ಸ್ಯಾಂಡಲ್‌ವುಡ್ ನಟ ಹರೀಶ್ ರಾಯ್ ನಿಧನ

prathapa thirthahalli
Prathapa thirthahalli - content producer

Harish Rai passes away ಬೆಂಗಳೂರು: ಕನ್ನಡ ಚಿತ್ರರಂಗದ ಜನಪ್ರಿಯ ಪೋಷಕ ನಟ ಮತ್ತು ಖಳನಟ ಹರೀಶ್ ರಾಯ್ ಅವರು ಕ್ಯಾನ್ಸರ್‌ನಿಂದಾಗಿ ನಿಧನರಾಗಿದ್ದಾರೆ. ಕಳೆದ ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಕೃಷಿ ತೋಟಗಾರಿಕಾ ಮೇಳ

ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ಹರೀಶ್ ರಾಯ್ ಅವರು ಕೊನೆಯುಸಿರೆಳೆದಿದ್ದಾರೆ. ಅವರಿಗೆ ಪತ್ನಿ ಮತ್ತು ಇಬ್ಬರು ಮಕ್ಕಳಿದ್ದಾರೆ.

- Advertisement -

ಸ್ಯಾಂಡಲ್‌ವುಡ್‌ನಲ್ಲಿ ಎರಡು ದಶಕಗಳಿಗಿಂತ ಹೆಚ್ಚು ಕಾಲ ತಮ್ಮ ನಟನಾ ಪಯಣವನ್ನು ನಡೆಸಿದ್ದ ಹರೀಶ್ ರಾಯ್, ವಿವಿಧ ಪಾತ್ರಗಳ ಮೂಲಕ ಪ್ರೇಕ್ಷಕರ ಮನಸ್ಸಿನಲ್ಲಿ ನೆಲೆಸಿದ್ದರು. ಮುಖ್ಯವಾಗಿ, ಬ್ಲಾಕ್‌ಬಸ್ಟರ್ ಚಲನಚಿತ್ರ ‘ಕೆಜಿಎಫ್’ ನಲ್ಲಿನ ಅವರ ಪಾತ್ರವು ಅವರಿಗೆ ಅಪಾರ ಜನಪ್ರಿಯತೆಯನ್ನು ತಂದುಕೊಟ್ಟಿತ್ತು. ಈ ಸಿನಿಮಾದ ಬಳಿಕ ಅವರು ಅಭಿಮಾನಿಗಳಲ್ಲಿ ‘ಕೆಜಿಎಫ್ ಚಾಚಾ’ ಎಂದೇ ಖ್ಯಾತರಾಗಿದ್ದರು.

Harish Rai passes away

ಕೃಷಿ ತೋಟಗಾರಿಕಾ ಮೇಳ
Share This Article