ಕಾರ್ಗಿಲ್ ವಿಜಯೋತ್ಸವ: ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಮೋಟಾರ್ ಸೈಕಲ್ ರ್ಯಾಲಿ

ajjimane ganesh

Kargil Vijay Diwas ಕಾರ್ಗಿಲ್ ವಿಜಯೋತ್ಸವ: ಶಿವಮೊಗ್ಗದಲ್ಲಿ ಜುಲೈ 26 ರಂದು ಬೈಕ್ ರ್ಯಾಲಿ

Kargil Vijay Diwas ಶಿವಮೊಗ್ಗ: ಕಾರ್ಗಿಲ್ ವಿಜಯೋತ್ಸವದ (Kargil Vijay Diwas) ಅಂಗವಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಶಿವಮೊಗ್ಗ ಜಿಲ್ಲಾ ಸಂಘದ  ವತಿಯಿಂದ ಜುಲೈ 26, 2025ರ ಶುಕ್ರವಾರದಂದು ಶಿವಮೊಗ್ಗದಲ್ಲಿ ಬೃಹತ್ ಬೈಕ್ ರ್ಯಾಲಿಯನ್ನು ಆಯೋಜಿಸಲಾಗಿದೆ. ಈ ಬಗ್ಗೆ ಶಿವಮೊಗ್ಗ ಜಿಲ್ಲಾ ಸಂಘದ ಜಿಲ್ಲಾಧ್ಯಕ್ಷ ಆರ್. ಮೋಹನ್ ಕುಮಾರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ರ್ಯಾಲಿಯು ಬೆಳಿಗ್ಗೆ 8:00 ಗಂಟೆಗೆ ಪ್ರಾರಂಭವಾಗಲಿದೆ.

Kargil Vijay Diwas Bike Rally in Shivamogga on July 26

Kargil Vijay Diwas Bike Rally in Shivamogga on July 26

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಶಿವಮೊಗ್ಗ ಜಿಲ್ಲಾ ಘಟಕ, ನಗರದ ವಿವಿಧ ಸಂಘ ಸಂಸ್ಥೆಗಳು (Organizations) ಮತ್ತು ಮಾಜಿ ಸೈನಿಕರ ಸಂಘಟನೆಗಳ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ರ್ಯಾಲಿಯು ಸರ್ಕಾರಿ ನೌಕರರ ಭವನದಿಂದ ಆರಂಭವಾಗಿ ಶಿವಮೂರ್ತಿ ವೃತ್ತ, ದೈವಜ್ಞ ಕಲ್ಯಾಣ ಮಂಟಪ ವೃತ್ತ, ಆದಿಚುಂಚನಗಿರಿ ವೃತ್ತ, ಬಸ್ ನಿಲ್ದಾಣ, ಅಮೀರ್ ಅಹ್ಮದ್ ವೃತ್ತ, ಸೀನಪ್ಪ ಶೆಟ್ಟಿ ವೃತ್ತ, ಮಹಾವೀರ ವೃತ್ತದ ಮಾರ್ಗದಲ್ಲಿ ಸಾಗಿ ಸೈನಿಕ ಸ್ಮಾರಕ ಉದ್ಯಾನವನದಲ್ಲಿ (Soldiers’ Memorial Park) ಮುಕ್ತಾಯಗೊಳ್ಳಲಿದೆ.

ಕಾರ್ಗಿಲ್ ಯುದ್ಧಭೂಮಿಯಲ್ಲಿ ವೀರಮರಣವನ್ನಪ್ಪಿದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲು ಮತ್ತು ಭಾರತದ ಸೈನ್ಯಶಕ್ತಿಗೆ ಅಭಿನಂದಿಸಲು ಆಸಕ್ತ ಸಂಘಟನೆಗಳ ಸದಸ್ಯರು, ಪದಾಧಿಕಾರಿಗಳು, ಸಮಾಜದ ಸಮಸ್ತ ನಾಗರಿಕರು, ಯುವಕರು ಮತ್ತು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ರ್ಯಾಲಿಯಲ್ಲಿ ಪಾಲ್ಗೊಳ್ಳುವಂತೆ ಆರ್. ಮೋಹನ್ ಕುಮಾರ್ ಮನವಿ ಮಾಡಿದ್ದಾರೆ. 

ಕಾರ್ಗಿಲ್ ವಿಜಯೋತ್ಸವ, ಶಿವಮೊಗ್ಗ,ಸರ್ಕಾರಿ ನೌಕರರ ಸಂಘ, Bike Rally, Government Employees Association, #IndianArmy #TributeToSoldiers 

today news paper july 24 today news paper  july 24
today news paper  july 24
Share This Article