Holehonnuru ಶಿವಮೊಗ್ಗ : ವಿಶೇಷ ಅಂದರೆ, ಇತ್ತೀಚೆಗೆ ನಡೆದ ಜನರೊಂದಿಗೆ ಜನತಾದಳ ಕಾರ್ಯಕ್ರಮದ ನಡುವೆ ಕಳ್ಳರು ತಮ್ಮ ಕರಾಮತ್ತು ತೋರಿಸಿ, ಮೊಬೈಲ್ ಹಾಗೂ ದುಡ್ಡು ಕದ್ದು ಪರಾರಿಯಾಗಿದ್ದಾರೆ. ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿಯವರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜನ ಸಮೂಹದ ನಡುವೆ ಹಲವರ ಜೇಬಿಗೆ ಕತ್ತರಿಬಿದ್ದಿದ್ದು, ಕಾರ್ಯಕ್ರಮದ ರಶ್ನ್ನೆ ಕಳ್ಳರು ಬಂಡವಾಳ ಮಾಡಿಕೊಂಡಿದ್ದಾರೆ.

Holehonnuru
ಮಲ್ಲಾಪುರದ ಶ್ರೀಗುಡ್ಡದ ಮಲ್ಲೇಶ್ವರ ಸಮುದಾಯ ಭವನದಲ್ಲಿ ಇತ್ತೀಚೆಗೆ ಜೆಡಿಎಸ್ ಕಾರ್ಯಕರ್ತರ ಸಮಾವೇಶ ನಡೆದಿತ್ತು. ಈ ಕಾರ್ಯಕ್ರಮಕ್ಕೆ ಆಗಮಿಸಿದ್ದ ನಿಖಿಲ್ ಕುಮಾರಸ್ವಾಮಿ ಅವರನ್ನು ಹೊಳೆಹೊನ್ನೂರು ಕೈಮರ ಸರ್ಕಲ್‌ನಲ್ಲಿ ಸ್ವಾಗತಿಸಲು ಜೆಡಿಎಸ್ನ ನೂರಾರು ಕಾರ್ಯಕರ್ತರು ಗುಂಪು ಸೇರಿಸಿದ್ದರು. ನಿಖಿಲ್ ಕುಮಾರಸ್ವಾಮಿಯವರನ್ನು ಬರಮಾಡಿಕೊಂಡು ಅವರಿಗೆ ಹಾರ ಅಭಿನಂದನೆಯನ್ನು ಸಹ ಸಲ್ಲಿಸಿದ್ದರು. ಈ ಸಂದರ್ಭದಲ್ಲಿಯೇ ಕಳ್ಳರು ಹಲವರು ಜೇಬಿನಲ್ಲಿದ್ದ ಮೊಬೈಲ್ ಹಾಗೂ ಹಣವನ್ನು ಲಪಟಾಯಿಸಿದ್ದಾರೆ.
ನಿಖಿಲ್ ಕುಮಾರಸ್ವಾಮಿಯವರು ತೆರಳಿದ ಬಳಿಕ ಅಲ್ಲಿದ್ದ ಜನರಿಗೆ ಈ ಬಗ್ಗೆ ಅರಿವಿಗೆ ಬಂದಿದೆ. ಸ್ಥಳೀಯ ಮಾಹಿತಿ ಪ್ರಕಾರ, ಅಂದಾಜು 20 ಕ್ಕೂ ಹೆಚ್ಚು ಮೊಬೈಲ್ ಕಳ್ಳತನವಾಗಿದೆ ಎನ್ನಲಾಗಿದೆ. ಅಲ್ಲದೆ ಸುಮಾರು 30 ಸಾವಿರ ರೂಪಾಯಿಗೂ ಹೆಚ್ಚು ಹಣ ಕಳುವಾಗಿದೆ ಎಂದು ಹೇಳಲಾಗುತ್ತಿದೆ.


ನಿಖಿಲ್ ಕುಮಾರಸ್ವಾಮಿ, ಕಳ್ಳತನ, ಹೊಳೆಹೊನ್ನೂರು, ಮೊಬೈಲ್ ಕಳ್ಳತನ, Nikhil Kumaraswamy, Theft, Mobile theft, #TheftIncident #JDS #Shivamogga
