Shivamogga | Feb 6, 2024 | ಗ್ರಾಮ ಒನ್ ಕೇಂದ್ರಗಳಲ್ಲಿ ಖಾಲಿ ಇರುವ ಸ್ಥಾನಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಈ ಸಂಬಂಧ ಶಿವಮೊಗ್ಗ ವಾರ್ತಾ ಇಲಾಖೆ ಮೂಲಕ ಪ್ರಕಟಣೆ ನೀಡಲಾಗಿದೆ.
ಶಿವಮೊಗ್ಗ: ಜಿಲ್ಲೆಯಲ್ಲಿ ಗ್ರಾಮ ಒನ್ ಕೇಂದ್ರಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಸೇವೆ ನೀಡಲು ಆಸಕ್ತಿ ಇರುವ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಗ್ರಾಮ ಒನ್ ಯೋಜನೆ ಸರ್ಕಾರದ ಮಹತ್ವಕಾಂಕ್ಷಿಯ ಯೋಜನೆಯಾಗಿದೆ. ಗ್ರಾಮೀಣ ಜನತೆಗೆ ವಿವಿಧ ಸೇವೆಗಳನ್ನು ಒದಗಿಸಲು ಏಕಗವಾಕ್ಷಿ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ.
ಗ್ರಾಮ್ ಒನ್ ಕೇಂದ್ರ
ಸರ್ಕಾರಿ ಸೇವೆಗಳನ್ನು ಪಡೆಯಲು ಗ್ರಾಮೀಣರ ಜನರ ಅಲೆದಾಟ ತಪ್ಪಿಸುವ ನಿಟ್ಟಿನಲ್ಲಿ ಗ್ರಾಮ ಮಟ್ಟದಲ್ಲಿ ಆರಂಭಗೊಂಡ ಗ್ರಾಮ ಒನ್ ಯೋಜನೆ ಜಿಲ್ಲೆಯಲ್ಲಿ ಉತ್ತಮವಾಗಿ ಸ್ಪಂದನೆ ವ್ಯಕ್ತವಾಗುತ್ತಿದೆ. ಈ ಯೋಜನೆಗೆ ಸಂಬಂಧಿಸಿದಂತೆ ಜಿಲ್ಲೆಯ ವಿವಿಧೆಡೆ ಹುದ್ದೆಗಳು ಖಾಲಿ ಇವೆ..
ಹುದ್ದೆಗಳು
ಭ್ರದ್ರಾವತಿ ತಾಲೂಕಿನ ಕೊಮ್ಮನಹಳ್ಳಿ -1, ಹೊಸನಗರ ತಾಲೂಕಿನ ತಿರ್ನಿವೆ -1, ಬೆಳ್ಳೂರು -1, ಸಾಗರ ತಾಲೂಕಿನ ತಳವಾಟ-1 ಮಾಳ್ವೆ- 1 ಚೆನ್ನಗೊಂಡ-1, ಕುದರೂರು-1, ಶಿಕಾರಿಪುರ ತಾಲೂಕಿನ ಅಂಬಾರಗೊಪ್ಪ-1, ಶಿವಮೊಗ್ಗ ತಾಲೂಕಿನ ಗಾಜನೂರು-1, ಸೊರಬ ತಾಲೂಕಿನ ಮುದ್ದಿದೊಡ್ಡಿ ಕೊಪ್ಪ-1, ತೀರ್ಥಹಳ್ಳಿ ತಾಲೂಕಿನ ಬಸವಾನಿ-1 ಆಗುಂಬೆ-1 ಹುದ್ದೆಗಳು ಖಾಲಿ ಇವೆ.
ಆಸಕ್ತರು https:/www.Karnatakaone.gov.in/ Public/GramaOneFranchisee Terms ನಲ್ಲಿ ಲಾಗಿನ್ ಆಗಿ ಇದೇ ಫೆಬ್ರವರಿ 15 ರೊಳಗೆ ಅರ್ಜಿ ಸಲ್ಲಿಸಬಹುದು ಎಂದು ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ ತಿಳಿಸಿದ್ದಾರೆ.