FREE Aadhaar Biometric Update for Kids ಮಕ್ಕಳ ಆಧಾರ್ ಬಯೋಮೆಟ್ರಿಕ್ ನವೀಕರಣ ಕಡ್ಡಾಯ: 7 ವರ್ಷದೊಳಗಿನವರಿಗೆ ಉಚಿತ, ನಂತರ ಶುಲ್ಕ!
FREE Aadhaar Biometric Update for Kids ಶಿವಮೊಗ್ಗ: ಜುಲೈ 16, 2025 / ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಮಕ್ಕಳ ಆಧಾರ್ ಬಯೋಮೆಟ್ರಿಕ್ ನವೀಕರಣದ ಕುರಿತಾದ ಮುಖ್ಯವಾದ ಪ್ರಕಟಣೆ ನೀಡಿದೆ. 7 ವರ್ಷದ ಮಗುವಿನ ಬಯೋಮೆಟ್ರಿಕ್ ವಿವರಗಳನ್ನು ನವೀಕರಿಸದಿದ್ದರೆ, ಪೋಷಕರು ತಕ್ಷಣವೇ ಅಂತಹ ಮಕ್ಕಳ ಆಧಾರ್ ಅಪ್ಡೇಟ್ ಮಾಡಿಸಬೇಕು ಎಂದು ತಿಳಿಸಿದೆ. 5 ರಿಂದ 7 ವರ್ಷ ವಯಸ್ಸಿನ ಮಕ್ಕಳಿಗೆ ಆಧಾರ್ ಬಯೋಮೆಟ್ರಿಕ್‌ಗಳನ್ನು ನವೀಕರಿಸುವಂತೆ ಯುಐಡಿಎಐ ಪೋಷಕರಿಗೆ ತಿಳಿಸಿದೆ.

ಆಧಾರ್ ದಾಖಲಾತಿ ಕೇಂದ್ರಗಳಲ್ಲಿ 7 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಬಯೋಮೆಟ್ರಿಕ್ ನವೀಕರಣಗಳು ಸಂಪೂರ್ಣ ಉಚಿತ. ಏಳು ವರ್ಷ ಕಳೆದರೂ ಸಹ ಬಯೋಮೆಟ್ರಿಕ್ ವಿವರಗಳನ್ನು ನವೀಕರಿಸದಿದ್ದರೆ, ಆಧಾರ್ ಸಂಖ್ಯೆಯನ್ನು ನಿಷ್ಕ್ರಿಯಗೊಳಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದೆ. 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಆಧಾರ್ ನೀಡುವಾಗ ಅವರ ಬಯೋಮೆಟ್ರಿಕ್ ವಿವರಗಳನ್ನು ತೆಗೆದುಕೊಂಡಿರುವುದಿಲ್ಲ.ಹಾಗಾಗಿ 5-7 ವರ್ಷದೊಳಗಿನ ಮಕ್ಕಳ ಆಧಾರ್ ಬಯೋಮೆಟ್ರಿಕ್‌ಗಳನ್ನು ಅಪ್ಡೇಟ್ ಕಡ್ಡಾಯವಾಗಿರುತ್ತದೆ.
ಅಂದಹಾಗೆ, ಕೇಂದ್ರ ಸರ್ಕಾರ ಏಳು ವರ್ಷ ತುಂಬಿದ ಮಕ್ಕಳ ಆಧಾರ್ ಅಪ್ಡೇಟ್ ಆಗದಿರುವುದನ್ನು ಪರಿಶೀಲಿಸುತ್ತಿದ್ದು, ಈ ಸಂಬಂಧ, ಪೋಷಕರ ಫೋನ್ನಂಬರ್ಗಳಿಗೆ ಮೆಸೇಜ್ ಕಳುಹಿಸುವ ವ್ಯವಸ್ಥೆ ಮಾಡುತ್ತಿದೆ. ಇನ್ನೂ 7 ವರ್ಷ ಪೂರ್ಣಗೊಂಡ ಮಕ್ಕಳಿಗೆ ಆಧಾರ್ ಅಪ್ಡೇಟ್ಗೆ ನೂರು ರೂಪಾಯಿ ಶುಲ್ಕ ವಿಧಿಸುತ್ತಿದೆ. ನಿಮ್ಮ ಮನೆಯಲ್ಲಿಯೂ 5 ವರ್ಷ ದಾಟಿದ ಮಕ್ಕಳಿದ್ದರೆ ನೀವು ಮಕ್ಕಳನ್ನು ಸಮೀಪದ ಆಧಾರ್ ಕೇಂದ್ರಗಳಿಗೆ ತೆರಳಿ, ಮಕ್ಕಳ ಬಯೋಮೆಟ್ರಿಕ್ ಅಪ್ಡೇಟ್ ನೀಡುವುದು ಉತ್ತಮ

ನಿಮ್ಮ ಮಗುವಿನ ಆಧಾರ್ ಬಯೋಮೆಟ್ರಿಕ್ಸ್ ನವೀಕರಿಸಲು ಹೀಗೆ ಮಾಡಿ:
FREE Aadhaar Biometric Update for Kids
ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ:
ಮಗುವಿನ ಆಧಾರ್ ಕಾರ್ಡ್ ಒಯ್ಯಿರಿ.
ಜನನ ಪ್ರಮಾಣಪತ್ರ ಅಥವಾ ಶಾಲಾ ಐಡಿಯಂತಹ ಪೋಷಕ ದಾಖಲೆಗಳು ಬೇಕಾಗಬಹುದು (ಅವಶ್ಯಕತೆ ಇದ್ದಲ್ಲಿ)
ನವೀಕರಣ ಫಾರ್ಮ್ ಅನ್ನು ಭರ್ತಿ ಮಾಡಿ
ಅಗತ್ಯವಿರುವ ವಿವರಗಳನ್ನು ಒದಗಿಸಿ ಮತ್ತು ಹೊಸ ಬೆರಳಚ್ಚುಗಳು, ಐರಿಸ್ ಸ್ಕ್ಯಾನ್, ಇತ್ಯಾದಿಗಳನ್ನು ಸಲ್ಲಿಸಿ. ಛಾಯಾಚಿತ್ರವನ್ನು ಸಹ ನವೀಕರಿಸಬೇಕಾಗಬಹುದು.
ಪ್ರಕ್ರಿಯೆ ಪೂರ್ಣಗೊಂಡ ನಂತರ ರಸೀದಿಯನ್ನು ಪಡೆಯಿರಿ
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ https://chat.whatsapp.com/CTxKdbjEu0zLLQD5RTVkRt
TODAY ವಾಟ್ಸ್ಯಾಪ್ ಚಾನಲ್ ಫಾಲೋ ಮಾಡಿ https://whatsapp.com/channel/0029Va9I91s3LdQVrdq7yl1h
ಶಿವಮೊಗ್ಗದ ವಿಶೇಷ ಸುದ್ದಿಗಳಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ : https://malenadutoday.com/category/shivamogga/
Mandatory Aadhaar Biometric Update for Children
UIDAI warns parents to update Aadhaar biometrics for children aged 5-7 years,
ಮಕ್ಕಳ ಆಧಾರ್, ಬಯೋಮೆಟ್ರಿಕ್ ನವೀಕರಣ, UIDAI, ಆಧಾರ್ ಕಾರ್ಡ್, ಉಚಿತ ಆಧಾರ್, ಆಧಾರ್ ಶುಲ್ಕ, ಆಧಾರ್ ಅಪ್‌ಡೇಟ್, ಆಧಾರ್ ನೋಂದಣಿ, ಆಧಾರ್ ನಿಷ್ಕ್ರಿಯ, ಆಧಾರ್ ಸೇವಾ ಕೇಂದ್ರ, ಕಡ್ಡಾಯ ಬಯೋಮೆಟ್ರಿಕ್ ನವೀಕರಣ, ಮಕ್ಕಳ ಆಧಾರ್ ನಿಯಮಗಳು, Children Aadhaar, Biometric Update, UIDAI, Aadhaar Card, Free Aadhaar, Aadhaar Fees, Aadhaar Update, Aadhaar Enrollment, Aadhaar Inactivation, Aadhaar Seva Kendra, Mandatory Biometric Update, Child Aadhaar Rules, #AadhaarUpdate #UIDAI #ChildAadhaar #BiometricUpdate #AadhaarEnrollment #FreeAadhaar #DigitalIndia #AadhaarServices #ParentingTips #Karnataka