ್ಸಿಂದ ವ್ಯಕ್ತವಾಗುತ್ತಿದೆ.

Petrol and diesel expected to cost ₹20 per liter ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ 2027 ರ ವೇಳೆಗೆ ಕಚ್ಚಾ ತೈಲ ಬೆಲೆ ಲೀಟರ್‌ಗೆ 18 ರೂ.ಗೆ ಸಾಧ್ಯತೆ Petrol Diesel Price Drop Crude Oil May Fall to ₹18 per Liter by 2027
Petrol and diesel expected to cost ₹20 per liter ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ 2027 ರ ವೇಳೆಗೆ ಕಚ್ಚಾ ತೈಲ ಬೆಲೆ ಲೀಟರ್‌ಗೆ 18 ರೂ.ಗೆ ಸಾಧ್ಯತೆ Petrol Diesel Price Drop Crude Oil May Fall to ₹18 per Liter by 2027

ಶಿವಮೊಗ್ಗ, ಶಿರಸಿ ಮಾರುಕಟ್ಟೆಯಲ್ಲಿ ಅಡಿಕೆಗೆ ಬಂಪರ್! ಜಿಗಿದ ರೇಟ್! ಲೇಟೆಸ್ಟ್ ಮಾಹಿತಿ

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Shivamogga news live, Shimoga news kannada live, ಶಿವಮೊಗ್ಗ ನ್ಯೂಸ್ today, Shimoga news kannada epaper today, ಶಿವಮೊಗ್ಗ ನ್ಯೂಸ್ yesterday, Malenadu news live, ಮಲೆನಾಡು ಸುದ್ದಿ, ಶಿವಮೊಗ್ಗ ಜಿಲ್ಲಾ ವಾರ್ತೆ, 

Petrol and diesel expected to cost ₹20 per liter ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ 2027 ರ ವೇಳೆಗೆ ಕಚ್ಚಾ ತೈಲ ಬೆಲೆ ಲೀಟರ್‌ಗೆ 18 ರೂ.ಗೆ ಸಾಧ್ಯತೆ Petrol Diesel Price Drop Crude Oil May Fall to ₹18 per Liter by 2027

Share This Article