ಮಾರ್ಕ್​ ಬಗ್ಗೆ ಮಾತನಾಡುವಾಗ ಮನಸ್ಸಿನ ಒಳಗೇ ಮಾತಾಡ್ಕೋಬೇಕು: ಹೇಗಿದೆ ಮಾರ್ಕ್​ ಇಂಟ್ರೊ ಟೀಸರ್?

prathapa thirthahalli
Prathapa thirthahalli - content producer

Mark intro teaser :  ಕಿಚ್ಚ ಸುದೀಪ್​ ಅಭಿನಯದ ಬಹು ನಿರೀಕ್ಷಿತ ಚಿತ್ರ ಮಾರ್ಕ್​’ನ ಇಂಟ್ರೊ ಟೀಸರ್​ ನಿನ್ನೆ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗ್ತಾ ಇದೆ.

1 ನಿಮಿಷ 13 ಸೆಕೆಂಡ್​ ಇರುವ ಈ ಟೀಸರ್​ ನೋಡುವಾಗ ಇದೊಂದು ಪಕ್ಕಾ ಮಾಸ್​ ಮೂವಿ ಎಂಬುದು ತಿಳಿದುಬರುತ್ತದೆ. ಟೀಸರ್​ನ ಆರಂಭದಲ್ಲಿ ಗ್ಯಾಂಗ್​ಸ್ಟರ್‌ಗಳಿಗೆಲ್ಲ ಬಾಸ್​ ಆಗಿರುವ ವಿಲನ್​ ಒಬ್ಬ, ಕಿಚ್ಚ ಸುದೀಪ್​ಗೆ ಸುಪಾರಿ ಕೊಡುವ ದೃಶ್ಯವಿದೆ. ಆನಂತರ ಹೊಸ ಹೇರ್​ ಸ್ಟೈಲ್​ನಲ್ಲಿ, ಅತ್ಯುತ್ತಮ ಬಿಜಿಎಂ  ನೊಂದಿಗೆ ಫೈಟ್​ ಮೂಲಕ ಕಿಚ್ಚನ ಎಂಟ್ರಿ ಆಗುತ್ತದೆ. ಈ ಎಲ್ಲಾ ಅಂಶಗಳು ಮಾರ್ಕ್​ ಚಿತ್ರವು ಒಂದು ಪಕ್ಕಾ ಮಾಸ್​ ಎಂಟರ್‌ಟೈನರ್​ ಎಂಬುದನ್ನು ತೋರಿಸುತ್ತವೆ.

ಈ ಹಿಂದೆ ಸುದೀಪ್​ ಅಭಿನಯದ ‘ಮ್ಯಾಕ್ಸ್​’ ಚಿತ್ರವನ್ನು ನಿರ್ದೇಶಿಸಿದ್ದ ಶಿವ ಕಾರ್ತಿಕೇಯ ಅವರೇ ಈ ಚಿತ್ರಕ್ಕೂ ಆಕ್ಷನ್​-ಕಟ್​ ಹೇಳಿದ್ದಾರೆ. ‘ಮ್ಯಾಕ್ಸ್​’ ಚಿತ್ರದಲ್ಲಿ ಒಂದು ರಾತ್ರಿ ನಡೆಯುವ ದೃಶ್ಯಗಳನ್ನು ಪ್ರಮುಖ ಎಳೆಯನ್ನಾಗಿಟ್ಟುಕೊಂಡು ಯಶಸ್ಸು ಕಂಡಿದ್ದ ನಿರ್ದೇಶಕರು, ‘ಮಾರ್ಕ್​’ ಚಿತ್ರದಲ್ಲಿಯೂ ಸಹ ಅದೇ ತಂತ್ರವನ್ನು ಉಪಯೋಗಿಸುತ್ತಿದ್ದಾರೆ ಎಂಬುದು ಟೀಸರ್ ನೋಡಿದಾಗ ತಿಳಿದುಬರುತ್ತದೆ. ಈ ಹಿಂದಿನ ಚಿತ್ರದಲ್ಲಿ ಸುದೀಪ್​ ಇನ್‌ಸ್ಪೆಕ್ಟರ್‌ ಅರ್ಜುನ್‌ ಮಹಾಕ್ಷಯ್‌ ಎಂಬ ಪಾತ್ರದಲ್ಲಿ ನಟಿಸಿದ್ದರು. ಆದರೆ ಈ ‘ಮಾರ್ಕ್’ ಚಿತ್ರದಲ್ಲಿ ಮಾಸ್​​ ಫೈಟಿಂಗ್​ ದೃಶ್ಯಗಳು ಹೆಚ್ಚಾಗಿ ಇದ್ದು, ಇದು ಯಾವರೀತಿ ಮೂವಿ ಎಂದು ಕಾದು ನೋಡಬೇಕಿದೆ.

ಇನ್ನು ಟೀಸರ್​ನಲ್ಲಿ ಬಹು ದೊಡ್ಡ ತಾರಾಬಳಗವನ್ನೇ ನೋಡಬಹುದು. ಗೋಪಾಲ್​ ಕೃಷ್ಣ ದೇಶ್​ಪಾಂಡೆ, ತಮಿಳಿನ ಪ್ರಸಿದ್ದ ಹಾಸ್ಯನಟ ಯೋಗಿ ಬಾಬು, ಡ್ರ್ಯಾಗನ್​ ಮಂಜು ಸೇರಿದಂತೆ ಇನ್ನಿತರೇ ಕಲಾವಿದರು ಕಾಣಿಸಿಕೊಂಡಿದ್ದಾರೆ.

ಮಾರ್ಕ್ ಚಿತ್ರವು ಡಿಸೆಂಬರ್​ 25 ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್​ ಆಗುತ್ತಿದ್ದು, ‘ಮ್ಯಾಕ್ಸ್​’ ಚಿತ್ರದಂತೆಯೇ ಬಾಕ್ಸ್​ ಆಫೀಸ್​ನಲ್ಲಿ ಮೋಡಿ ಮಾಡುತ್ತಾ ಎಂಬುದನ್ನು ಕಾದು ನೋಡಬೇಕಿದೆ.

Mark intro teaser

Share This Article