ಶಿವಮೊಗ್ಗ | ಶಿವಮೊಗ್ಗದ ಸಮೀಪದ ಗಾಜನೂರಿನಲ್ಲಿ ನಡೆದ ಗಾರೆ ಮೇಸ್ತ್ರಿ ಶ್ರೀನಿವಾಸ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ SP ನಿಖಿಲ್ ಬಿ ಪ್ರತಿಕ್ರಿಯೆ ನೀಡಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಗಾಜನೂರಿನ ಸೊಸೈಟಿ ಬಳಿ ನಿನ್ನೆ ರಾತ್ರಿ ಈ ಘಟನೆ ನಡೆದಿದೆ. ಮೃತ ಶ್ರೀನಿವಾಸ್ (36) ಗ್ರಾಮದಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದರು. ಪ್ರಾಥಮಿಕ ತನಿಖೆಯ ಪ್ರಕಾರ, ಶ್ರೀನಿವಾಸ್ ಮತ್ತು ಅವರ ಇಬ್ಬರು ಸ್ನೇಹಿತರು ಕುಳಿತಿದ್ದಾಗ ಕುಡಿತದ ಅಮಲಿನಲ್ಲಿ ಜಗಳ ಆರಂಭವಾಗಿದೆ. ಈ ಜಗಳ ವಿಕೋಪಕ್ಕೆ ತಿರುಗಿ ಸ್ನೇಹಿತರೇ ಈ ಕೃತ್ಯ ಎಸಗಿದ್ದಾರೆ.
ಶಿವಮೊಗ್ಗ-ತೀರ್ಥಹಳ್ಳಿ ರಸ್ತೆ ಸಂಚಾರದಲ್ಲಿ ಈ ದಿನ ಮಾರ್ಗ ಬದಲಾವಣೆ: ಯಾವಾಗ, ಏಕೆ..?
ಶ್ರೀನಿವಾಸ್ ಅವರು ಪ್ರತಿದಿನ ಕುಡಿದು ಕಿರಿಕ್ ಮಾಡುತ್ತಿದ್ದರು ಎನ್ನಲಾಗಿದ್ದು, ನಿನ್ನೆ ರಾತ್ರಿ ಕೂಡ ತನ್ನ ಪರಿಚಯದವರ ಜೊತೆ ಕಿರಿಕ್ ಮಾಡಿಕೊಂಡಿದ್ದಾರೆ. ಈ ವೇಳೆ ಆಕ್ರೋಶಗೊಂಡ ಇಬ್ಬರು ಸ್ನೇಹಿತರು ಕಲ್ಲು ಎತ್ತಿ ಹಾಕಿ ಹಾಗೂ ಹರಿತವಾದ ಬ್ಲೇಡ್‌ನಿಂದ ಇರಿದು ಶ್ರೀನಿವಾಸ್ ಅವರನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ.
ಪರಿಚಯಸ್ಥರ ನಡುವೆ ಕುಡಿತದ ವಿಷಯಕ್ಕೆ ಜಗಳವಾಗಿ ಈ ಹತ್ಯೆ ನಡೆದಿದೆ. ಇಬ್ಬರು ಸ್ನೇಹಿತರ ಮೇಲೆ ಕೊಲೆಯ ಶಂಕೆ ಇದ್ದು, ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದಿದ್ದಾರೆ.
Gajanuru Case Update SP Nikhil B


