Indigo airlines : ಶಿವಮೊಗ್ಗ-ಬೆಂಗಳೂರು ಇಂಡಿಗೋ ವಿಮಾನ ಹಾರಾಟದಲ್ಲಿ ತಾತ್ಕಾಲಿಕ ಬದಲಾವಣೆ : ವಾರದಲ್ಲಿ 4 ದಿನ ಮಾತ್ರ ಹಾರಾಟ
Indigo airlines : ಶಿವಮೊಗ್ಗ, ಮಲೆನಾಡಿನ ಪ್ರಮುಖ ವಿಮಾನ ಸೇವೆಯಾದ ಶಿವಮೊಗ್ಗ-ಬೆಂಗಳೂರು ನಡುವಿನ ಇಂಡಿಗೋ ವಿಮಾನ ಹಾರಾಟವನ್ನು ವಾರದಲ್ಲಿ ಮೂರು ದಿನ ಕಡಿತಗೊಳಿಸಲಾಗಿದೆ. ಆಗಸ್ಟ್ ತಿಂಗಳ ಅಂತ್ಯದ ವರೆಗೆ ಈ ವಿಮಾನವು ವಾರದಲ್ಲಿ ಕೇವಲ ನಾಲ್ಕು ದಿನ ಮಾತ್ರ ಸಂಚರಿಸಲಿದೆ.
ಅಧಿಕಾರಿಗಳ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಮಳೆ ಹಾಗೂ ದಟ್ಟ ಮೋಡ ಇರುವುದರಿಂದ ವಿಮಾನ ಹಾರಾಟಕ್ಕೆ ತೊಂದರೆಯುಂಟಾಗುತ್ತಿದೆ, ಈ ಹಿನ್ನಲೆ ತಾತ್ಕಾಲಿಕವಾಗಿ ವಿಮಾನ ಹಾರಾಟವನ್ನು ವಾರದಲ್ಲಿ 4 ದಿನ ಅಂದರೆ ಸೋಮವಾರ, ಬುಧವಾರ, ಶುಕ್ರವಾರ ಮತ್ತು ಭಾನುವಾರ ಮಾತ್ರ ಹಾರಾಟ ನಡೆಸಲು ಇಂಡಿಗೋ ಏರ್‌ಲೈನ್ಸ್ ನಿರ್ಧಾರ ಕೈಗೊಂಡಿದೆ ಎಂದಿದ್ದಾರೆ.
ಆದರೆ ಕೆಲ ಮಾಧ್ಯಮಗಳ ವರದಿಗಳ ಪ್ರಕಾರ ಗುಜರಾತ್‌ನ ಅಹಮದಾಬಾದ್‌ನಲ್ಲಿ ಜೂನ್ 12ರಂದು ಸಂಭವಿಸಿದ ವಿಮಾನ ದುರಂತದ ಹಿನ್ನೆಲೆಯಲ್ಲಿ ನಾಗರಿಕ ವಿಮಾನಯಾನ ಜಾರಿ ನಿರ್ದೇಶನಾಲಯ (DGCA) ದೇಶಾದ್ಯಂತ ವಿಮಾನಗಳ ಸುರಕ್ಷತಾ ಆಡಿಟ್ ನಡೆಸುತ್ತಿದೆ. ಈ ಸುರಕ್ಷತಾ ಪರಿಶೀಲನೆಯ ಕಾರಣದಿಂದಾಗಿ ಇಂಡಿಗೋ ಏರ್‌ಲೈನ್ಸ್ ಈ ನಿರ್ಧಾರ ಕೈಗೊಂಡಿದೆ ಎಂದುತಿಳಿದು ಬಂದಿದೆ.
