murder case : ಸುಹಾಸ್​ ಶೆಟ್ಟಿ ಹತ್ಯೆ ಖಂಡಿಸಿ ಶಿವಮೊಗ್ಗದಲ್ಲಿ ಆಕ್ರೋಶ, ಟಯರ್​ ಸುಟ್ಟು ಪ್ರತಿಭಟನೆ

prathapa thirthahalli
Prathapa thirthahalli - content producer

murder case : ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಯನ್ನು ಖಂಡಿಸಿ ರಾಜ್ಯದಾಧ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಇದರ ನಡುವೆ ಶಿವಮೊಗ್ಗದಲ್ಲಿ ಶಿವಪ್ಪನಾಯಕನ ಪ್ರತಿಮೆ ಬಳಿ ವಿಶ್ವ ಹಿಂದೂ ಪರಿಷತ್​ ಹಾಗೂ ಬಜರಂಗದಳದ ಕಾರ್ಯಕರ್ತರು ಶುಕ್ರವಾರ ಸಂಜೆ ಪ್ರತಿಭಟನೆ ನಡೆಸಿದರು.

ಈ ವೇಳೆ ಹಿಂದೂ ಕಾರ್ಯಕರ್ತರು ಸುಹಾಸ್​ ಶೆಟ್ಟಿ ಅಮರ್​ ರಹೇ, ಕೆಣಕದಿರಿ ಕೆಣಕದಿರಿ ಹಿಂದೂಗಳನ್ನು ಕೆಣಕದಿರಿ, ಎಂಬ ಘೋಷಣೆಯನ್ನು ಕೂಗಿದರು. ನಂತರ ಹತ್ಯೆಯನ್ನು ಖಂಡಿಸಿ ಪ್ರತಿಮೆ ಬಳಿ ಟಯರ್​ನ್ನು  ಸುಡಲಾಯಿತು. ಸುಹಾಸ್ ಶೆಟ್ಟಿ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನಾಚರಣೆ ನಡೆಸಲಾಯಿತು.

- Advertisement -

ಈ ವೇಳೆ  ಸುರೇಶ್​ ಬಾಬು ಮಾತನಾಡಿ ಸುಹಾಸ್ ಶೆಟ್ಟಿ ಗೆ ರೌಡಿ ಶೀಟರ್ ಎಂದು ಹಣೆ ಪಟ್ಟಿ ಕಟ್ಟಲಾಗಿದೆ. ಈತ ಲವ್​ ಜಿಹಾದ್ ವಿರುದ್ಧ, ಗೋವುಗಳ ರಕ್ಷಣೆ ಮತ್ತು ಮತಾಂತರದ ವಿರುದ್ಧ ಕೆಲಸ ಮಾಡಿದ್ದರು.  ಅವರ ಹತ್ಯೆ ನಡೆದಿರುವು ಖಂಡನೀಯ. ಇನ್ನಾದರೂ ಮುಸ್ಲಿಮರು ನಮ್ಮ ಬ್ರದರ್​​​ ಎನ್ನುವ ಭಾವನೆಯನ್ನು ಬಿಡಿ. ಇಲ್ಲವಾದರೆ ಸುಹಾಸ್ ಶೆಟ್ಟಿ ತರನೇ ನಿಮಗೂ ಸಂಭವಿಸಲಿದೆ ಎಂದರು.

murder case :  ರಾಜ್ಯ ಸರ್ಕಾರ ಪೊಲೀಸ್​ ಇಲಾಖೆಯನ್ನು ಸರಿಯಾಗಿ ನಿಭಾಯಿಸಲಿ | ವಾಸುದೇವ್

ವಿಶ್ವ ಹಿಂದೂ ಪರಿಷತ್​ನ ಜಿಲ್ಲಾಧ್ಯಕ್ಷ ವಾಸುದೇವ್​ ಮಾತನಾಡಿ ಭಾರತ ಮಾತೆಯ ಒಡಲು ಭದ್ರವಾಗಿದೆ ಅದನ್ನ ಅಲ್ಲಾಡಿಸಲು ಯಾರಿಗೂ ಆಗುವುದಿಲ್ಲ. ಭಾರತಾಂಭೆಯ ರಕ್ಷಣೆಗೆ ಸುಹಾಸ್ ಶೆಟ್ಟಿ ಪ್ರವೀಣ್ ನೆಟ್ಟಾರು, ಹರ್ಷನಂತಹವರು ಮತ್ತೆ ಮತ್ತೆ ಹುಟ್ಟಿ ಬರುತ್ತಾರೆ ಎಂದರು. ಇದೇ ವೇಳೆ ರಾಜ್ಯ ಸರ್ಕಾರ ತನ್ನ ತಪ್ಪನ್ನು ಅರ್ಥೈಸಿಕೊಂಡು ಪೊಲೀಸ್ ಇಲಾಖೆಯನ್ನ ಸರಿಯಾಗಿ ನಿಬಾಯಿಸಲಿ ಎಂದು ಆಗ್ರಹಿಸಿದರು.

TAGGED:
Share This Article
prathapa thirthahalli
content producer
Follow:
Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
Leave a Comment

Leave a Reply

Your email address will not be published. Required fields are marked *